ಟಾಪ್ ಐದರಲ್ಲಿ ಸ್ಥಾನ ಪಡೆದ ಹೊಸ ಧಾರಾವಾಹಿಗಳು; ಇಲ್ಲಿದೆ ಟಿಆರ್ಪಿ ವಿವರ
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಲಕ್ಷ್ಮಿ ನಿವಾಸ’ ಧಾರಾವಾಹಿಯಲ್ಲಿ ಶ್ವೇತಾ, ಅಶೋಕ್ ಜಂಬೆ, ಲಕ್ಷ್ಮಿ ಹೆಗಡೆ, ದಿವ್ಯಶ್ರೀ, ಚಂದನಾ, ದಿಶಾ ಮದನ್ ಮೊದಲಾದವರು ನಟಿಸುತ್ತಿದ್ದಾರೆ. ಈ ಧಾರಾವಾಹಿ ಎಲ್ಲರ ಮೆಚ್ಚುಗೆ ಪಡೆದಿದೆ. ಈ ಧಾರಾವಾಹಿ ಟಿಆರ್ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
ಕನ್ನಡ ಧಾರಾವಾಹಿಗಳ 14ನೇ ವಾರದ ಟಿಆರ್ಪಿ ಹೊರ ಬಿದ್ದಿದೆ. ಇತ್ತೀಚೆಗೆ ಆರಂಭ ಆಧ ಧಾರಾವಾಹಿಗಳು ಟಾಪ್ ಐದರಲ್ಲಿ ಸ್ಥಾನ ಪಡೆದುಕೊಂಡಿವೆ ಅನ್ನೋದು ವಿಶೇಷ. ಟಿಆರ್ಪಿ ರೇಸ್ನಲ್ಲಿ ಏರಿಳಿತ ಉಂಟಾಗೋದು ಕಾಮನ್. ಆದರೆ, ಕಳೆದ ಕೆಲವು ವಾರಗಳಿಂದ ‘ಲಕ್ಷ್ಮಿ ನಿವಾಸ’ (Lakshmi Nivasa) ಧಾರಾವಾಹಿ ಮೊದಲ ಸ್ಥಾನದಲ್ಲಿದ್ದು ಗಮನ ಸೆಳೆಯುತ್ತಿದೆ. ಕಿರುತೆರೆ ಪ್ರೇಕ್ಷಕರಿಗೆ ಈ ಧಾರವಾಹಿ ಇಷ್ಟ ಆಗುತ್ತಿದೆ.
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಲಕ್ಷ್ಮಿ ನಿವಾಸ’ ಧಾರಾವಾಹಿಯಲ್ಲಿ ಶ್ವೇತಾ, ಅಶೋಕ್ ಜಂಬೆ, ಲಕ್ಷ್ಮಿ ಹೆಗಡೆ, ದಿವ್ಯಶ್ರೀ, ಚಂದನಾ, ದಿಶಾ ಮದನ್ ಮೊದಲಾದವರು ನಟಿಸುತ್ತಿದ್ದಾರೆ. ಈ ಧಾರಾವಾಹಿ ಎಲ್ಲರ ಮೆಚ್ಚುಗೆ ಪಡೆದಿದೆ. ಈ ಧಾರಾವಾಹಿ ಟಿಆರ್ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಅದ್ದೂರಿ ಬಜೆಟ್ನಲ್ಲಿ ಈ ಧಾರಾವಾಹಿ ಸಿದ್ಧವಾಗಿದೆ. ಮಧ್ಯಮ ವರ್ಗದ ಕಥೆಯನ್ನು ಈ ಧಾರಾವಾಹಿ ಹೊಂದಿದೆ. ಇತ್ತೀಚೆಗೆ ಈ ಧಾರಾವಾಹಿ ಪ್ರಸಾರ ಆರಂಭಿಸಿದೆ.
ಎರಡನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ. ಉಮಾಶ್ರೀ ಮೊದಲಾದವರು ನಟಿಸುತ್ತಿರುವ ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಉತ್ತಮ ಟಿಆರ್ಪಿ ಪಡೆದು ಎರಡನೇ ಸ್ಥಾನದಲ್ಲಿ ಇದೆ. ‘ಸೀತಾ ರಾಮ’ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ಈ ಧಾರಾವಾಹಿ ಟಿಆರ್ಪಿಯಲ್ಲಿ ಮುನ್ನಡೆ ಸಾಧಿಸಿದೆ. ಸದ್ಯ ಅಶೋಕ್ ಹಾಗೂ ಆಕೆಯ ಗೆಳೆತಿಯ ಜೊತೆ ಮದುವೆ ನಡೆಯುತ್ತಿದೆ. ಇದರಿಂದ ಟಿಆರ್ಪಿ ಮತ್ತಷ್ಟು ಹೆಚ್ಚೋ ಸಾಧ್ಯತೆ ಇದೆ.
ಇದನ್ನೂ ಓದಿ: ಕಲರ್ಸ್ ಕನ್ನಡ ಧಾರಾವಾಹಿಗೆ ಎಂಟ್ರಿಕೊಟ್ಟ ವಿನಯ್ ಗೌಡ; ಇಲ್ಲಿದೆ ವಿವರ
ಇತ್ತೀಚೆಗೆ ಆರಂಭ ಆದ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿದೆ. ಈ ಧಾರಾವಾಹಿ ಜನರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಜೀ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಐದನೇ ಸ್ಥಾನದಲ್ಲಿ ಇದೆ. ‘ಅಮೃತಧಾರೆ’ ಧಾರಾವಾಹಿ ಐದನೇ ಸ್ಥಾನದಲ್ಲಿ ಇದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ