‘ಮಹಾನಟಿ’ ಹೆಸರಿನ ಶೋ ಈ ಮೊದಲು ಪ್ರಸಾರ ಕಂಡಿದ್ದು ಗೊತ್ತೇ ಇದೆ. ನಟನೆ ಮಾಡಬೇಕು ಎಂದು ಹಂಬಲ ಹೊಂದಿರುವ ಪ್ರತಿಭೆಗಳು ಈ ವೇದಿಕೆಗೆ ಬಂದು ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿ ಹೋಗಿದ್ದರು. ಇದರಿಂದ ಹಲವು ಪ್ರತಿಭೆಗಳ ಅನಾರಣ ಆಗಿತ್ತು. ಕೆಲವರು ಬದುಕು ಇದರಿಂದ ಬದಲಾಗಿದೆ. ಈಗ ಇದಕ್ಕೆ ಎರಡನೇ ಸೀಸನ್ ಬರುತ್ತಿದೆ. ಈ ಬಗ್ಗೆ ‘ಸರಿಗಮಪ’ (SAREGAMAPA) ವೇದಿಕೆ ಮೇಲೆ ರಮೇಶ್ ಅರವಿಂದ್ ಅವರು ಮಾಹಿತಿ ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ವೀಕ್ಷಕರು ಖುಷಿಪಟ್ಟಿದ್ದಾರೆ.
ರಮೇಶ್ ಅರವಿಂದ್ ಅವರು ‘ಮಹಾನಟಿ’ ಶೋನಲ್ಲಿ ಜಡ್ಜ್ ಸ್ಥಾನದಲ್ಲಿ ಇದ್ದರು. ಇವರ ಜೊತೆ ನಟಿ ಪ್ರೇಮಾ, ತರುಣ್ ಸುಧೀರ್ ಮತ್ತು ನಟಿ ನಿಶ್ವಿಕಾ ನಾಯ್ಡು ಕೂಡ ಇದ್ದರು. ಅನುಶ್ರೀ ಈ ಶೋ ನಿರೂಪಣೆ ಮಾಡಿದ್ದರು. ಈಗ ಇದಕ್ಕೆ ಎರಡನೇ ಸೀಸನ್ ಬರುತ್ತಿದೆ. ಇದರಲ್ಲಿ ರಮೇಶ್ ಅರವಿಂದ್ ಜಡ್ಜ್ ಸ್ಥಾನದಲ್ಲಿ ಮುಂದುವರಿಯುವುದ ಬಹುತೇಕ ಖಚಿತವಾಗಿದೆ. ಆದರೆ, ಉಳಿದಂತೆ ಯಾರೆಲ್ಲ ಇರುತ್ತಾರೆ ಎನ್ನುವ ಕುತೂಹಲ ಮೂಡಿದೆ.
ರಮೇಶ್ ಅರವಿಂದ್ ಅವರು ‘ಸರಿಗಮಪ’ ಶೋಗೆ ಅತಿಥಿಯಾಗಿ ಬಂದಿದ್ದರು. ಈ ವೇಳೆ ಅವರು ವೇದಿಕೆ ಮೇಲೆ ಈ ಬಗ್ಗೆ ಮಾತನಾಡಿದ್ದಾರೆ. ‘ಮಹಾನಟಿ ಸೀಸನ್ 2 ಶೀಘ್ರವೇ ಬರುತ್ತಿದೆ. ಚಿತ್ರರಂಗದಲ್ಲಿ ನಾಯಕಿ ಆಗಬೇಕು, ಟಿವಿಯಲ್ಲಿ ಮಿಂಚಬೇಕು ಎಂದು ಯುವ ಪ್ರತಿಭೆಗಳಿಗೆ ವೇದಿಕೆ ಸಜ್ಜಾಗಿದೆ. ಮಹಾನಟಿ 2 ಆಡಿಷನ್ಗೆ ರೆಡಿ ಆಗಿ. ಟೈಟಲ್ ಝಲಕ್ ಬರ್ತಿದೆ ನೋಡಿ’ ಎಂದರು ರಮೇಶ್ ಅರವಿಂದ್.
‘ಮಹಾನಟಿ’ ಶೋಗೆ ಆಗಮಿಸೋ ಬಹುತೇಕರು ನಟನೆ ಮಾಡಬೇಕು ಎಂಬ ಕನಸು ಕಂಡು, ನಂತರ ಅದನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗದೆ ಒದ್ದಾಡಿದವರೇ ಆಗಿದ್ದಾರೆ. ಈ ಬಾರಿ ಯಾರೆಲ್ಲ ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಮೊದಲ ಸೀಸನ್ನಲ್ಲಿ ಮೈಸೂರಿನ ತರಿಕೆರೆಯ ಪ್ರಿಯಾಂಕಾ ಅವರು ವಿನ್ನರ್ ಆಗಿದ್ದರು.
ಇದನ್ನೂ ಓದಿ: ‘ರಾಮ ಶ್ಯಾಮ ಭಾಮ’ ಕ್ಲೈಮ್ಯಾಕ್ಸ್ ಹಿಂದಿದೆ ವಿಶೇಷ ಕಥೆ; ರಿವೀಲ್ ಮಾಡಿದ ರಮೇಶ್ ಅರವಿಂದ್
ರಮೇಶ್ ಅರವಿಂದ್ ಅವರು ಈ ಮೊದಲು ಹಿರಿತೆರೆಯಲ್ಲಿ ಮಿಂಚಿದವರು. ಆ ಬಳಿಕ ಅವರು ಕಿರುತೆರೆಯಲ್ಲೂ ಮಿಂಚಿದರು. ಅವರು ಈ ಮೊದಲು ‘ವೀಕೆಂಡ್ ವಿತ್ ರಮೇಶ್’ ಶೋ ನಡೆಸಿಕೊಡುತ್ತಿದ್ದರು. ‘ಮಹಾನಟಿ’ ವೇದಿಕೆ ಮೇಲೆ ಅವರು ಸಾಕಷ್ಟು ಅನುಭವಗಳನ್ನು ಹಂಚಿಕೊಂಡಿದ್ದು ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.