ಹಿಂದಿನ ಕಾಲದ ಅಜ್ಜಿ ಹೇಳುವ ಕಥೆಗಳ ಜಾಗವನ್ನು ವ್ಯಾಪಕವಾಗಿ ರಿಪ್ಲೇಸ್ ಮಾಡುತ್ತಿರುವುದು ಇಂದಿನ ಕಾಲದ ಕಾರ್ಟೂನ್ (Cartoon Show) ಶೋಗಳು. ಮೊಬೈಲ್, ಟಿವಿ.. ಹೀಗೆ ಬಗೆಬಗೆಯ ಸಾಧನಗಳಿಗೆ ಮಕ್ಕಳು ಅಂಟಿಕೊಂಡಿರುವ ಹೊತ್ತಿನಲ್ಲಿ ಕಾರ್ಟೂನ್ ಶೋಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸಿದ್ಧಿಯನ್ನು ಪಡೆದಿವೆ. ಹಾಗೆ ನೋಡಿದರೆ ಭಾರತದಲ್ಲಿ ಮಕ್ಕಳಿಗೆ ಹೇಳುವ ಕಥೆಗಳಿಗೇನೂ ಬರವಿಲ್ಲ. ಆದರೆ ಅವು ಹೊಸ ಮಾಧ್ಯಮಗಳಲ್ಲಿ ಮೂಡಿಬರುತ್ತಿರುವುದು ಕಡಿಮೆ. ಹಾಗಾಗಿಯೇ ವಿದೇಶಿ ಕಾರ್ಟೂನ್ ಶೋಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯಗೊಂಡಿವೆ. ಅಂಥ ಒಂದು ಜನಪ್ರಿಯ ಕಾರ್ಟೂನ್ ಶೋ ‘ಮಾಶಾ ಆ್ಯಂಡ್ ದಿ ಬೇರ್’ (Masha and the Bear) ಬಗ್ಗೆ ಇಲ್ಲಿದೆ ಹೊಸ ಮಾಹಿತಿ..
‘ನಿಕ್ ಜ್ಯೂನಿಯರ್’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಕ್ಕಳ ಈ ಕಾರ್ಟೂನ್ ಸಿರೀಸ್‌ಗೆ ಹಿರಿಯ ಅಭಿಮಾನಿಗಳೂ ಸಾಕಷ್ಟಿದ್ದಾರೆ. ಪುಟ್ಟ ಮುದ್ದು ಹುಡುಗಿ ಮಾಶಾ ಮತ್ತು ಅವಳನ್ನು ಸಲುಹುವ ಪೆದ್ದುಮುದ್ದು ಬೇರ್ ಇಬ್ಬರ ಜೋಡಿಯ ಬಗೆಬಗೆಯ ಆಟ-ತುಂಟಾಟಗಳು ಎಲ್ಲ ವಯಸ್ಸಿನವರಿಗೂ ಮುದ ನೀಡುವಂಥವು. ಹಾಗಾಗಿಯೇ ‘ಮಾಶಾ ಆ್ಯಂಡ್ ದಿ ಬೇರ್’ ಕಾರ್ಟೂನ್ ಶೋ ಜಗತ್ತಿನಾದ್ಯಂತ ಪ್ರೀಸ್ಕೂಲ್ ಮಟ್ಟದ ಮಕ್ಕಳು ಅತ್ಯಂತ ಹೆಚ್ಚು ನೋಡುವ ಕಾರ್ಟೂನ್ ಶೋ ಎಂದು ಖ್ಯಾತಿಗಳಿಸಿದೆ. ಹದಿನೆಂಟು ವರ್ಷ ವಯಸ್ಸಿನೊಳಗಿನವರು ಅತಿಹೆಚ್ಚು ನೋಡುವ ಐದು ಕಾರ್ಟೂನ್ ಶೋಗಳಲ್ಲಿಯೂ ‘ಮಾಶಾ ಆ್ಯಂಡ್ ದಿ ಬೇರ್’ ಸ್ಥಾನ ಪಡೆದುಕೊಂಡಿವೆ.
‘ಮಾಶಾ ಆ್ಯಂಡ್ ದಿ ಬೇರ್’ ಕಾರ್ಟೂನ್ ಶೋ ಮೂಲ ಇರುವುದು ರಷ್ಯಾದಲ್ಲಿ. ರಷ್ಯಾದಲ್ಲಿ ಇದೇ ಹೆಸರಿನಲ್ಲಿ ಪ್ರಚಲಿತವಿರುವ ಜಾನಪದ ಕಥೆಗಳನ್ನು ಆಧರಿಸಿ ಓಲೆಗ್ ಕುಝೋವ್‌ಕೊವ್ ಅವರು ಈ ಕಾರ್ಟೂನ್ ಸಿರೀಸ್ ಪ್ರಾರಂಭಿಸಿದರು. ನಂತರ ಆ ದೇಶದ ಗಡಿಯನ್ನು ದಾಟಿ ಈ ಪುಟ್ಟ ಹುಡುಗಿ ಮತ್ತು ಕರಡಿಮಾಮ ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಟಿವಿಯಲ್ಲಿ, ಯೂಟ್ಯೂಬ್‌ನಲ್ಲಿ, ಓಟಿಟಿ ವೇದಿಕೆಗಳಲ್ಲಿಯೂ ಈ ಶೋಗೆ ಸಾಕಷ್ಟು ಪ್ರೇಕ್ಷಕರು ಇದ್ದಾರೆ.
ಭಾರತದಲ್ಲಿಯೂ ಮಾಶಾ ಮತ್ತು ಬೇರ್ ಜೋಡಿ ಸಾಕಷ್ಟು ಜನಪ್ರಿಯವಾಗಿವೆ. ಪುಟ್ಟ ಮಕ್ಕಳಿಗೆಲ್ಲ ಚಿರಪರಿಚಿತವಾಗಿರುವ ಮಾಶಾ ಮತ್ತು ಬೇರ್ ತಮ್ಮ ಅಭಿಮಾನಿಗಳನ್ನು ಭೇಟಿಯಾಗಲು, ಅವರ ಮುಂದೆ ಲೈವ್ ಪ್ರದರ್ಶನ ನೀಡಲು ಮೊಟ್ಟಮೊದಲಬಾರಿಗೆ ಭಾರತಕ್ಕೆ ಬರುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ಮಾಶಾ ಆ್ಯಂಡ್ ದಿ ಬೇರ್ ಮೋಡಿ ಮಾಡಲು ಸಜ್ಜುಗೊಂಡಿರುವುದು ಇನ್ನೊಂದು ವಿಶೇಷ. ವಯಕಾಮ್18 ಲೈವ್ ಸಂಸ್ಥೆ, ಈ ಲೈವ್ ಶೋ ನಿರ್ಮಿಸಿದ್ದು, ಎಚ್‌ಎಸ್‌ಬಿಸಿ ಇಂಡಿಯಾ ಇದನ್ನು ಪ್ರಸ್ತುತಪಡಿಸುತ್ತಿದೆ. ‘ಮಾಶಾ ಆ್ಯಂಡ್ ದಿ ಬೇರ್’ ಶೋ ವೀಕ್ಷಿಸಲು ನಿಮ್ಮ ಟಿಕೆಟ್‌ಗಳನ್ನು www.kidsdayout.co ಮೂಲಕ ಬುಕ್ ಮಾಡಬಹುದು. ಟಿಕೆಟ್ ಬುಕ್ ಮಾಡಿಕೊಂಡವರಿಗೆ ಪ್ರದರ್ಶನದ ಸ್ಥಳ, ಸಮಯದ ಮಾಹಿತಿಯನ್ನು ಸಿಗಲಿದೆ.
ಇದನ್ನೂ ಓದಿ: ಕಾರ್ಟೂನ್ ಚಟಕ್ಕೆ ಬಿದ್ದಿದ್ದ ಬಾಲಕ ಅನುಮಾನಾಸ್ಪದ ಸಾವು
ಡಿಸೆಂಬರ್ 23ರಂದು ಮುಂಬೈನಿಂದ ಈ ಲೈವ್ ಶೋ ಪ್ರಾರಂಭವಾಗಲಿದೆ. ನಂತರ ದೆಹಲಿ, ಹೈದರಾಬಾದ್‌ಗಳಲ್ಲಿ ಪ್ರದರ್ಶನ ನೀಡಿ 2024ರ ಫೆಬ್ರವರಿ 10 ಮತ್ತು 11ರಂದು ಬೆಂಗಳೂರಿನಲ್ಲಿ ಹಲವು ಪ್ರದರ್ಶನಗಳು ನಡೆಯಲಿವೆ. ‘ಅ ವೆರಿ ಡಿಕೆಕ್ಟೀವ್ ಸ್ಟೋರಿ’ ಎಂಬುದು ಈ ಲೈವ್ ಶೋ ಅಡಿಟಿಪ್ಪಣಿ. ಇದಕ್ಕೆ ಅನುಗುಣವಾಗಿ ಪತ್ತೇಧಾರಿ ಕಥೆಯೊಂದನ್ನು ಮಾಶಾ ಮತ್ತು ಬೇರ್ ವೇದಿಕೆಯ ಮೇಲೆ ಪ್ರದರ್ಶಿಸಲಿದ್ದಾರೆ. ಮನೆಯಲ್ಲಿ ಕಳುವಾಗಿರುವ ವಸ್ತುವೊಂದನ್ನು ಹುಡುಕುವ ದಾರಿಯಲ್ಲಿ ಅವರು ಪ್ರೇಕ್ಷಕರ ಸಹಾಯವನ್ನೂ ಪಡೆದುಕೊಳ್ಳುತ್ತಾರೆ. ಅಂದರೆ ನೋಡಲು ಕೂತವರೂ ಈ ಕಾರ್ಯಕ್ರಮ ಭಾಗವೇ ಆಗುತ್ತಾರೆ. ಈ ಕಾರ್ಟೂನ್ ಸರಣಿಯಲ್ಲಿರುವ ಪ್ರೊಫೆಸರ್ ನಾನ್‌ಬೆಲೆವಿಯಸ್, ರೋಸಿ, ಪಾಂಡಾ, ಸ್ಲೈ ಫಾಕ್ಸ್ ಮತ್ತು ಸಿಲ್ಲಿ ಫಾಕ್ಸ್ ಸೇರಿದಂತೆ ಇನ್ನೂ ಹಲವು ಪಾತ್ರಗಳು ಈ ಶೋನ ಭಾಗವಾಗಿರುತ್ತವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.