Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಬಿಗ್​ಬಾಸ್ ಮನೆಯಿಂದ ಹೊರ ಹೋಗಿದ್ಯಾರು?

Bigg Boss: ಬಿಗ್​ಬಾಸ್ ಕನ್ನಡ ಒಂಬತ್ತನೇ ವಾರ ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿದ್ದು ಯಾರು?

ಈ ವಾರ ಬಿಗ್​ಬಾಸ್ ಮನೆಯಿಂದ ಹೊರ ಹೋಗಿದ್ಯಾರು?
ಸುದೀಪ್
Follow us
ಮಂಜುನಾಥ ಸಿ.
|

Updated on: Dec 10, 2023 | 11:12 PM

ಬಿಗ್​ಬಾಸ್ (Bigg Boss) ಮನೆಯಲ್ಲಿ ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ಅಂತಿಮವಾಗಿ ಮೈಖಲ್ ಹಾಗೂ ಸ್ನೇಹಿತ್ ಇಬ್ಬರೂ ಉಳಿದಿದ್ದರು. ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಬೇಕಿತ್ತು. ಆದರೆ ಸುದೀಪ್ ತಮ್ಮ ವಿಶೇಷ ಅಧಿಕಾರ ಬಳಿ ಇಬ್ಬರನ್ನೂ ಉಳಿಸಿದ್ದರು. ಆದರೆ ಈ ವಾರ ಹಾಗೆ ಆಗಲಿಲ್ಲ. ಈ ವಾರ ಮನೆಯಿಂದ ಒಬ್ಬರು ಹೊರಗೆ ಬಂದಿದ್ದಾರೆ. ಅದೂ ಮನೆಯ ಸಕ್ರಿಯ ಸದಸ್ಯರಲ್ಲಿ ಒಬ್ಬರಾಗಿದ್ದವರೇ ಹೊರಗೆ ಬಂದಿದ್ದಾರೆ. ಅವರೇ ಸ್ನೇಹಿತ್.

ಎರಡು ಬಾರಿ ಕ್ಯಾಪ್ಟನ್ ಆಗಿದ್ದ ಸ್ನೇಹಿತ್, ಟಾಸ್ಕ್​ಗಳಲ್ಲಿ, ಮನೆಯ ಇತರೆ ವಿಷಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಆದರೆ ಅವರು ವಿನಯ್ ಹಾಗೂ ನಮ್ರತಾ ಇಬ್ಬರ ನೆರಳಿನಲ್ಲಿಯೇ ಬಹುತೇಕ ಇದ್ದರು. ಇದೇ ಅವರಿಗೆ ಸಮಸ್ಯೆಯಾಯಿತು. ಅತಿಯಾದ ಸೂಕ್ಷ್ಮತೆ ಪ್ರದರ್ಶಿಸಲು ಹೋಗಿ ಅಥವಾ ಅತಿಯಾದ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ಪ್ರತಿವಾರ ಸುದೀಪ್ ಅವರಿಂದ ಟೀಕೆಗಳನ್ನು ಎದುರಿಸುತ್ತಿದ್ದರು. ಸುದೀಪ್ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಒಮ್ಮೆ ಅಳಲು ಸಹ ತೋಡಿಕೊಂಡಿದ್ದರು. ಕೊನೆಗೆ ಈ ವಾರ ಮನೆಯಿಂದ ಹೊರಗೆ ಹೋಗಿದ್ದಾರೆ.

ವಿನಯ್ ಹಾಗೂ ನಮ್ರತಾ ನೆರಳಿಲ್ಲಿಯೇ ಆಡುತ್ತಿದ್ದ ಸ್ನೇಹಿತ್ ಅವರನ್ನು ಜನ ಉಳಿಸಿಕೊಳ್ಳಲಿಲ್ಲ. ಈ ವಾರ, ಡ್ರೋನ್, ಸಂಗೀತಾ, ತನಿಷಾ, ಕಾರ್ತಿಕ್, ಸಿರಿ, ಅವಿನಾಶ್, ಪವಿ, ಮೈಖಲ್ ಹಾಗೂ ಸ್ನೇಹಿತ್ ಅವರು ನಾಮಿನೇಟ್ ಆಗಿದ್ದರು. ಶನಿವಾರ, ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಅವರು ಎಲಿಮಿನೇಷನ್​ನಿಂದ ಪಾರಾಗಿದ್ದರು. ಭಾನುವಾರದಂದು ಮೊದಲಿಗೆ ತನಿಷಾ ಸೇಫ್ ಆದರು, ಅದಾದ ಬಳಿಕ ಕಾರ್ತಿಕ್ ಸೇಫ್ ಆದರು. ಬಳಿಕ ಸಿರಿ ಆ ನಂತರ ಮೈಖಲ್, ಪವಿ ಸೇಫ್ ಆದರು. ಕೊನೆಯದಾಗಿ ಅವಿನಾಶ್ ಹಾಗೂ ಸ್ನೇಹಿತ್ ಉಳಿದುಕೊಂಡರು. ‘ಸ್ನೇಹಿತ್, ಈ ವಾರ ನಿಮ್ಮ ಜರ್ನಿ ಇಲ್ಲಿಗೆ ಮುಗಿಯಿತು’ ಎಂದು ಸ್ನೇಹಿತ್​ರನ್ನು ಹೊರಗೆ ಕಳಿಸಿದರು.

ಇದನ್ನೂ ಓದಿ:ಬಿಗ್​ಬಾಸ್ ಕ್ಯಾಪ್ಟನ್ ಮನೆಗೆ ಬೀಗ ಹಾಕಿಸಿದ ಕಿಚ್ಚ ಸುದೀಪ್: ಕಾರಣವೇನು?

ಮನೆಯಿಂದ ಹೊರಗಡೆ ಬಂದ ಮೇಲೆ ಸುದೀಪ್ ಜೊತೆ ಮಾತನಾಡುತ್ತಾ, ಬಿಗ್​ಬಾಸ್​ ಬಗ್ಗೆ ಇಷ್ಟು ದಿನ ಬೇರೇನೋ ಅಂದುಕೊಂಡಿದ್ದೆ ಆದರೆ ಇಲ್ಲಿ ನೋಡಿದಾಗ ಬೇರೆಯೇ ಆಯಿತು. ಬಿಗ್​ಬಾಸ್ ಮನೆಗೆ ಹೋಗಿ ಧೈರ್ಯ ಪಡೆದುಕೊಂಡಿದ್ದೇನೆ. ಅಲ್ಲದೆ ಮೈಖಲ್, ವಿನಯ್ ಹಾಗೂ ನಮ್ರತಾ ಅಂಥಹಾ ಬಹಳ ಒಳ್ಳೆಯ ಗೆಳೆಯರು ಸಿಕ್ಕಿದ್ದಾರೆ. ನಾವು ಹೊರಗಡೆಯೂ ಒಳ್ಳೆಯ ಗೆಳೆಯರಾಗಿರುತ್ತೇವೆ ಎಂದರು.

ಸ್ನೇಹಿತ್, ಬಿಗ್​ಬಾಸ್ ಕನ್ನಡ 10ನೇ ಸೀಸನ್​ನ ಮೊದಲ ಕ್ಯಾಪ್ಟನ್ ಹಾಗೂ ಕೊನೆಯ ಕ್ಯಾಪ್ಟನ್ ಸಹ ಅವರೇ. ಮೊದಲ ವಾರ ಸ್ನೇಹಿತ್ ಕ್ಯಾಪ್ಟನ್ ಆಗಿದ್ದರು. ಈಗ ಎಲಿಮಿನೇಟ್ ಆಗುವ ಮುನ್ನವೇ ಅವರೇ ಕ್ಯಾಪ್ಟನ್ ಆಗಿದ್ದರು. ಆದರೆ ಅವರ ಬಳಿಕ ಕ್ಯಾಪ್ಟನ್ ಆದ ವರ್ತೂರು ಸಂತೋಷ್, ಮೋಸ ಮಾಡಿ ಕ್ಯಾಪ್ಟನ್ ಆಗಿದ್ದ ಕಾರಣ ಕ್ಯಾಪ್ಟನ್ ರೂಂಗೆ ಬಾಗಿಲು ಹಾಕಲಾಗಿದ್ದು, ಕ್ಯಾಪ್ಟೆನ್ಸಿ ಟಾಸ್ಕ್ ಅನ್ನೇ ನಿಲ್ಲಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ
ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ