ಬಿಗ್ ಬಾಸ್​ಗೆ ಈಗಷ್ಟೇ ಎಂಟ್ರಿ ಪಡೆದ ಲಾಯರ್​ ಜಗದೀಶ್​ನ ಹೊರಹಾಕಲು ನಡೆದಿದೆ ಚರ್ಚೆ

ವೃತ್ತಿಯಲ್ಲಿ ವಕೀಲರಾದ ಜಗದೀಶ್ ಹೆಸರು ಇತ್ತೀಚೆಗೆ ಸಾಕಷ್ಟು ಚರ್ಚೆಯಲ್ಲಿ ಇತ್ತು. ಅದಕ್ಕೆ ಕಾರಣ ಆಗಿದ್ದು ಅವರು ದರ್ಶನ್ ಪರ ಧ್ವನಿ ಎತ್ತಿದ್ದು. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅವರನ್ನು ಸುಖಾಸುಮ್ಮನೆ ಸಿಕ್ಕಿಸಲಾಗಿದೆ ಎಂದು ಅವರು ಹೇಳಿದ್ದರು.

ಬಿಗ್ ಬಾಸ್​ಗೆ ಈಗಷ್ಟೇ ಎಂಟ್ರಿ ಪಡೆದ ಲಾಯರ್​ ಜಗದೀಶ್​ನ ಹೊರಹಾಕಲು ನಡೆದಿದೆ ಚರ್ಚೆ
ಜಗದೀಶ್

Updated on: Sep 29, 2024 | 8:06 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ವಕೀಲ ಜಗದೀಶ್ ಅವರ ಎಂಟ್ರಿ ಆಗಿದೆ. ಅವರು ದೊಡ್ಮನೆಯಲ್ಲಿ ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಎನ್ನುವ ಕುತೂಹಲ ಮೂಡಿದೆ. ವಕೀಲರಾಗಿರೋ ಪ್ರಶಾಂತ್ ಸಂಭರ್ಗಿ ಅವರು ಬಿಗ್ ಬಾಸ್ ಮನೆಗೆ ತೆರಳಿ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದರು. ಅದೇ ರೀತಿಯ ಹವಾನ ಜಗದೀಶ್ ಸೃಷ್ಟಿ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಈ ಮಧ್ಯೆ ಅವರ ವಿರುದ್ಧ ಅಪಸ್ವರ ಎದ್ದಿದೆ.

ವೃತ್ತಿಯಲ್ಲಿ ವಕೀಲರಾದ ಜಗದೀಶ್ ಹೆಸರು ಇತ್ತೀಚೆಗೆ ಸಾಕಷ್ಟು ಚರ್ಚೆಯಲ್ಲಿ ಇತ್ತು. ಅದಕ್ಕೆ ಕಾರಣ ಆಗಿದ್ದು ಅವರು ದರ್ಶನ್ ಪರ ಧ್ವನಿ ಎತ್ತಿದ್ದು. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅವರನ್ನು ಸುಖಾಸುಮ್ಮನೆ ಸಿಕ್ಕಿಸಲಾಗಿದೆ ಎಂದು ಅವರು ಹೇಳಿದ್ದರು. ಜೊತೆಗೆ ದರ್ಶನ್ ಅವರನ್ನು ಹೊರಕ್ಕೆ ತರೋಕೆ ಪ್ರತಿಭಟನೆ ಮಾಡಬೇಕು ಎಂದು ಅವರ ಕರೆ ನೀಡಿದ್ದರು. ಇದಕ್ಕಾಗಿ ಹಣದ ಸಹಾಯ ಬೇಕು ಎಂದು ಕೂಡ ಕೇಳಿದ್ದರು. ಅವರು ನಡೆದುಕೊಂಡ ರೀತಿ ದರ್ಶನ್ ಫ್ಯಾನ್ಸ್​ಗೆ ಖುಷಿ ಮೂಡಿಸಿತ್ತು.

ನಂತರ ಅವರೇ ಪ್ರತಿಭಟನೆ ಏನೋ ಮಾಡಿದರು. ‘ಬಿರಿಯಾನಿ ಹಾಗೂ ಹಣ ನೀಡದೇ ಇದ್ದಿದ್ದಕ್ಕೆ ದರ್ಶನ್ ಫ್ಯಾನ್ಸ್ ಬಂದಿಲ್ಲ’ ಎಂದು ಹೇಳಿ ಸುದ್ದಿ ಆದರು. ಅವರು ಇಷ್ಟೆಲ್ಲ ಮಾಡಿದ್ದು ಪ್ರಚಾರಕ್ಕೆ ಅನ್ನೋದು ಗೊತ್ತಾಗಿದೆ. ಹೌದು, ಬಿಗ್ ಬಾಸ್ ಸೇರೋದಕ್ಕೂ ಮೊದಲು ಒಂದಷ್ಟು ಪ್ರಚಾರ ಪಡೆಯಲು ಅವರು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ’ ಸ್ಪರ್ಧಿಗಳ ಸಂಭಾವ್ಯ ಪಟ್ಟಿ; ಇದೆ ಕೆಲವು ಅಚ್ಚರಿಯ ಹೆಸರುಗಳು

ರೇಣುಕಾ ಸ್ವಾಮಿ ಕೊಲೆ ನಡೆದು ಮೂರು ತಿಂಗಳು ಕಳೆದಿವೆ. ಕೊಲೆ ನಡೆದ ಕೆಲವೇ ದಿನಗಳಲ್ಲಿ ದರ್ಶನ್ ಬಂಧನ ಕೂಡ ಆಗಿದೆ. ಆದರೆ, ಅಲ್ಲಿಯವರೆಗೆ ಜಗದೀಶ್ ಸೈಲೆಂಟ್ ಆಗಿಯೇ ಇದ್ದರು. ಅವರ ಹೆಸರು ಬಿಗ್ ಬಾಸ್​ಗೆ ಬರೋಕೆ ಫೈನಲ್ ಆಗುತ್ತಿದ್ದಂತೆ ಅವರು ಆ್ಯಕ್ಟೀವ್ ಆದರು ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಟ್ರೋಲ್​ಗಳು ಶುರುವಾಗಿವೆ. ‘ಆದಷ್ಟು ಬೇಗ ಹೊರಕ್ಕೆ ಬರ್ತೀರಿ ಬಿಡಿ’ ಎಂದು ಕೆಲವರು ಹೇಳಿದ್ದಾರೆ. ‘ನಮ್ಮ ಬಾಸ್ ಹೆಸರಲ್ಲಿ ಜನಪ್ರಿಯತೆ ಪಡೆದಿರಲ್ಲ’ ಎಂದು ದರ್ಶನ್ ಫ್ಯಾನ್ಸ್ ಛೀಮಾರಿ ಹಾಕಿದ್ದಾರೆ. ಅವರಿಗೆ ವೋಟ್ ಹಾಕದೆ ಹೊರಗೆ ಹಾಕಬೇಕು ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:04 am, Sun, 29 September 24

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us