ಮಂಜು, ಮೋಕ್ಷಿತಾ ಹಾಗೂ ಗೌತಮಿ ಒಂದು ತಂಡವಾಗಿ ಆಟ ಆಡುತ್ತಿದ್ದರು. ಆದರೆ, ಈ ಆಟ ಹೆಚ್ಚು ದಿನ ಉಳಿಯಲೇ ಇಲ್ಲ. ಮೋಕ್ಷಿತಾ ಅವರು ತಮ್ಮದೇ ನಿರ್ಧಾರ ಮಾಡಿ ಇವರಿಂದ ದೂರ ಆದರು. ಮಂಜು ಸಮಯಸಾಧಕ ಎನ್ನುವ ಪಟ್ಟ ಕಟ್ಟಿದರು. ಆದರೆ, ಈಗ ಫಿನಾಲೆ ವಾರ ಬರುತ್ತಿದ್ದಂತೆ ಎಲ್ಲವೂ ಬದಲಾಗಿದೆ. ಇವರ ಮಧ್ಯೆ ಮತ್ತೆ ಎಲ್ಲವೂ ಸರಿಯಾದಂತೆ ಕಾಣಿಸಿದೆ. ಅವರು ಮಂಜು ಬಿಗಿದಪ್ಪಿ ಮಗುವಿನಂತೆ ಕಣ್ಣೀರು ಹಾಕಿದ್ದಾರೆ.
ಮೋಕ್ಷಿತಾ ಭಾವನಾತ್ಮಕ ಜೀವಿ. ಅವರು ಎಲ್ಲರ ಗೆಳೆತನಕ್ಕೆ ಬೆಲೆ ಕೊಡುತ್ತಾರೆ. ಜನವರಿ 14ರ ಟಾಸ್ಕ್ನಲ್ಲಿ ಮೋಕ್ಷಿತಾ ಹಾಗೂ ಮಂಜು ಮಾತನಾಡುತ್ತಿದ್ದರು. ಮಂಜು ಅವರ ಮಾತನ್ನು ಕೇಳಿ ಮೋಕ್ಷಿತಾಗೆ ಅಳುವೇ ಬಂದಿದೆ. ಅವರು ಗಳಗಳನೆ ಅತ್ತಿದ್ದಾರೆ. ಮಳೆ ಹನಿಯಂತೆ ಕಣ್ಣೀರು ಬಂದಿದೆ. ಆಗ ಮಂಜು ಅವರು ಸಮಾಧಾನ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ.
‘ನಾನು ಜೀರೋ ಆಗಿಬಿಟ್ಟಿದ್ದೇನೆ. ಮೆಮೋರಿಸ್ ಹಾಕ್ಕೋತ್ತೀನಿ. ರಿಸಲ್ಟ್ ಬಗ್ಗೆ ಏನೂ ತಲೆಕೆಡಿಸಿಕೊಳ್ಳೋಕೆ ಆಗಲ್ಲ’ ಎನ್ನುತ್ತಿದ್ದಂತೆ ಮೋಕ್ಷಿತಾಗೆ ಭಯ ಆರಂಭ ಆಯಿತು. ಮಂಜು ಎಲಿಮಿನೇಟ್ ಆಗಿಬಿಟ್ಟರೆ ಅನಿಸಿತು. ಅತ್ತ ನಾಮಿನೇಟ್ ಆಗಿರುವ ಗೌತಮಿ ಅವರು ಬ್ಯಾಗ್ ತುಂಬುತ್ತಾ ಇರುವುದನ್ನು ನೋಡಿ ಮೋಕ್ಷಿತಾ ಕರುಳು ಚುರುಕ್ ಎಂದಿತು. ಇವರು ಎಲಿಮಿನೇಟ್ ಆದರೆ ಅಥವಾ ತಾವೇ ಎಲಿಮಿನೇಟ್ ಆದರೆ ಎನ್ನುವ ಭಯ ಅವರನ್ನು ಕಾಡಲು ಆರಂಭಿಸಿತು. ಹೀಗಾಗಿ, ಅವರು ಕಣ್ಣೀರು ಹಾಕೋಕೆ ಆರಂಭಿಸಿದರು. ಆಗ ಮಂಜು ಸಮಾಧಾನ ಮಾಡಿದರು. ಆ ಬಳಿಕ ಮೋಕ್ಷಿತಾ ಅವರು ಗೌತಮಿ ಬಳಿ ಬಂದು ತಮ್ಮ ದುಃಖ ತೋಡಿಕೊಂಡರು. ಗೌತಮಿ ಕೂಡ ಸಮಾಧಾನ ಮಾಡುವ ಪ್ರಯತ್ನ ಮಾಡಿದರು.
ಇದನ್ನೂ ಓದಿ: ಮತ್ತೆ ಒಂದಾದ ಮಂಜು, ಮೋಕ್ಷಿತಾ, ಗೌತಮಿ; ಇದೇನು ಹೊಸ ಡ್ರಾಮಾ?
ಈ ವಾರದ ನಾಮಿನೇಷನ್ ಲಿಸ್ಟ್ನಲ್ಲಿ ಮೋಕ್ಷಿತಾ, ರಜತ್, ತ್ರಿವಿಕ್ರಂ, ಭವ್ಯಾ, ಗೌತಮಿ ಹಾಗೂ ಮಂಜು ಇದ್ದಾರೆ. ಇವರ ಪೈಕಿ ಒಬ್ಬರು ವಾರದ ಮಧ್ಯದಲ್ಲಿ ಹೊರ ಹೋಗಲಿದ್ದಾರೆ. ಕ್ಯಾಪ್ಟನ್ ಹನುಮಂತ ಅವರನ್ನು ಹೊರತುಪಡಿಸಿ ಒಬ್ಬರು ವೀಕೆಂಡ್ನಲ್ಲಿ ಎಲಿಮಿನೇಟ್ ಆಗಲಿದ್ದಾರೆ. ಆ ಬಳಿಕ ಫಿನಾಲೆ ವಾರ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.