
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಮಲ್ಲಮ್ಮ ಕೂಡ ಸ್ಪರ್ಧಿಯಾಗಿ ಬಂದಿದ್ದಾರೆ. ಅವರು ಯಾದಗಿರಿ ಜಿಲ್ಲೆಯ ಸುರಪುರದವರು. ಅವರು ಹುಟ್ಟಿ ಬೆಳೆದಿದ್ದು ಹಳ್ಳಿಯಲ್ಲಿ. ಕಳೆದ ಕೆಲ ವರ್ಷಗಳಿಂದ ಅವರು ಬೆಂಗಳೂರಿನಲ್ಲಿ ಇದ್ದಾರೆ. ಅವರು ಈಗ ಬಿಗ್ ಬಾಸ್ ಮನೆಗೆ ಬಂದಿದ್ದು, ಅಲ್ಲಿನ ರೀತಿ-ರಿವಾಜುಗಳು ಅವರಿಗೆ ಹೊಂದಿಕೆ ಆಗುತ್ತಿಲ್ಲ. ಇದರಿಂದ ಅವರು ಬೇಗನೆ ಹೊರ ಹೋಗಬಹುದು ಎಂಬುದು ಅನೇಕರ ಊಹೆ.
‘ಬಿಗ್ ಬಾಸ್’ನಲ್ಲಿ ಬರೋ ಪ್ರತಿ ಸ್ಪರ್ಧಿಯೂ ತನಗಾಗಿ ಆಡಬೇಕು. ಅವರು ಬೇರೆಯವರ ಬಗ್ಗೆ ಕರುಣೆ ತೋರುತ್ತಾ ಕೂತರೆ ತಮ್ಮ ಆಟ ಹಿಂದೆ ಬೀಳುತ್ತದೆ ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿದೆ. ಕಿಚ್ಚ ಸುದೀಪ್ ಕೂಡ ಹೇಳುವುದು ಇದನ್ನೇ. ತ್ಯಾಗ ಮಾಡಲು ಮುಂದಾದರೆ ಹಲವು ವಿಚಾರಗಳನ್ನು ಅವರು ಕಳೆದುಕೊಳ್ಳಬೇಕಾಗುತ್ತದೆ. ಈಗ ಮಲ್ಲಮ್ಮ ಅವರಿಂದ ಮನೆ ಸಾಕಷ್ಟು ನಷ್ಟ ಅನುಭವಿಸುವ ಸೂಚನೆ ಸಿಕ್ಕಿದೆ.
ಬಿಗ್ ಬಾಸ್ ಮನೆಯಲ್ಲಿ ಒಂಟಿ-ಜಂಟಿ ಎಂದು ವಿಂಗಡಿಸಲಾಗಿದೆ. ಮಲ್ಲಮ್ಮ, ಕಾಕ್ರೋಚ್ ಸುಧಿ, ಅಶ್ವಿನಿ ಗೌಡ ಮೊದಾಲದವರು ಒಂಟಿ ಆದರೆ, ಇನ್ನೂ ಕೆಲವರು ಜಂಟಿಯಾಗಿದ್ದಾರೆ. ಮನೆಯ ದಿನಸಿಗಳನ್ನು ತರಲು ಮಲ್ಲಮ್ಮ ಅವರನ್ನು ಕಳುಹಿಸಲಾಯಿತು. ಆದರೆ, ಅವರು ಆಯ್ಕೆ ಮಾಡುವಲ್ಲಿ ಮೊದಲ ರೌಂಡ್ನಲ್ಲಿ ವಿಫಲರಾದರು. ಮತ್ತೊಮ್ಮೆ ಅವಕಾಶ ಕೊಟ್ಟಾಗಲೂ ಅವರು ಎಡವಿದರು.
ಬಿಗ್ ಬಾಸ್ ಮನೆಗೆ ದಿನಸಿ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ದಿನಸಿ ಇಲ್ಲದೆ ಮನೆ ನಡೆಸೋದು ತುಂಬಾನೇ ಕಷ್ಟ. ಇಂತಹ ಮುಖ್ಯ ಘಟ್ಟದಲ್ಲೇ ಅವರು ಎಡವಿದರೆ ತೊಂದರೆ ಆಗುತ್ತದೆ. ಇನ್ನು, ಮುಂದಿನ ದಿನಗಳಲ್ಲಿ ಟಾಸ್ಕ್ಗಳು ಬರುತ್ತವೆ. ಈ ವೇಳೆ ಅವರು ಎಚ್ಚರಿಕೆಯ ಆಟ ಆಡಬೇಕಾಗುತ್ತದೆ. ಅವರು ಹೆಚ್ಚು ಆಲೋಚಿಸಬೇಕಾಗುತ್ತದೆ. ಬಿಗ್ ಬಾಸ್ ಆದೇಶವನ್ನು ಕೇಳಿ ಅರ್ಥ ಮಾಡಿಕೊಂಡು ಅದನ್ನು ಅನ್ವಯಿಸಬೇಕಾಗುತ್ತದೆ. ಆದರೆ, ಮಲ್ಲಮ್ಮಗೆ ಇದು ಕಷ್ಟ ಆಗಬಹುದು. ಆಗ ಇಡೀ ತಂಡಕ್ಕೆ ನಷ್ಟ ಉಂಟಾಗುತ್ತದೆ. ಇದನ್ನು ಯಾರೂ ಸಹಿಸಿಕೊಳ್ಳೋದಿಲ್ಲ.
ಇದನ್ನೂ ಓದಿ: ಆರಂಭದಲ್ಲೇ ಬಿಗ್ ಬಾಸ್ ಮನೆ ಮಂದಿಯ ಕೆಂಗಣ್ಣಿಗೆ ಗುರಿಯಾದ ಮಲ್ಲಮ್ಮ
ಹೀಗಾಗಿ, ಅನೇಕರು ಮಲ್ಲಮ್ಮ ಅವರನ್ನು ನಾಮಿನೇಷನ್‌ಗೆ ಆಯ್ಕೆ ಮಾಡುವ ಸಾಧ್ಯತೆ ಇರುತ್ತದೆ. ಕಡಿಮೆ ವೋಟ್ ಪಡೆದರೆ ಅವರು ದೊಡ್ಮನೆಯಿಂದ ಹೊರ ಹೋಗುವುದು ಪಕ್ಕಾ ಎನ್ನಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಾ ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:59 am, Tue, 30 September 25