‘ಲಕ್ಷ್ಮೀ ಬಾರಮ್ಮ’ ಅಂತ್ಯದ ಬಗ್ಗೆ ಅಧಿಕೃತ ಘೋಷಣೆ; ಹೊಸ ಧಾರಾವಾಹಿ ‘ಮುದ್ದು ಸೊಸೆ’ ಯಾವಾಗಿನಿಂದ?

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಅಂತ್ಯಗೊಳ್ಳುತ್ತಿದೆ. ಏಪ್ರಿಲ್ 11 ರಂದು ಅಂತಿಮ ಸಂಚಿಕೆ ಪ್ರಸಾರವಾಗುವ ಸಾಧ್ಯತೆಯಿದೆ. ಇದರ ಬದಲಿಗೆ ಬಿಗ್ ಬಾಸ್ ಖ್ಯಾತಿಯ ತ್ರಿವಿಕ್ರಂ ನಟನೆಯ ಮುದ್ದು ಸೊಸೆ ಪ್ರಸಾರವಾಗಲಿದೆ. ಲಕ್ಷ್ಮೀ ಬಾರಮ್ಮದ ಅಂತ್ಯ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ .

‘ಲಕ್ಷ್ಮೀ ಬಾರಮ್ಮ’ ಅಂತ್ಯದ ಬಗ್ಗೆ ಅಧಿಕೃತ ಘೋಷಣೆ; ಹೊಸ ಧಾರಾವಾಹಿ ‘ಮುದ್ದು ಸೊಸೆ’ ಯಾವಾಗಿನಿಂದ?
ಲಕ್ಷ್ಮೀ ಬಾರಮ್ಮ-ಮುದ್ದು ಸೊಸೆ

Updated on: Apr 01, 2025 | 8:41 AM

ಶಮಂತ್ ಬ್ರೋ ಗೌಡ, ಭೂಮಿಕಾ ರಮೇಶ್ (Bhoomika Ramesh) ನಟನೆಯ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಅಂತಿಮ ಹಂತಕ್ಕೆ ಬಂದಿದೆ. ಕಲರ್ಸ್ ಕನ್ನಡದಲ್ಲಿ ತನ್ನ ಕೊನೆಯ ಸಂಚಿಕೆಗಳನ್ನು ಪ್ರಸಾರ ಮಾಡಲು ಧಾರಾವಾಹಿ ರೆಡಿ ಆಗಿದೆ. ಮುಂದಿನ ದಿನಗಳಲ್ಲಿ ಇದೇ ಸಮಯಕ್ಕೆ ಬಿಗ್ ಬಾಸ್ ಖ್ಯಾತಿಯ ತ್ರಿವಿಕ್ರಂ ನಟನೆಯ ‘ಮುದ್ದು ಸೊಸೆ’ ಧಾರಾವಾಹಿ ಪ್ರಸಾರ ಕಾಣಲಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಅಧಿಕೃತ ಘೋಷಣೆ ಮಾಡಿದೆ. ‘ಲಕ್ಷ್ಮೀ ಬಾರಮ್ಮ’ ಕೊನೆ ಆಗುತ್ತಿರುವ ವಿಚಾರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಈಗಾಗಲೇ ಬರೋಬ್ಬರಿ 597 ಎಪಿಸೋಡ್​ಗಳು ಪ್ರಸಾರ ಕಂಡಿವೆ. ಇನ್ನು ಕೆಲವೇ ಎಪಿಸೋಡ್​ಗಳಲ್ಲಿ ಧಾರಾವಾಹಿ ಕೊನೆ ಆಗಲಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಅಧಿಕೃತ ಘೋಷಣೆ ಮಾಡಿದೆ. ‘ಕನ್ನಡಿಗರ ಮನ ಮುಟ್ಟಿದ, ಜನ ಮೆಚ್ಚಿದ ಕತೆ  ಲಕ್ಷ್ಮೀ ಬಾರಮ್ಮ ಅಂತಿಮ ಸಂಚಿಕೆಗಳನ್ನ ಮಿಸ್ ಮಾಡ್ಲೇಬೇಡಿ’ ಎಂದು ಕಲರ್ಸ್ ಕನ್ನಡ ಪೋಸ್ಟ್ ಮಾಡಿದೆ.

ಇದನ್ನೂ ಓದಿ
‘ಸಂಬಂಧಗಳು ಐಸ್​​​ಕ್ರೀಮ್​ನಂತೆ, ಆಸ್ವಾದಿಸಿ ಮುಂದೆ ಸಾಗಬೇಕು’; ವಿಜಯ್ ವರ್ಮ
‘ಲೇ ಕಳಸ್ರಯ್ಯ ಇವಳನ್ನ’; ಸುಕೃತಾ ಮೇಲೆ ರವಿಚಂದ್ರನ್ ಸಿಟ್ಟಾಗಿದ್ದೇಕೆ?
ಸಿಕಂದರ್ ಗಳಿಕೆಯಲ್ಲಿ ಏರಿಕೆ; ಆದರೂ ನಿಂತಿಲ್ಲ ಸಲ್ಮಾನ್ ಖಾನ್ ಸಿನಿಮಾ ಪರದಾಟ
ಚಿತ್ರರಂಗದ ಕರಾಳ ಮುಖ ತೆರೆದಿಟ್ಟ ಅಜಯ್ ರಾವ್; ಎದುರಿಸುವ ಸಮಸ್ಯೆಗಳೇನು?

‘ಲಕ್ಷ್ಮೀ ಬಾರಮ್ಮ’ ಕೊನೆಗೊಂಡ ಬಳಿಕ ಆ ಸಮಯದಲ್ಲಿ ‘ಮುದ್ದು ಸೊಸೆ’ ಧಾರಾವಾಹಿ ಪ್ರಸಾರ ಕಾಣಲಿದೆ. ‘ಬಿಗ್ ಬಾಸ್’ ಮೂಲಕ ತ್ರಿವಿಕ್ರಂ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಅವರಿಗೆ ಬಿಗ್ ಬಾಸ್ ಪೂರ್ಣಗೊಳ್ಳುತ್ತಿದ್ದಂತೆ ಈ ಧಾರಾವಾಹಿಯಲ್ಲಿ ನಟಿಸೋ ಆಫರ್ ಸಿಕ್ಕಿದೆ. ಈಗಾಗಲೇ ಧಾರಾವಾಹಿಯ ಶೂಟ್ ಭರದಿಂದ ಸಾಗುತ್ತಿದೆ. ಈ ಧಾರಾವಾಹಿಯಲ್ಲಿ ತ್ರಿವಿಕ್ರಂ ಅವರು ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಲೇಜು ಓದೋ ಹುಡುಗಿಯನ್ನು ವಿವಾಹ ಆಗೋ ಕಥೆ ಇದಾಗಿದೆ.

ಇದನ್ನೂ ಓದಿ: ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಗೆ ಕೊನೆಯ ದಿನದ ಶೂಟ್; ಫೋಟೋ ವೈರಲ್

ಈ ಧಾರಾವಾಹಿ ಏಪ್ರಿಲ್ 14ರಿಂದ ರಾತ್ರಿ 7.30ಕ್ಕೆ ಪ್ರಸಾರ ಕಾಣಲಿದೆ. ಅಂದರೆ, ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಏಪ್ರಿಲ್ 11ಕ್ಕೆ ತನ್ನ ಅಂತಿಮ ಸಂಚಿಕೆಯನ್ನು ಪ್ರಸಾರ ಮಾಡುವ ಸಾಧ್ಯತೆ ಇದೆ. ಧಾರಾವಾಹಿಯನ್ನು ಕೊನೆ ಮಾಡುತ್ತಿರುವ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಮೂಡಿದೆ. ‘ಕಥೆಗಾರನಿಗೆ ಕಾವೇರಿ ಅನ್ನೋ ಕೆಟ್ಟ ಪಾತ್ರದ ವ್ಯಾಮೋಹ ದಿಂದ ಇವತ್ತು ಸೂಪರ್ ಹಿಟ್ ಧಾರಾವಾಹಿ ಈ ಹಂತಕ್ಕೆ ಬಂದಿದೆ. ವೈಷ್ಣವ್ ವರ್ಸ್ಟ್​ ಹೀರೋ. ಲಕ್ಷ್ಮಿ ಹಾಗೂ ಕೀರ್ತಿಗೆ ಹೆಚ್ಚಿನದ್ದು ಸಿಗಬೇಕು’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:40 am, Tue, 1 April 25