
ಹಳ್ಳಿಗಾಡಿನಿಂದ ಬಂದ ಮಲ್ಲಮ್ಮ (Mallamma) ಅವರು ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಮಲ್ಲಮ್ಮ ಅವರು ತುಂಬ ಮುಗ್ಧರು. ಬಿಗ್ ಬಾಸ್ ನಿಯಮಗಳನ್ನು ಅರ್ಥ ಮಾಡಿಕೊಳ್ಳಲು ಅವರು ಕಷ್ಟಪಡುತ್ತಾರೆ. ಆದರೂ ಕೂಡ ಅವರು ಎಲ್ಲರ ಪ್ರೀತಿಪಾತ್ರರಾಗಿದ್ದಾರೆ. ವಿಶೇಷ ಏನೆಂದರೆ ಅವರು ಮೊದಲ ಫಿನಾಲೆ ಕಂಟೆಂಡರ್ ಆಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಇನ್ನುಳಿದ ಸ್ಪರ್ಧಿಗಳ ಸಿಂಪಥಿ!
ಮಲ್ಲಮ್ಮ ಅವರ ವ್ಯಕ್ತಿತ್ವ ಯಾವ ರೀತಿ ಇದೆ ಎಂಬುದು ಮೊದಲ ಎರಡು ದಿನದಲ್ಲೇ ಗೊತ್ತಾಗಿದೆ. ಅವರು ತುಂಬ ಮುಗ್ಧರು. ಇನ್ನುಳಿದವರ ತಂತ್ರಗಾರಿಕೆಯನ್ನು ಅರ್ಥ ಮಾಡಿಕೊಳ್ಳಲು ಅವರು ಸೋಲುತ್ತಾರೆ. ಎಲ್ಲರೂ ಸರಿಯಾಗಿ ಕಠಿಣ ಪೈಪೋಟಿ ನೀಡಿದರೆ ಅಂಥವರ ಜೊತೆ ಮಲ್ಲಮ್ಮ ಸ್ಪರ್ಧಿಸುವುದು ಕಷ್ಟ ಆಗುತ್ತದೆ. ಹಾಗಾಗಿ ಎಲ್ಲರೂ ಒಟ್ಟಾಗಿ ಚರ್ಚಿಸಿ ಮಲ್ಲಮ್ಮ ಅವರನ್ನು ಫಿನಾಲೆ ಕಂಟೆಂಡರ್ ಮಾಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ ತುಂಬಾ ಡಿಫರೆಂಟ್ ಆಗಿದೆ. ಹೊಸ ಹೊಸ ಟ್ವಿಸ್ಟ್ಗಳನ್ನು ನೀಡಲಾಗುತ್ತಿದೆ. ಮೂರನೇ ವಾರದಲ್ಲಿಯೇ ಒಂದು ಫಿನಾಲೆ ಬರಲಿದೆ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ಅದಕ್ಕಾಗಿ ಪ್ರತಿ ವಾರ ಕೆಲವು ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಅದರಲ್ಲಿ ಗೆದ್ದವರು ಫಿನಾಲೆ ಕಂಟೆಂಡರ್ ಆಗುತ್ತಾರೆ. ಈಗ ಆ ಚಾನ್ಸ್ ಮಲ್ಲಮ್ಮ ಅವರಿಗೆ ಸಿಕ್ಕಿದೆ.
ಒಂಟಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಅಶ್ವಿನಿ ಗೌಡ ಅವರು ನಿರ್ಧಾರ ಪ್ರಕಟಿಸಿದರು. ‘ನಮ್ಮೆಲ್ಲರಿಗೂ ಫಿನಾಲೆಗೆ ಹೋಗುವ ಭರವಸೆ ಇದೆ. ಎಲ್ಲರೂ ಸೇರಿ ನಾವು ಒಮ್ಮತದಿಂದ ಮಲ್ಲಮ್ಮ ಅವರನ್ನು ಸೇವ್ ಮಾಡುತ್ತಿದ್ದೇವೆ’ ಎಂದು ಹೇಳಿದರು. ಅಂದರೆ ಸಿಂಪಥಿ ಕಾರಣದಿಂದಲೇ ಮಲ್ಲಮ್ಮ ಅವರಿಗೆ ಈ ಸ್ಥಾನವನ್ನು ನೀಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಹೆಚ್ಚು ದಿನಗಳ ತನಕ ಈ ರೀತಿ ನಡೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಆಟ ಬದಲಾಗಲಿದೆ.
ಇದನ್ನೂ ಓದಿ: ಬಕ್ರಾ ಮಾಡಲು ಬಂದ ಗಿಲ್ಲಿ ನಟನಿಗೆ ಚಳ್ಳೆಹಣ್ಣು ತಿನ್ನಿಸಿದ ಮಲ್ಲಮ್ಮ
ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಕಳೆದಿರುವುದು 3 ದಿನಗಳು ಮಾತ್ರ. ದಿನ ಕಳೆದಂತೆಲ್ಲ ಆಟದ ಬಿಸಿ ಹೆಚ್ಚುತ್ತದೆ. ರಕ್ಷಿತಾ ಶೆಟ್ಟಿ ಬಳಿಕ ಮೊದಲು ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಪೈಪೋಟಿ ಹೆಚ್ಚಿದ ಬಳಿಕ ತಮ್ಮ ತಮ್ಮ ಸ್ಥಾನ ಉಳಿಸಿಕೊಳ್ಳಲು ಎಲ್ಲರೂ ಸಿಂಪಥಿ ಬದಿಗಿಟ್ಟು ಹೋರಾಡಲೇಬೇಕಾಗುತ್ತದೆ. ಆಗ ಮಲ್ಲಮ್ಮ ಹೇಗೆ ಆಟ ಆಡುತ್ತಾರೆ ಎಂಬುದನ್ನು ಕಾದುನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.