Manju Pavagada: ನೆರವೇರಿತು ಮಂಜು ಪಾವಗಡ ನಿಶ್ಚಿತಾರ್ಥ; ಹುಡುಗಿ ಯಾರು?

|

Updated on: Oct 05, 2024 | 10:26 AM

ಹಾಸ್ಯ ಪಾತ್ರಗಳನ್ನು ಮಾಡಿಕೊಂಡು, ಹಾಸ್ಯ ರಿಯಾಲಿಟಿ ಶೋಗಳಲ್ಲಿ ಮಂಜು ಪಾವಗಡ ಭಾಗಿ ಆಗಿದ್ದರು. ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 8’ ಭರ್ಜರಿ ಜನಪ್ರಿಯತೆ ನೀಡಿತು. ಅವರು ಈ ಸೀಸನ್​ನಲ್ಲಿ ವಿನ್ ಕೂಡ ಆದರು. ಈಗ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

Manju Pavagada: ನೆರವೇರಿತು ಮಂಜು ಪಾವಗಡ ನಿಶ್ಚಿತಾರ್ಥ; ಹುಡುಗಿ ಯಾರು?
ಮಂಜು ಪಾವಗಡ ನಿಶ್ಚಿತಾರ್ಥ
Follow us on

‘ಬಿಗ್ ಬಾಸ್ ಸೀಸನ್ 8’ರ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಅವರ ಬಾಳಲ್ಲಿ ಹುಡುಗಿಯ ಆಗಮನ ಆಗಿದೆ. ಮಂಜು ಹಾಗೂ ಆ ಹುಡುಗಿಯ ನಿಶ್ಚಿತಾರ್ಥ ಕೂಡ ನೆರವೇರಿದೆ. ಸೈಲೆಂಟ್ ಆಗಿ ಈ ಕಾರ್ಯಗಳು ನೆರವೇರಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಸಾಕಷ್ಟು ವೈರಲ್ ಆಗಿದೆ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

ಹಾಸ್ಯ ಪಾತ್ರಗಳನ್ನು ಮಾಡಿಕೊಂಡು, ಹಾಸ್ಯ ರಿಯಾಲಿಟಿ ಶೋಗಳಲ್ಲಿ ಮಂಜು ಪಾವಗಡ ಭಾಗಿ ಆಗಿದ್ದರು. ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 8’ ಭರ್ಜರಿ ಜನಪ್ರಿಯತೆ ನೀಡಿತು. ಅವರು ಈ ಸೀಸನ್​ನಲ್ಲಿ ವಿನ್ ಕೂಡ ಆದರು. ಆ ಬಳಿಕ ಅವರು ಕಲರ್ಸ್ ಕನ್ನಡದ ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಅಂತರಪಟ’ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡಿ ಫೇಮಸ್ ಆಗಿದ್ದಾರೆ. ಈಗ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

ನಂದಿನಿ ಎಂಬುವವರ ಜೊತೆ ಮಂಜು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರು ಬೆಂಗಳೂರಿನಲ್ಲೇ ಕೆಲಸ ಮಾಡಿಕೊಂಡಿದ್ದಾರೆ. ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಂಜು ಅವರೇ ರಿವೀಲ್ ಮಾಡಬೇಕಿದೆ. ನವೆಂಬರ್​ನಲ್ಲಿ ಇವರ ವಿವಾಹ ನೆರವೇರಲಿದೆ ಎಂದು ವರದಿ ಆಗಿದೆ. ಇವರದ್ದು ಅರೇಂಜ್ ಮ್ಯಾರೆಜ್.

ಇದನ್ನೂ ಓದಿ: ‘ಬಿಗ್ ಬಾಸ್ ಅನ್ನ ತಿಂದವನಿಗೆ ಆ ಶೋ ಬಗ್ಗೆ ನಿಯತ್ತಿಲ್ಲ’; ಜಗದೀಶ್ ವಿರುದ್ಧ ಛೀಮಾರಿ 

ಮಂಜು ಪಾವಗಡ ಅವರ ನಿಶ್ಚಿತಾರ್ಥಕ್ಕೆ ಆಪ್ತರು ಹಾಗೂ ಕುಟುಂಬದವರು ಮಾತ್ರ ಆಗಮಿಸಿದ್ದರು. ಮದುವೆಗೆ ಅವರು ಚಿತ್ರರಂಗದವರಿಗೆ ಆಮಂತ್ರಣ ನೀಡುವ ಸಾಧ್ಯತೆ ಇದೆ. ಅವರ ಅಭಿಮಾನಿ ಬಳಗ ದೊಡ್ಡದಿದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಅವರದ್ದು ಅರೇಂಜ್ ಮ್ಯಾರೆಜ್ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.