ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಮೂರು ದಿನಗಳ ಹಿಂದೆಯಷ್ಟೆ ಬಿಡುಗಡೆ ಆಗಿದ್ದು, ಭಾರಿ ಯಶಸ್ಸು ಗಳಿಸಿದೆ. ಸಿನಿಮಾ ಮೊದಲ ದಿನವೇ 8.50 ಕೋಟಿಗೂ ಹೆಚ್ಚು ಹಣ ಗಳಿಸಿದೆ. ದಿನೇ ದಿನೇ ಗಳಿಕೆಯನ್ನು ಉತ್ತಮ ಪಡಿಸಿಕೊಳ್ಳುತ್ತಾ ಸಾಗುತ್ತಿದೆ. ಪರಭಾಷೆಗಳಲ್ಲಿಯೂ ಸಿನಿಮಾಕ್ಕೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಈ ವರ್ಷ ಮೊದಲ ದಿನ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಮ್ಯಾಕ್ಸ್’ ಸಿನಿಮಾ ಪಾತ್ರವಾಗಿದೆ. ಇದೀಗ ಬಿಗ್ಬಾಸ್ ಮನೆಯಲ್ಲಿ ‘ಮ್ಯಾಕ್ಸ್’ ಸಿನಿಮಾ ಗೆಲುವಿನ ಸಂಭ್ರಮಾಚರಣೆ ಮಾಡಲಾಗಿದೆ.
ಬಿಗ್ಬಾಸ್, ಮನೆ ಮಂದಿಯನ್ನೆಲ್ಲ ಕರೆದು, ‘ನಿಮಗೆ ಹೊರ ಪ್ರಪಂಚದಲ್ಲಿ ಭಾರಿ ಸುದ್ದಿಯಾಗಿರುವ ವಿಷಯದ ಬಗ್ಗೆ ಹೇಳಲೇ ಬೇಕಿದೆ ಎಂದು ಹೇಳಿ, ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗಿ ಭಾರಿ ಕಲೆಕ್ಷನ್ ಮಾಡುತ್ತಿರುವ, ಜನಪ್ರೀತಿ ಗಳಿಸಿರುವ ವಿಚಾರವನ್ನು ಹೇಳಿದರು. ಆ ನಂತರ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಯನ್ನು ರಾಜ್ಯದಾದ್ಯಂತ ಅಭಿಮಾನಿಗಳು ಸಂಭ್ರಮಿಸಿದ ವಿಡಿಯೋಗಳನ್ನು ತೋರಿಸಿದರು. ಆ ನಂತರ ಬಿಗ್ಬಾಸ್ ಸ್ಪರ್ಧಿ ನಟ ಉಗ್ರಂ ಮಂಜುಗೂ ಅಭಿನಂದನೆ ಸಲ್ಲಿಸಲಾಯ್ತು. ಬಳಿಕ ಬಿಗ್ಬಾಸ್ ವಿಶೇಷ ಕೇಕ್ ಒಂದನ್ನು ಮನೆಯ ಒಳಗೆ ಕಳಿಸಿದರು. ಅದನ್ನು ಎಲ್ಲ ಸ್ಪರ್ಧಿಗಳು ಸೇರಿ ಕಟ್ ಮಾಡಿ ಖುಷಿ ಆಚರಿಸಿದರು. ಆ ಬಳಿಕ ಬಿಗ್ಬಾಸ್, ಸುದೀಪ್ಗೂ ಸಹ ಅಭಿನಂದನೆ ಸಲ್ಲಿಸಿದರು.
ಇದನ್ನೂ ಓದಿ:ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಸುದೀಪ್ ತೆರೆಯ ಮೇಲೆ ಬಂದಾಗ, ಮನೆಯ ಸ್ಪರ್ಧಿಗಳು ಸುದೀಪ್ಗೆ ಅಭಿನಂದನೆ ಸಲ್ಲಿಸಿದರು. ಸುದೀಪ್ ಅವರು ಉಗ್ರಂ ಮಂಜುಗೆ ಅಭಿನಂದನೆ ಸಲ್ಲಿಸಿದರು. ಎರಡು ವರ್ಷಗಳ ಶ್ರಮ ಸಾರ್ಥಕವಾದ ಬಗ್ಗೆ ಉಗ್ರಂ ಮಂಜು ಭಾವುಕರಾಗಿ ಮಾತನಾಡಿದರು. ಈ ವೇಳೆ ಸುದೀಪ್, ಸಿನಿಮಾ ಇಷ್ಟು ದೊಡ್ಡ ಗೆಲುವಾಗಲು ನನ್ನ ತಾಯಿಯ ಆಶೀರ್ವಾದವೂ ಕಾರಣ ಎಂದರು. ನಾವು ಚಿಕ್ಕದಾಗಿ ಏನೋ ಮಾಡಲು ಹೋದೆವು, ಅದು ಸ್ವಲ್ಪ ದೊಡ್ಡದಾಯ್ತು, ಜನ ಇದನ್ನು ಭಾರಿ ದೊಡ್ಡದಾಗಿ ಮಾಡಿದ್ದಾರೆ ಎಂದರು.
‘ಮ್ಯಾಕ್ಸ್’ ಸಿನಿಮಾ ಅನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದು, ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ಥನು ಅವರು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಕೇವಲ ಒಂದೇ ದಿನದಲ್ಲಿ ನಡೆಯುವ ಕತೆ ಒಳಗೊಂಡಿದೆ. ಸಿನಿಮಾದಲ್ಲಿ ಸಖತ್ ಆಕ್ಷನ್ ಹಾಗೂ ಥ್ರಿಲ್ಲರ್ ಅಂಶಗಳು ಇವೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾದ ತಮಿಳು ಹಾಗೂ ತೆಲುಗು ಆವೃತ್ತಿಗಳು ಬಹಳ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ