AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಗೆ ಮತ್ತೆ ಬರಲ್ಲ ರಕ್ಷಿತಾ ಶೆಟ್ಟಿ? ಇಲ್ಲಿದೆ ಸಾಕ್ಷಿ

ಬಿಗ್ ಬಾಸ್ ಕನ್ನಡ 12 ಮನೆ ಪ್ರವೇಶಿಸಿದ್ದ ರಕ್ಷಿತಾ ಶೆಟ್ಟಿ ಅವರು ಅನಿರೀಕ್ಷಿತವಾಗಿ ಹೊರ ಹೋಗಿದ್ದಾರೆ. ಆದರೆ, ಅವರ ಎಲಿಮಿನೇಷನ್ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಅನುಮಾನವಿದೆ. ಇದು ಬಿಗ್ ಬಾಸ್ ಮಾಡಿದ ಪ್ರಾಂಕ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಎಲಿಮಿನೇಷನ್ ಬಗ್ಗೆ ಕಲರ್ಸ್ ಅಧಿಕೃತವಾಗಿ ಪೋಸ್ಟ್ ಹಾಕಿದೆ.

ಬಿಗ್ ಬಾಸ್ ಮನೆಗೆ ಮತ್ತೆ ಬರಲ್ಲ ರಕ್ಷಿತಾ ಶೆಟ್ಟಿ? ಇಲ್ಲಿದೆ ಸಾಕ್ಷಿ
ರಕ್ಷಿತಾ ಶೆಟ್ಟಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Sep 30, 2025 | 7:43 AM

Share

ರಕ್ಷಿತಾ ಶೆಟ್ಟಿ (Rakshita Shetty) ಅವರು ಹೊಸ ಹುರುಪಿನಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮನೆಯನ್ನು ಪ್ರವೇಶಿಸಿದ್ದು ಗೊತ್ತೇ ಇದೆ. ಆದರೆ, ಬಂದ ವೇಗದಲ್ಲೇ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದನ್ನು ನೀವು ಕಾಣಬಹುದು. ಆದರೆ, ಅವರು ಬಿಗ್ ಬಾಸ್​​ನಿಂದ ಎಲಿಮಿನೇಟ್ ಆಗಿಲ್ಲ ಎಂಬ ಮಾತು ಕೇಳಿ ಬಂದಿದ್ದವು. ಈ ವಿಚಾರವು ಅವರ ಅಭಿಮಾನಿಗಳಿಗೆ ಖುಷಿಯನ್ನು ಕೊಟ್ಟಿತ್ತು. ಆದರೆ, ಅವರು ಬರೋದು ಅನುಮಾನವೇ.

ರಕ್ಷಿತಾ ಶೆಟ್ಟಿ ಅವರು ಆರಂಭದಲ್ಲಿ ಸಾಕಷ್ಟು ಟ್ರೋಲ್ ಆಗಿರಬಹುದು. ಆದರೆ, ಕೆಲವರಿಗೆ ಅವರ ಬಗ್ಗೆ ಒಳ್ಳೆಯ ಭಾವನೆ ಇರುವುದನ್ನು ತಳ್ಳಿ ಹಾಕುವಂತಿಲ್ಲ. ಅವರು ಮುಂಬೈನಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ಮಾತನಾಡುವ ಪ್ರಯತ್ನದಲ್ಲಿ ಇದ್ದಾರೆ. ಈ ವಿಚಾರದಲ್ಲಿ ಅನೇಕರಿಗೆ ಖುಷಿ ಇದೆ. ಹೀಗಿರುವಾಗಲೇ ಅವರು ದೊಡ್ಮನೆಯಿಂದ ಹೊರ ಹೋದರು.

ಇದನ್ನೂ ಓದಿ
Image
ಅನುಶ್ರೀ ಹನಿಮೂನ್ ಫೋಟೋಗೆ ಬಂತು ಆ ವಿಶೇಷ ಕಮೆಂಟ್
Image
ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಎಲಿಮಿನೇಟ್ ಆಗಲಿದ್ದಾರೆ ಮಲ್ಲಮ್ಮ?
Image
ನಾನು ಬಾಲ್ಯದಲ್ಲಿ ಕುಂದಾಪುರದ ಬಗ್ಗೆ ಕೇಳಿದ ಕಥೆ ಸಿನಿಮಾ ಆಗಿದೆ; JR NTR
Image
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿಲ್ಲ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಬಿಗ್ ಬಾಸ್​ನಲ್ಲಿ ಈ ಮೊದಲು ಕೂಡ ಈ ರೀತಿಯ ಪ್ರ್ಯಾಂಕ್​ಗಳನ್ನು ಮಾಡಲಾಗಿದೆ. ಹೊಸ ಸೀಸನ್ ಆಗಿರುವುದರಿಂದ ಅವರಿಗೆ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಕಲರ್ಸ್ ಕನ್ನಡ ಈ ಬಗ್ಗೆ ಪೋಸ್ಟ್ ಹಾಕಿದೆ. ಅವರು ಎಲಿಮಿನೇಟ್ ಆಗಿದ್ದಾರೆ ಎಂದಿದ್ದಾರೆ.

ರಕ್ಷಿತಾ ಶೆಟ್ಟಿ ಅವರು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ವ್ಯಕ್ತಿ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಹಿಂಬಾಲಕರಿದ್ದಾರೆ. ಹೀಗಾಗಿ, ವೋಟಿಂಗ್ ಏನು ಇಲ್ಲದೆ, ಕೇವಲ ಆರು ಜನರ ನಿರ್ಧಾರದಿಂದ ಅವರನ್ನು ಹೊರಕ್ಕೆ ಕಳುಹಿಸಿದ್ದು ಸರಿ ಅಲ್ಲ ಎಂಬ ಮಾತು ಕೇಳಿ ಬಂದಿದೆ.

ಇದನ್ನೂ ಓದಿ: BBK 12: ಬಂದ ದಾರಿಯಲ್ಲೇ ವಾಪಸ್ ಹೋದ ರಕ್ಷಿತಾ ಶೆಟ್ಟಿ: ಬಿಗ್ ಬಾಸ್ ದೊಡ್ಡ ಶಾಕ್

ರಕ್ಷಿತಾ ಶೆಟ್ಟಿ, ಸ್ಪಂದನ ಹಾಗೂ ಮಾಳು ಅವರು ಬಿಗ್ ಬಾಸ್ ಮನೆಯನ್ನು ಒಟ್ಟಿಗೆ ಪ್ರವೇಶಿಸಿದರು. ಈ ಮೂವರಲ್ಲಿ ಇಬ್ಬರು ಜಂಟಿಯಾಗೂ ಒಬ್ಬರು ಒಂಟಿಯಾಗೂ ಶೋನಲ್ಲಿ ಮುಂದುವರಿಯಬೇಕಿತ್ತು. ಹೀಗಾಗಿ, ಒಬ್ಬರನ್ನು ಮನೆಯಿಂದ ಹೊರಕ್ಕೆ ಕಳುಹಿಸಿ ಎಂದು ಬಿಗ್ ಬಾಸ್ ಆದೇಶಿಸಿದರು. ಈ ಆದೇಶದಂತೆ ಮನೆಯ ಒಂಟಿಗಳೇ ನಿರ್ಧರಿಸಿ ಒಬ್ಬರನ್ನು ಹೊರಕ್ಕೆ ಕಳುಹಿಸಲಾಗಿದೆ. ಇದು ಸರಿ ಅಲ್ಲ ಎನ್ನುವ ಮಾತನ್ನು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ