ಕೊನೆಗೂ ನಡೆಯಿತು ಶರತ್-ದುರ್ಗಾ ವಿವಾಹ: ಎಲ್ಲಾ ದೇವಿ ಮಹಿಮೆ
Na Ninna Bidalare serial: ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಶರತ್ ಹಾಗೂ ಮಾಯಾ ವಿವಾಹಕ್ಕೆ ಸಿದ್ಧತೆ ನಡೆದಿತ್ತು. ಇಬ್ಬರ ವಿವಾಹ ಆಗಬಾರದು ಎಂದು ಎಲ್ಲರೂ ಬಯಸ್ಸಿದ್ದರು. ಆ ಬಯಕೆ ಕೊನೆಗೂ ಈಡೇರಿದೆ ಎನ್ನಬಹುದು. ಸದ್ಯ ರಿಲೀಸ್ ಆಗಿರೋ ಪ್ರೋಮೋದಲ್ಲಿ ದುರ್ಗಾಗೆ ಶರತ್ ತಾಳಿ ಕಟ್ಟಿದ್ದಾನೆ. ಎಲ್ಲವೂ ದೇವಿ ಮಹಿಮೆ ಅನ್ನೋದು ಗೊತ್ತಾಗಿದೆ.

‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಈಗ ಪ್ರಮುಖ ಘಟ್ಟ ತಲುಪಿದೆ ಎಂದೇ ಹೇಳಬಹುದು. ಶರತ್ ಹಾಗೂ ಮಾಯಾ ವಿವಾಹಕ್ಕೆ ಸಿದ್ಧತೆ ನಡೆದಿತ್ತು. ಇಬ್ಬರ ವಿವಾಹ ಆಗಬಾರದು ಎಂದು ಎಲ್ಲರೂ ಬಯಸ್ಸಿದ್ದರು. ಆ ಬಯಕೆ ಕೊನೆಗೂ ಈಡೇರಿದೆ ಎನ್ನಬಹುದು. ಸದ್ಯ ರಿಲೀಸ್ ಆಗಿರೋ ಪ್ರೋಮೋದಲ್ಲಿ ದುರ್ಗಾಗೆ ಶರತ್ ತಾಳಿ ಕಟ್ಟಿದ್ದಾನೆ. ಎಲ್ಲವೂ ದೇವಿ ಮಹಿಮೆ ಅನ್ನೋದು ಗೊತ್ತಾಗಿದೆ.
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಶರತ್ ಮಲತಾಯಿ ಮಾಳವಿಕಾ ಮಾಟ-ಮಂತ್ರ ಕಲಿತವಳು. ಆಕೆ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ಅಮರಳಲಾಗಲು ಮೂರು ಬಲಿ ಕೊಡಲು ನಿರ್ಧರಿಸಿದ್ದಳು. ಈಗಾಗಲೇ ಒಂದು ಬಲಿ ಆಗಿಯಾಗಿದೆ. ಅದುವೇ ಅಂಬಿಕಾ. ಶರತ್ ಪತ್ನಿ ಅಂಬಿಕಾಳನ್ನು ಸಾಯಿಸಿದ್ದಾಳೆ. ಈಗ ಶರತ್ ಹಾಗೂ ಮಾಯಾ ಮದುವೆ ಮಾಡಿ ಆತ್ಮವಾಗಿ ಓಡಾಡುತ್ತಿರುವ ಅಂಬಿಕಾಳ ಶಕ್ತಿ ಕಡಿಮೆ ಮಾಡೋದು ಮಾಳವಿಕಾ ಆಲೋಚನೆ.
ಈ ಕಾರಣದಿಂದಲೇ ಮಾಳವಿಕಾಳು ಮಾಯಾ ಹಾಗೂ ಶರತ್ ಮದುವೆಗೆ ಸಾಕಷ್ಟು ಒತ್ತು ಕೊಡುತ್ತಾ ಬಂದಿದ್ದಾಳೆ. ಆದರೆ, ಈ ವಿವಾಹ ನಡೆಯಲು ಸಾಷಕಷ್ಟು ಪ್ರಯತ್ನಗಳು ನಡೆದವು. ದುರ್ಗಾ ಹೇಳಿದ ಮಾತು ಶರತ್ ಮನಸ್ಸಿನ ಮೇಲೆ ಸಾಕಷ್ಟು ಪ್ರಭಾವ ಬೀರಿತು. ಅಂಬಿಕಾಳೇ ಎಲ್ಲವನ್ನೂ ಹೇಳಿದಂತೆ ಇತ್ತು. ಈ ಕಾರಣದಿಂದಲೇ ಅವನು ಮದುವೆ ಆಗೋದಿಲ್ಲ ಎಂದನು. ಮಗಳು ಹಿತಾ ಒಳಿತಿಗಾಗಿ ಈ ಕೆಲಸ ಮಾಡಿದ್ದಾನೆ ಶರತ್.
ಮಾಳವಿಕಾ ಆತನಿಗೆ ತನ್ನ ಶಕ್ತಿಯಿಂದ ವಶೀಕರಣ ಮಾಡಿದ್ದಾಳೆ. ‘ಮದುವೆ ಮಂಟಪಕ್ಕೆ ಹೋಗಬೇಕು, ತಾಳಿ ಕಟ್ಟಬೇಕು’ ಎಂದು ಹೇಳಿದ್ದಾಳೆ. ಆತ ಹಾಗೆಯೇ ಮಾಡಿದ್ದಾನೆ. ಅಲ್ಲಿ ಮಾಯಾ ಬದಲು ದುರ್ಗಾ ಕೂತಿದ್ದಾಳೆ. ದುರ್ಗಾಳಿಗೆ ಶರತ್ ತಾಳಿ ಕಟ್ಟಿದ ರೀತಿಯಲ್ಲಿ ಪ್ರೋಮೋ ತೋರಿಸಲಾಗಿದೆ. ಅಲ್ಲದೆ, ಅಲ್ಲಿ ದೇವಿ ಕೂಡ ಇದ್ದಾಳು. ಎಲ್ಲಾ ದೇವಿ ಮಹಿಮೆ ಆಗಿದೆ. ಸದ್ಯ ಮಾಳವಿಕ ಪ್ಲ್ಯಾನ್ ಫ್ಲಾಪ್ ಆಗಿದೆ.
ಅಂಬಿಕಾ ಹಾಗೂ ದುರ್ಗಾ ಸಹೋದಿಯರು. ದುರ್ಗಾ ಜೊತೆ ಶರತ್ ವಿವಾಹ ನಡೆದರೆ ಅಂಬಿಕಾ ಶಕ್ತಿ ನಾಶ ಮಾಡೋದು ಕಷ್ಟವಾಗಲಿದೆ. ಇದರಿಂದ ಮಾಳವಿಕಾಗೆ ಸಂಕಷ್ಟ ಹೆಚ್ಚಲಿದೆ. ಇಂದಿನ ಸಂಪೂರ್ಣ ಎಪಿಸೋಡ್ ನೋಡಿದ ಬಳಿಕ ಮುಂದಿನ ವಿಚಾರಗಳು ಸ್ಪಷ್ಟವಾಗಲಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



