ನಾಯಿ ತೊಳೆಯುವ ಕೆಲಸ; ಪ್ರತಿ ದಿನ 10 ಸಾವಿರ ಸಂಬಳ: ಇಲ್ಲಿದೆ ಬಿಸ್ನೆಸ್ ಐಡಿಯಾ

ಒಂದು ನಾಯಿಗೆ ಸ್ನಾನ ಮಾಡಿಸಲು 1200 ರೂಪಾಯಿ ಸಂಬಳ. ದಿನಕ್ಕೆ 10 ನಾಯಿಯ ಮೈ ತೊಳೆದರೆ 10 ಸಾವಿರ ಸಂಬಳ ಸಿಗುತ್ತದೆ. ಇಂಥ ಒಂದು ಬೆಸ್ಟ್​ ಬಿಸ್ನೆಸ್​ ಐಡಿಯಾ ಬಗ್ಗೆ ಚರ್ಚೆ ಆಗಿದ್ದು ಬಿಗ್ ಬಾಸ್ ಮನೆಯ ಒಳಗೆ. ಹನುಮಂತ ಅವರ ತಲೆಗೆ ಈ ಐಡಿಯಾ ಹೊಳೆದಿದೆ. ಹಾಗಂತ ಇದು ಕಾಲ್ಪನಿಕ ಅಲ್ಲ. ಹನುಮಂತ ಅವರ ಲೆಕ್ಕಾಚಾರ ಸರಿಯಾಗಿಯೇ ಇದೆ.

ನಾಯಿ ತೊಳೆಯುವ ಕೆಲಸ; ಪ್ರತಿ ದಿನ 10 ಸಾವಿರ ಸಂಬಳ: ಇಲ್ಲಿದೆ ಬಿಸ್ನೆಸ್ ಐಡಿಯಾ
Bigg Boss Kannada 11
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on:Dec 28, 2024 | 8:05 AM

ಬಿಗ್ ಬಾಸ್ ಮನೆಯಲ್ಲಿ ಜಗಳದ ಜೊತೆ ಸಿಕ್ಕಾಪಟ್ಟೆ ಫನ್​ ಕೂಡ ಇರುತ್ತದೆ. ಕಾಮಿಡಿ ಕಲಾವಿದರು ಬಿಗ್ ಬಾಸ್ ಮನೆಯಲ್ಲಿ ಆ್ಯಕ್ಟೀವ್ ಆಗಿದ್ದರೆ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ಸಿಗುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಹನುಮಂತ ಮತ್ತು ಧನರಾಜ್ ಅವರು ಭರ್ಜರಿ ಕಾಮಿಡಿ ಮಾಡುತ್ತಿದ್ದಾರೆ. ಆದರೆ ಎಲ್ಲ ಎಪಿಸೋಡ್​ನಲ್ಲಿ ಅವರು ನಗಿಸುವುದಿಲ್ಲ. ಒಂದು ವೇಳೆ ಅವರಿಬ್ಬರು ನಗಿಸಲು ನಿಂತರೆ ಡಬಲ್ ಮನರಂಜನೆ ಗ್ಯಾರಂಟಿ. ಇತ್ತೀಚಿನ ಎಪಿಸೋಡ್​ನಲ್ಲಿ ಅಂಥ ಮನರಂಜನೆ ಕಾಣಿಸಿತು. ಹನುಮಂತ ಅವರು ನಾಯಿ ತೊಳೆಯುವ ಭರ್ಜರಿ ಬಿಸ್ನೆಸ್​ ಐಡಿಯಾ ಕೊಟ್ಟರು.

ಐಶ್ವರ್ಯಾ ಸಿಂಧೋಗಿ ಅವರ ಮನೆಯಲ್ಲಿ ಸಿಂಬಾ ಎಂಬ ಶ್ವಾನ ಸಾಕಿದ್ದಾರೆ. ಆ ಶ್ವಾನವನ್ನು ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಡಿಸೆಂಬರ್​ 27ರ ಸಂಚಿಕೆಯಲ್ಲಿ ಅವರು ಸಿಂಬಾ ಬಗ್ಗೆ ಮಾತನಾಡಿದ್ದಾರೆ. ಆಗ ಧನರಾಜ್ ಮತ್ತು ಹನುಮಂತ ಅವರು ಹಲವು ಪ್ರಶ್ನೆ ಕೇಳಿದ್ದಾರೆ. ನಾಯಿಗೆ ಸ್ನಾನ ಮಾಡಿಸುತ್ತೀರಾ ಎಂಬ ಪ್ರಶ್ನೆ ಕೂಡ ಎದುರಾಯಿತು.

ಈ ಪ್ರಶ್ನೆಗೆ ಐಶ್ವರ್ಯಾ ಸಿಂಧೋಗಿ ಅವರು ಒಂದು ಅಚ್ಚರಿಯ ಉತ್ತರ ನೀಡಿದರು. ‘ನನಗೆ ಟೈಮ್​ ಇರುವುದಿಲ್ಲ. ಸಿಂಬಾಗೆ ಸ್ನಾನ ಮಾಡಿಸಲು ಹೊರಗಡೆಯಿಂದ ಜನ ಬರುತ್ತಾರೆ. ಒಮ್ಮೆ ಸ್ನಾನ ಮಾಡಿಸಲು 1200 ರೂಪಾಯಿ ನೀಡಬೇಕು’ ಎಂದು ಐಶ್ವರ್ಯಾ ಹೇಳಿದರು. 1200 ರೂಪಾಯಿ ಎಂಬ ವಿಷಯ ಕೇಳಿ ಹನುಮಂತ ಅವರಿಗೆ ಅಚ್ಚರಿ ಆಯಿತು. ಆಗ ಅವರು ಒಂದು ಬಿಸ್ನೆಸ್​ ಐಡಿಯಾದ ಬಗ್ಗೆ ಮಾತನಾಡಿದರು.

ತಾವು ಕೂಡ ನಾಯಿ ತೊಳೆಯುವ ಕೆಲಸ ಮಾಡಬಹುದು. ನಾಯಿ ತೊಳೆಯುತ್ತೇವೆ ಅಂತ ರಸ್ತೆಯಲ್ಲಿ ಕೂಗುತ್ತಾ ಹೋದರೆ ಆಯಿತು. ದಿನಕ್ಕೆ 10 ನಾಯಿ ತೊಳದರೆ 10 ಸಾವಿರ ಸಿಗುತ್ತದೆ ಎಂದು ಹನುಮಂತ ಅವರು ಸ್ಕೆಚ್​ ಹಾಕಿದ್ದಾರೆ. ಮದುವೆ ಆಗುವಾಗ ‘ಹುಡುಗ ಏನು ಕೆಲಸ ಮಾಡುತ್ತಾನೆ’ ಅಂತ ಹುಡುಗಿ ಕಡೆಯವರು ಕೇಳಿದರೆ, ‘ನಾಯಿ ತೊಳೆಯುತ್ತಾನೆ’ ಎನ್ನಬಹುದು ಅಂತ ಧನರಾಜ್ ಅವರು ಕಾಮಿಡಿ ಮಾಡಿದ್ದಾರೆ. ಒಟ್ಟಾರೆ ಈ ಸಂಭಾಷಣೆ ಸಖನ್ ಫನ್ ಆಗಿತ್ತು.

ಇದನ್ನೂ ಓದಿ: ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ

ಬಿಗ್ ಬಾಸ್ ಮನೆಯಲ್ಲಿ ಈಗ 90 ದಿನಗಳ ಕಳೆದಿವೆ. ಫಿನಾಲೆ ಸಮೀಪಿಸುತ್ತಿದೆ. ಈ ವಾರ ಭವ್ಯಾ ಗೌಡ ಮತ್ತು ರಜತ್​ ಹೊರತುಪಡಿಸಿ ಉಳಿದ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಯಾರು ಔಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:10 pm, Fri, 27 December 24