- Kannada News Photo gallery Kiran Raj to Prema Bigg Boss Kannada Season 11 Contestant Name And details Bigg Boss News
‘ಬಿಗ್ ಬಾಸ್ ಕನ್ನಡ’ ಸ್ಪರ್ಧಿಗಳ ಸಂಭಾವ್ಯ ಪಟ್ಟಿ; ಇದೆ ಕೆಲವು ಅಚ್ಚರಿಯ ಹೆಸರುಗಳು
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಆರಂಬಕ್ಕೆ ಕ್ಷಣಗಣನೆ ಶುರುವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಈ ಬಗ್ಗೆ ಘೋಷಣೆ ಆಗಲಿದೆ. ಸ್ಪರ್ಧಿಗಳ ಎಂಟ್ರಿಗೆ ಫ್ಯಾನ್ಸ್ ಕಾದಿದ್ದಾರೆ. ಈ ಮಧ್ಯೆ ಸಂಭಾವ್ಯ ಪಟ್ಟಿ ಹೊರ ಬಿದ್ದಿದ್ದು ಆ ಬಗ್ಗೆ ಇಲ್ಲಿದೆ ಮಾಹಿತಿ.
Updated on: Sep 29, 2024 | 7:31 AM

ಕಿಚ್ಚ ಸುದೀಪ್ ಜೊತೆ ಆಪ್ತತೆ ಹೊಂದಿರೋ ರಂಜಿತ್ ಕುಮಾರ್ ಕೂಡ ಬಿಗ್ ಬಾಸ್ ಮನೆಗೆ ಬರುತ್ತಿದ್ದಾರೆ. ಅವರು ಕೆಸಿಸಿಯಲ್ಲಿ ಸುದೀಪ್ ತಂಡದ ಜೊತೆಯೇ ಇದ್ದರು ಅನ್ನೋದು ವಿಶೇಷ.

ಭೂಮಿಕಾ ಬಸವರಾಜ್ ಅವರು ದೊಡ್ಮನೆಗೆ ಬರೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ ಅವರ ಹೆಸರು ಚಾಲ್ತಿಯಲ್ಲಿ ಇದೆ. ಈ ಬಗ್ಗೆ ಇಂದು ಸಂಜೆಯೇ ಸ್ಪಷ್ಟನೆ ಸಿಗಬೇಕಿದೆ.

ಹರಿಪ್ರಿಯಾ ಅವರು ದೊಡ್ಮನೆಗೆ ಬರೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ ಅವರ ಹೆಸರು ಚಾಲ್ತಿಯಲ್ಲಿ ಇದೆ. ಅವರು ದೊಡ್ಮನೆ ಪ್ರವೇಶ ಮಾಡಿರೋದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಕಿರಣ್ ರಾಜ್ ಅವರು ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಡುತ್ತಾರೆ ಎನ್ನಲಾಗಿದೆ. ಈ ಮೊದಲು ಅವರು ‘ಕನ್ನಡತಿ’ ಧಾರಾವಾಹಿ ಮಾಡಿದ್ದರು. ಆಗ ಮಿನಿ ಸೀಸನ್ಗೆ ಬಂದಿದ್ದರು. ಈಗ ಅವರು ಟಿವಿ ಸೀಸನ್ಗೆ ಬರುತ್ತಾರೆ ಎನ್ನಲಾಗಿದೆ.

ಕನ್ನಡದಲ್ಲಿ ‘ಚಾಣಾಕ್ಯ’, ‘ಖಡಕ್’ ರೀತಿಯ ಸಿನಿಮಾಗಳನ್ನು ಮಾಡಿದವರು ಧರ್ಮಕೀರ್ತಿ ರಾಜ್. ಅವರಿಗೂ ಬಿಗ್ ಬಾಸ್ನಲ್ಲಿ ಅವಕಾಶ ಸಿಕ್ಕಿದೆ. ಅವರು ದೊಡ್ಮನೆಯಲ್ಲಿ ಯಾವ ರೀತಿಯ ಆಟ ಪ್ರದರ್ಶನ ಮಾಡುತ್ತಾರೆ ಎಂಬುದನ್ನು ನೋಡಬೇಕಿದೆ.

ನಟ ತ್ರಿವಿಕ್ರಮ್ ಕೂಡ ‘ಬಿಗ್ ಬಾಸ್’ ಮನೆಗೆ ಎಂಟ್ರಿ ಪಡೆಯೋ ಸಾಧ್ಯತೆ ಇದೆ. ಅವರು ಇದರಿಂದ ಜನಪ್ರಿಯತೆ ಪಡೆಯೋ ನಿರೀಕ್ಷೆಯಲ್ಲಿ ಇದ್ದಾರೆ. ಅವರ ಅಭಿಮಾನಿ ಬಳಗ ಹೇಳಿಕೊಳ್ಳುವಷ್ಟು ಹಿರಿದಾಗಿಲ್ಲ. ಹೀಗಾಗಿ, ಬಿಗ್ ಬಾಸ್ ಮೂಲಕ ಗಮನ ಸೆಳೆಯುವ ಇಚ್ಛೆ ಇಟ್ಟುಕೊಂಡಿದ್ದಾರೆ.

ಭವ್ಯಾ ಗೌಡ ಕೂಡ ದೊಡ್ಮನೆಗೆ ಪ್ರವೇಶ ಪಡೆಯಲಿದ್ದಾರಂತೆ. ಈ ಮೊದಲು ಕಲರ್ಸ್ ಕನ್ನಡದ ‘ಗೀತಾ’ ಧಾರಾವಾಹಿಯಲ್ಲಿ ಅವರು ನಟಿಸಿದ್ದರು. ಈಗ ಅವರಿಗೆ ಬಿಗ್ ಬಾಸ್ನಲ್ಲಿ ಅವಕಾಶ ಸಿಕ್ಕಿದೆ. ಅವರ ಫ್ಯಾನ್ಸ್ ಖುಷಿಯಾಗಿದ್ದಾರೆ.

ಹಿರಿಯ ನಟಿ ಪ್ರೇಮಾ ಕೂಡ ‘ಬಿಗ್ ಬಾಸ್’ ಮನೆಗೆ ತೆರಳುವ ಸಾಧ್ಯತೆ ಇದೆಯಂತೆ. ಅವರು ಹೋದರೆ ಬಿಗ್ ಬಾಸ್ಗೆ ಹೊಸ ಕಳೆ ಬರಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.




