AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಕ್ರಾ ಮಾಡಲು ಬಂದ ಗಿಲ್ಲಿ ನಟನಿಗೆ ಚಳ್ಳೆಹಣ್ಣು ತಿನ್ನಿಸಿದ ಮಲ್ಲಮ್ಮ

Mallamma In Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 12ರ ಪ್ರಮುಖ ಸ್ಪರ್ಧಿ ಮಲ್ಲಮ್ಮ, ತಮ್ಮ ಜಾಣ್ಮೆ ಮತ್ತು ಆಟದ ತಂತ್ರಗಳಿಂದ ಗಮನ ಸೆಳೆಯುತ್ತಿದ್ದಾರೆ. ಮನೆಯಲ್ಲಿ ಒಂಟಿ ಸ್ಪರ್ಧಿಯಾಗಿರುವ ಅವರು, ದೊಡ್ಮನೆಯ ಸವಾಲುಗಳನ್ನು ಎದುರಿಸುತ್ತಾ ಬುದ್ಧಿವಂತಿಕೆಯಿಂದ ವರ್ತಿಸುತ್ತಿದ್ದಾರೆ. ಕೆಲವೊಮ್ಮೆ ಆದೇಶಗಳನ್ನು ಅರ್ಥಮಾಡಿಕೊಳ್ಳಲು ಕಷ್ಟಪಟ್ಟಿದ್ದಾರೆ.

ಬಕ್ರಾ ಮಾಡಲು ಬಂದ ಗಿಲ್ಲಿ ನಟನಿಗೆ ಚಳ್ಳೆಹಣ್ಣು ತಿನ್ನಿಸಿದ ಮಲ್ಲಮ್ಮ
ಮಲ್ಲಮ್ಮ-ಗಿಲ್ಲಿ
ರಾಜೇಶ್ ದುಗ್ಗುಮನೆ
|

Updated on:Sep 30, 2025 | 12:34 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ  (BBK 12) ಹೆಚ್ಚು ಗಮನ ಸೆಳೆದ ಸ್ಪರ್ಧಿ ಎಂದರೆ ಅದು ಮಲ್ಲಮ್ಮ. ಇವರು ಉತ್ತರ ಕರ್ನಾಟಕ ಪ್ರತಿಭೆ. ಅವರು ಮಾತಿನ ಮೂಲಕ ಎಲ್ಲರ ಗಮನ ಸೆಳೆದರು. ಸೋಶಿಯಲ್ ಮೀಡಿಯಾದಲ್ಲಿ ಹೆಸರು ಮಾಡಿದ ಮಲ್ಲಮ್ಮ ಈಗ ದೊಡ್ಮೆನೆಯಲ್ಲಿ ಸ್ಪರ್ಧಿ ಆಗಿರೋದು ವಿಶೇಷ. ಅವರಿಗೆ ದೊಡ್ಮನೆ ಕಷ್ಟ ಆಗುತ್ತಿದೆ ಎಂಬುದು ಒಂದು ಕಡೆಯಾದರೆ, ಅವರು ತಮ್ಮ ಬುದ್ಧಿವಂತಿಕೆ ಉಪಯೋಗಿಸುತ್ತಿದ್ದಾರೆ ಅನ್ನೋದು ಮತ್ತೊಂದು ಕಡೆ. ಗಿಲ್ಲಿ ನಟನ ಜೊತೆ ಅವರು ನಡೆದುಕೊಂಡ ರೀತಿಯೇ ಇದಕ್ಕೆ ಸಾಕ್ಷಿ.

ಬಿಗ್ ಬಾಸ್ ಮನೆಯಲ್ಲಿ ಒಂಟಿ ಹಾಗೂ ಜಂಟಿ ಎಂದು ವಿಂಗಡಿಸಲಾಗಿದೆ. ಒಂಟಿ ಎಂದರೆ ಒಬ್ಬರೇ ಆಡಬೇಕು. ಜಂಟಿಗಳು ಜೊತೆಯಾಗಿ ಆಡಬೇಕು. ಬಿಗ್ ಬಾಸ್ ವೇದಿಕೆ ಮೇಲೆ ಇದನ್ನು ನಿರ್ಧರಿಸಿ ಕಳುಹಿಸಿಯಾಗಿದೆ. ಮಲ್ಲಮ್ಮ, ಅಶ್ವಿನಿ ಗೌಡ, ಕಾಕ್ರೋಚ್ ಸುಧಿ ಸೇರಿದಂತೆ ಆರು ಮಂದಿ ಒಂಟಿ ಆಗಿ ಆಡುತ್ತಿದ್ದಾರೆ. ಉಳಿದ 12 ಮಂದಿ ಜೋಡಿಯಾಗಿ ಆಡುತ್ತಿದ್ದಾರೆ.

ಒಂಟಿ ಹಾಗೂ ಜಂಟಿ ಎಂಬ ಪ್ರತ್ಯೇಕತೆಯಲ್ಲಿ ಟ್ವಿಸ್ಟ್ ನೀಡಲಾಗಿದೆ. ಒಂಟಿ ವರ್ಗದ ಸ್ಪರ್ಧಿಗಳಿಗೆ ಬೇರೆಯದೇ ರೀತಿಯಾದ ಆಹಾರ ವ್ಯವಸ್ಥೆ ಇದೆ. ಇದನ್ನು ಜಂಟಿಗಳು ಬಳಕೆ ಮಾಡುವಂತಿಲ್ಲ. ಇಷ್ಟೇ ಅಲ್ಲ, ಅವರು ಕೆಲಸ ಕೂಡ ಮಾಡೋ ಅಗತ್ಯ ಇಲ್ಲ. ಮನೆಗೆಲಸದ ಸಂಪೂರ್ಣ ಜವಾಬ್ದಾರಿ ಜಂಟಿಗಳೇ ಮಾಡಬೇಕು.

ಇದನ್ನೂ ಓದಿ
Image
ರಿಷಬ್ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಅಳುವವರು ಈ ವಿಡಿಯೋ ನೋಡಿ
Image
ಅನುಶ್ರೀ ಹನಿಮೂನ್ ಫೋಟೋಗೆ ಬಂತು ಆ ವಿಶೇಷ ಕಮೆಂಟ್
Image
ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಎಲಿಮಿನೇಟ್ ಆಗಲಿದ್ದಾರೆ ಮಲ್ಲಮ್ಮ?
Image
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

‘ಗಂಟಲು ಉರಿಯುತ್ತಿದೆ. ಸ್ವಲ್ಪ ಜ್ಯೂಸ್ ಕೊಡಿ ಮಲ್ಲಮ್ಮ’ ಎಂದು ಗಿಲ್ಲ ನಟ ಕೇಳಿದರು. ‘ಈ ಜ್ಯೂಸ್ ಕೊಡಂಗಿಲ್ಲ. ನಿಮ್ಮದು ನಮಗೆ ಕೊಡಂಗಿಲ್ಲ, ನಮ್ಮದು ನಿಮಗೆ ಕೊಡಂಗಿಲ್ಲ. ಬೇಕಿದ್ರೆ ಹೊರಗೆ ಹೋದ್ಮೆಲೆ ಸಿಗೋಣ, ಆಗ ಕೊಡಿಸ್ತೀನಿ’ ಎಂದು ಮಲ್ಲಮ್ಮ ಅಂದರು. ಮಲ್ಲಮ್ಮ ಜಾಣತನಕ್ಕೆ ಎಲ್ಲರೂ ಮೆಚ್ಚಿಕೊಂಡರು. ‘ಅವರು ಸ್ಮಾರ್ಟ್ ಇದಾರೆ’ ಎಂದು ಮಲ್ಲಮ್ಮಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮತ್ತೆ ಬರಲ್ಲ ರಕ್ಷಿತಾ ಶೆಟ್ಟಿ? ಇಲ್ಲಿದೆ ಸಾಕ್ಷಿ

ಮಲ್ಲಮ್ಮ ಅವರಿಗೆ ಬಿಗ್ ಬಾಸ್ ನೀಡುವ ಕೆಲ ಆದೇಶಗಳು ಅರ್ಥವಾಗುತ್ತಿಲ್ಲ. ಇದನ್ನು ಅರ್ಥ ಮಾಡಿಕೊಂಡು ಅವರು ಮುನ್ನಡೆದರೆ ಅವರು ಹೆಚ್ಚು ದಿನ ಉಳಿಯಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:33 pm, Tue, 30 September 25