ಬಿಗ್ ಬಾಸ್ ಫಿನಾಲೆ ಪೂರ್ಣಗೊಂಡಿದೆ. ಮಂಜು ಪಾವಗಡ ವಿಜೇತರಾಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ವಿನ್ನರ್ಗೆ ಪ್ರತಿ ವರ್ಷ 50 ಲಕ್ಷ ರೂಪಾಯಿ ಸಿಗುತ್ತಿತ್ತು. ಇದನ್ನು ಈ ಬಾರಿ 53 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಈ ಬಾರಿ ವಿನ್ ಆದ ಮಂಜು ಪಾವಗಡ ಅವರಿಗೂ ಕಪ್ ಹಾಗೂ ಪ್ರಶಸ್ತಿ ಹಣ ಸಿಕ್ಕಿದೆ. ಆದರೆ ಇದಕ್ಕೆ ದೊಡ್ಡ ಮೊತ್ತದ ಟ್ಯಾಕ್ಸ್ ಕಟ್ ಆಗುತ್ತದೆ ಎನ್ನುವ ವಿಚಾರ ಅನೇಕರಿಗೆ ಗೊತ್ತಿಲ್ಲ.
ಕನ್ನಡ ಬಿಗ್ ಬಾಸ್ ಸೀಸನ್ 8 ಫೆಬ್ರವರಿ ತಿಂಗಳಲ್ಲಿ ಆರಂಭಗೊಂಡಿತ್ತು. ಕೊವಿಡ್ ಎರಡನೇ ಅಲೆ ಕಾಣಿಸಿಕೊಂಡಿದ್ದರಿಂದ ಮಧ್ಯದಲ್ಲಿ ಕೆಲ ಕಾಲ ನಿಲ್ಲಿಸಲಾಗಿತ್ತು. ನಂತರ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಾಗಿತ್ತು. ಬಿಗ್ ಬಾಸ್ ಮನೆ ಸೇರಿದ ಒಟ್ಟು 20 ಸ್ಪರ್ಧಿಗಳ ಪೈಕಿ ಮಂಜು ಪಾವಗಡ ವಿಜೇತರಾಗಿದ್ದಾರೆ.
ಬಿಗ್ ಬಾಸ್ ವಿಜೇತರಾದ ಮಂಜು ಪಾವಗಡ ಅವರಿಗೆ ಪೂರ್ತಿ 53 ಲಕ್ಷ ರೂಪಾಯಿ ಸಿಗುವುದಿಲ್ಲ. ಇದಕ್ಕೆ ಶೇ. 31.20 ತೆರಿಗೆ ಬೀಳಲಿದೆ. ಅಂದರೆ, 16,53,600 ರೂಪಾಯಿ ಹಣ ತೆರಿಗೆ ರೂಪದಲ್ಲಿ ಕಟ್ ಆಗಲಿದೆ. ಹೀಗಾಗಿ, ವಿಜೇತರ ಕೈಗೆ 36,46,400 ರೂಪಾಯಿ ಸಿಕ್ಕಿದೆ. ಇಲ್ಲಿ ಯಾರು ಪ್ರೈಜ್ ಅಮೌಂಟ್ ನೀಡುತ್ತಾರೋ ಅವರೇ ತೆರಿಗೆಯನ್ನು ಕಡಿತಗೊಳಿಸಿ ನೀಡುತ್ತಾರೆ. ಪ್ರಶಸ್ತಿ ರೂಪದಲ್ಲಿ ಸಿಗುವ 10 ಸಾವಿರಕ್ಕಿಂತ ಅಧಿಕ ಮೊತ್ತಕ್ಕೆ ಇದೇ ನಿಯಮ ಅನ್ವಯವಾಗಲಿದೆ.
ಒಂದೊಮ್ಮೆ ವಿಜೇತರು ವಸ್ತು ರೂಪದಲ್ಲಿ ಪ್ರಶಸ್ತಿ ಪಡೆದುಕೊಂಡರೆ, ಉದಾಹರಣೆ ಕಾರು, ಬಂಗಲೆ, ಮನೆ ಇತ್ಯಾದಿ. ಆಗ, ವಿಜೇತ ಪಶಸ್ತಿ ಮೌಲ್ಯವನ್ನು ಲೆಕ್ಕಾಚಾರ ಹಾಕಿ ಶೇ.30.9 ತೆರಿಗೆಯನ್ನು ತನ್ನದೇ ಹಣದಿಂದ ಪಾವತಿಸಬೇಕು. ಉದಾಹರಣೆಗೆ ಬಿಗ್ ಬಾಸ್ ವಿಜೇತರಿಗೆ 50 ಲಕ್ಷ ಮೌಲ್ಯದ ಮನೆ ಸಿಕ್ಕರೆ 15.3 ಲಕ್ಷ ರೂಪಾಯಿ ಹಣವನ್ನು ತೆರಿಗೆ ರೂಪದಲ್ಲಿ ಸ್ಪರ್ಧಿಗಳೇ ಪಾವತಿಸಬೇಕು.
ಕನ್ನಡ ಬಿಗ್ ಬಾಸ್ ಸೀಸನ್ 8 ಸುದೀರ್ಘ ಪ್ರಯಾಣ ಕೊನೆಗೊಂಡಿದೆ. ಮಂಜು ಪಾವಗಡ ಅವರು ಸೀಸನ್ 8 ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಈ ಬಗ್ಗೆ ಸುದೀಪ್ ಅವರು ಅದ್ದೂರಿ ವೇದಿಕೆ ಮೇಲೆ ಘೋಷಣೆ ಮಾಡಿದ್ದಾರೆ. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.
ಇದನ್ನೂ ಓದಿ:
‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್
ಬಿಗ್ ಬಾಸ್ ಮನೆಯಲ್ಲಿ ನಾಲ್ಕೇ ದಿನಕ್ಕೆ ಎರಡು ಲಕ್ಷ ಸಂಪಾದಿಸಿದ ಅರವಿಂದ್ ಕೆಪಿ