
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ನಾ ನಿನ್ನ ಬಿಡಲಾರೆ’ (Na Ninna Bidalare) ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್ಗಳು ಬಂದವು. ಈಗ ಧಾರಾವಾಹಿಯಲ್ಲಿ ದುರ್ಗಾ ಹಾಗೂ ಶರತ್ಗೆ ಮತ್ತೊಮ್ಮೆ ಮದುವೆ ಆಗಿದೆ. ಇಷ್ಟು ದಿನ ಕಣ್ಣಿಗೆ ಕಾಣಿಸದೇ ಇದ್ದ ಅಂಬಿಕಾ ಆತ್ಮ ಕಾಣುವಂತೆ ಆಗಿದೆ. ಅಂಬಿಕಾ ನಡೆದ ವಿಚಾರವನ್ನು ಹೇಳಿದ್ದಾಳೆ. ಇದರಿಂದ ದುರ್ಗಾ ಸಖತ್ ಸಿಟ್ಟಾಗಿದ್ದಾಳೆ. ಆಕೆಗೆ ಮಾಯಾ ಮೇಲೆ ಕೋಪ ಬಂದಿದ್ದು, ಕೆನ್ನೆಗೆ ಬಾರಿಸಿದ್ದಾಳೆ.
ಅಂಬಿಕಾ ಹಾಗೂ ಹಿತಾ ಅಮ್ಮ ಮಗಳು. ಆದರೆ, ಅಂಬಿಕಾ ನಿಧನದ ನಂತರ ಹಿತಾ ಒಂಟಿ ಆದಳು. ಆಕೆಯನ್ನು ಕಾಪಾಡುವ ಜಾವಾಬ್ದಾರಿ ಈಗ ದುರ್ಗಾಳ ಹೆಗಲಿಗೆ ಬಿದ್ದಿದೆ. ದುರ್ಗಾ ತನ್ನ ಮಗಳಂತೆ ಆಕೆಯನ್ನು ಕಾಪಾಡುತ್ತಾ ಇದ್ದಾಳೆ. ಈಗ ಹೊಸ ಪ್ರೋಮೋ ಬಿಡಲಾಗಿದ್ದು, ಹಿತಾ ಪರವಾಗಿ ದುರ್ಗಾ ಧ್ವನಿ ಎತ್ತಿದ್ದಾಳೆ.
ಅಂಬಿಕಾ ಇಷ್ಟು ದಿನ ದುರ್ಗಾಳ ಕಣ್ಣಿಗೆ ಕಾಣಿಸುತ್ತಾ ಇರಲಿಲ್ಲ. ಇದಕ್ಕೆ ಕಾರಣವೂ ಇತ್ತು. ದುರ್ಗಾಳ ದೇಹದ ಒಳಗೆ ಒಪ್ಪಿಗೆ ಇಲ್ಲದೆ ಸೇರಿದ್ದಳು ಅಂಬಿಕಾ. ಇದು ಪ್ರಕೃತಿ ನಿಯಮದ ಉಲ್ಲಂಘನೆ. ಹೀಗಾಗಿ, ಅವಳ ಕಣ್ಣಿಗೆ ಅಂಬಿಕಾ ಆತ್ಮ ಕಾಣುತ್ತಾ ಇರಲಿಲ್ಲ. ಈಗ ಸ್ವ ಇಚ್ಛೆಯಿಂದ ದುರ್ಗಾ ವಿವಾಹ ಆಗಿದ್ದಾಳೆ. ಈ ಕಾರಣಕ್ಕೆ ದುರ್ಗಾ ಕಣ್ಣಿಗೆ ಅಂಬಿಕಾ ಕಾಣುತ್ತಿದ್ದಾಳೆ. ಅವಳು ಮಾಯಾ ಮಾಡುತ್ತಿರುವ ಕೆಟ್ಟ ಕೆಲಸ ಹೇಳಿದ್ದಾರೆ.
ಇದನ್ನೂ ಓದಿ:ದುರ್ಗಾ ಕಣ್ಣಿಗೆ ಕಾಣಿಸಿದ ಅಂಬಿಕಾ ಆತ್ಮ; ‘ನಾ ನಿನ್ನ ಬಿಡಲಾರೆ’ಯಲ್ಲಿ ದೊಡ್ಡ ಟ್ವಿಸ್ಟ್
ಮಾಯಾ ತುಂಬಾನೇ ಕೆಟ್ಟವಳು. ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ಈ ವಿಚಾರವನ್ನು ಅಂಬಿಕಾಳು ದುರ್ಗಾಳಿಗೆ ಹೇಳಿದ್ದಾಳೆ. ದುರ್ಗಾ ಹೋಗಿ ಈ ಬಗ್ಗೆ ಮಾಯಾಗೆ ಪ್ರಶ್ನೆ ಮಾಡಿದ್ದಾಳೆ. ‘ಹಿತಾ ಧರಿದ್ರವಳು’ ಎಂದು ಮಾಯಾ ಹೇಳಿದ್ದಾಳೆ. ಇದರಿಂದ ಸಿಟ್ಟಾದ ದುರ್ಗಾಳು ಮಾಯಾ ಕೆನ್ನೆಗೆ ಹೊಡೆದಿದ್ದಾಳೆ. ಇಷ್ಟು ದಿನ ದುರ್ಗಾ ಮೃದುತ್ವ ತೋರಿಸುತ್ತಿದ್ದರು. ಆದರೆ, ಇನ್ನುಮುಂದೆ ಬೇರೆಯದೇ ರೀತಿಯ ಲೆಕ್ಕ ಇರಲಿದೆ ಎಂದು ಹೇಳಲಾಗುತ್ತಾ ಇದೆ.
ಅಂಬಿಕಾ ಆತ್ಮ ದುರ್ಗಾಳ ಕಣ್ಣಿಗೆ ಕಾಣಿಸುತ್ತಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಮುಂದೆ ಆಗುವ ಎಲ್ಲಾ ಕೆಟ್ಟ ಕೆಲಸಗಳ ಸೂಚನೆ ದುರ್ಗಾಳಿಗೆ ಸಿಗುತ್ತದೆ. ಇದರಿಂದ ಒಂದಷ್ಟು ಕೆಟ್ಟ ಕೆಲಸಗಳನ್ನು ತಡೆಯಬಹುದಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ