Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರಿಗೈಯಲ್ಲಿ ಹೋಗಿ ಮದುವೆ ಆಗಿದ್ದ ಸೋಮೇಶ್ವರ; ‘ವೀಕೆಂಡ್ ವಿತ್ ರಮೇಶ್​’ ವೇದಿಕೆಯಲ್ಲಿ ಹೊರಬಿತ್ತು ಲವ್​ಸ್ಟೋರಿ

N Someswara: ಈ ವಾರದ ‘ವೀಕೆಂಡ್ ವಿತ್ ರಮೇಶ್’ ಎಪಿಸೋಡ್​​ಗೆ ಸೋಮೇಶ್ವರ ಆಗಮಿಸಿದ್ದಾರೆ. ಅವರ ಲವ್​ಸ್ಟೋರಿ ಹೊರಬಿದ್ದಿದೆ.

ಬರಿಗೈಯಲ್ಲಿ ಹೋಗಿ ಮದುವೆ ಆಗಿದ್ದ ಸೋಮೇಶ್ವರ; ‘ವೀಕೆಂಡ್ ವಿತ್ ರಮೇಶ್​’ ವೇದಿಕೆಯಲ್ಲಿ ಹೊರಬಿತ್ತು ಲವ್​ಸ್ಟೋರಿ
ಸೋಮೇಶ್ವರ ಹಾಗೂ ಅವರ ಪತ್ನಿ
Follow us
ರಾಜೇಶ್ ದುಗ್ಗುಮನೆ
|

Updated on: May 12, 2023 | 2:08 PM

ನಾ. ಸೋಮೇಶ್ವರ ಅವರು ಹೆಸರು ಹೇಳುತ್ತಿದ್ದಂತೆ ನೆನಪಾಗೋದು ‘ಥಟ್ ಅಂತ ಹೇಳಿ’ ಕಾರ್ಯಕ್ರಮ. ಚಂದನ ವಾಹಿನಿಯಲ್ಲಿ ಪ್ರಸಾರ ಆಗುವ ಈ ಕಾರ್ಯಕ್ರಮಕ್ಕೆ ದೊಡ್ಡ ವೀಕ್ಷಕರ ಬಳಗ ಇದೆ. ಸಾವಿರಾರು ಸಂಚಿಕೆಯನ್ನು ಪೂರೈಸಿರುವ ಈ ಕಾರ್ಯಕ್ರಮದ ವೀಕ್ಷಕರ ವರ್ಗ ಈಗಲೂ ಹಾಗೆಯೇ ಇದೆ. ನಾ. ಸೋಮೇಶ್ವರ (N Someswara) ಅವರು ವೈದ್ಯರಾಗಿ, ಲೇಖಕರಾಗಿ, ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರ (Weekend With Ramesh Season 5) ಈ ವಾರದ ಅತಿಥಿ ಆಗಿದ್ದಾರೆ. ಭಾನುವಾರ (ಮೇ 14) ಅವರ ಎಪಿಸೋಡ್ ಪ್ರಸಾರ ಆಗಲಿದೆ.

‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಹಲವು ವಿಚಾರಗಳನ್ನು ತೆರೆದಿಡಲಾಗುತ್ತದೆ. ಸಾಧಕರ ಕುರ್ಚಿ ಮೇಲೆ ಕುಳಿತವರ ಬದುಕಿನ ಏಳುಬೀಳುಗಳನ್ನು ಹೇಳಲಾಗುತ್ತದೆ. ಈ ಬಾರಿಯ ‘ವೀಕೆಂಡ್ ವಿತ್ ರಮೇಶ್’ ಎಪಿಸೋಡ್​​ಗೆ ಸೋಮೇಶ್ವರ ಆಗಮಿಸಿದ್ದಾರೆ. ಅವರ ಲವ್​ಸ್ಟೋರಿ ಹೊರಬಿದ್ದಿದೆ.

ಸೋಮೇಶ್ವರ ಅವರದ್ದು ಪ್ರೇಮ ವಿವಾಹ. ರುಕ್ಮಾವತಿ ಬಿ.ವಿ. ಅವರನ್ನು ಪ್ರೇಮಿಸಿ ಮದುವೆ ಆದರು. ಇವರ ಮದುವೆ ತುಂಬಾನೇ ಸಿಂಪಲ್ ಆಗಿ ನಡೆದಿತ್ತು. ‘ನಮ್ಮದು ಪ್ರೇಮ ವಿವಾಹ. ಯಾರಿಗೂ ತೊಂದರೆ ಆಗಬಾರದು ಎಂದು ಸರಳವಾಗಿ ಮದುವೆ ಆದ್ವಿ’ ಎಂದು ರುಕ್ಮಾವತಿ ಹೇಳಿದ್ದಾರೆ. ‘ಮದುವೆಗೆ ಹೊಸ ಬಟ್ಟೆ ಬೇಡ ಎಂಬ ನಿರ್ಧಾರಕ್ಕೆ ಬಂದ್ವಿ. ಹುಡುಗಿಗೆ ರೇಷ್ಮೇ ಸೀರೆ ಬೇಡ ಎಂದಾಯಿತು’ ಎಂದರು ಸೋಮೇಶ್ವರ. ‘ಬಂಧುಗಳಿಗಿಂತ ಹೆಚ್ಚಾಗಿ ಸ್ನೇಹಿತರು ಬಂದು ನಿಂತರು’ ಎಂದಿದ್ದಾರೆ ರುಕ್ಮಾವತಿ. ‘ನಿಜ ಹೇಳಬೇಕು ಎಂದರೆ ಬರಿಗೈಯಲ್ಲಿ ಹೋಗಿ ಮದುವೆ ಆಗಿರೋದು’ಎಂದರು ಸೋಮೇಶ್ವರ.

ಇದನ್ನೂ ಓದಿ: ಹೇಗಿತ್ತು ಅಂದಿನ ಮಲ್ಲೇಶ್ವರ? ‘ವೀಕೆಂಡ್ ವಿತ್ ರಮೇಶ್​’ ಕಾರ್ಯಕ್ರಮದಲ್ಲಿ ಎಳೆಎಳೆಯಾಗಿ ವಿವರಿಸಿದ ನಾ. ಸೋಮೇಶ್ವರ

ನಾ. ಸೋಮೇಶ್ವರ ಅವರು 1955ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಜನಿ ಸಿದರು. ಅಂದು ಬೆಂಗಳೂರು ಯಾವ ರೀತಿಯಲ್ಲಿತ್ತು ಎಂಬುದನ್ನು ‘ವೀಕೆಂಡ್ ವಿತ್ ರಮೇಶ್​’ ಎಪಿಸೋಡ್​ನಲ್ಲಿ ಅವರು ವಿವರಿಸಿದ್ದಾರೆ. ‘ಮಲ್ಲೇಶ್ವರದಲ್ಲಿ ಪ್ರಶಾಂತ ರಸ್ತೆ ಇತ್ತು. ಮಳೆ ಬಂತು ಎಂದರೆ ಕಾಗೆ ಬಂಗಾರ ಹುಡುಕಿಕೊಂಡು ಹೋಗುತ್ತಿದ್ವಿ. ಈಡುಗಾಯಿ ಒಡೆಯೋದನ್ನು ಕಾಯುತ್ತಿದ್ದೆವು. ಮೀನು ಎಂದು ಹಿಡಿದುಕೊಂಡು ಬರುತ್ತಿದೆ. ಮರುದಿನ ಅದು ಕಪ್ಪೆ ಆಗಿರುತ್ತಿತ್ತು. ಅನೇಕ ನೆನಪುಗಳ ಸಾಲು ಬರ್ತಿದೆ’ ಎಂದು ನಾ. ಸೋಮೇಶ್ವರ ಅವರು ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ