‘ನಮ್ಮನೆ ಯುವರಾಣಿ’ ಧಾರಾವಾಹಿ ಮೂಲಕ ಹೆಚ್ಚು ಮನೆ ಮಾತಾದವರು ಅಂಕಿತಾ. ಮೀರಾ ಪಾತ್ರದಲ್ಲಿ ನಟಿಸುವ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿಕೊಂಡರು. ಈಗ ಅವರನ್ನು ಅಭಿಮಾನಿಗಳು ಬಾಯ್ತುಂಬ ಹೊಗಳುತ್ತಿದ್ದಾರೆ. ಹಾಗಂತ ಇದು ನಟನೆ ವಿಚಾರಕ್ಕಲ್ಲ. ಹಾಗಾದರೆ ಮತ್ತಿನ್ನೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಜಡ್ಜ್ ಆಗಿ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಸಾಕಷ್ಟು ಟ್ಯಾಲೆಂಟ್ಗಳಿಗೆ ಇದು ವೇದಿಕೆ ಆಗಿತ್ತು. ಈಗ ಕಲರ್ಸ್ ಕನ್ನಡ ವಾಹಿನಿ ಈ ಶೋನ ಹೊಸ ಸೀಸನ್ ಆರಂಭಿಸಿದೆ. ಆಗಸ್ಟ್ 14ರಿಂದ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಭಿನ್ನ ಟ್ಯಾಲೆಂಟ್ಗಳು ವೇದಿಕೆ ಏರಿದ್ದು, ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದಕ್ಕೆ ಅಂಕಿತಾ ನಿರೂಪಕಿ.
ಅಂಕಿತಾ ಅವರ ನಿರೂಪಣೆ ಅನೇಕರಿಗೆ ಇಷ್ಟವಾಗಿದೆ. ಅವರನ್ನು ಅಭಿಮಾನಿಗಳು ಬಾಯ್ತುಂಬ ಹೊಗಳುತ್ತಿದ್ದಾರೆ. ‘ಅಂಕಿತಾ ಮೇಡಮ್ ನೀವು ಈ ಮೊದಲು ಆ್ಯಂಕರಿಂಗ್ ಮಾಡಿದ್ರಾ? ಎಷ್ಟು ಚೆನ್ನಾಗಿ ನಿರೂಪಣೆ ಮಾಡುತ್ತಾ ಇದ್ದೀರಿ. ಜಡ್ಜ್ ಹಾಗೂ ಸ್ಪರ್ಧಿಗಳ ಜತೆಗಿನ ಸಂಭಾಷಣೆ ತುಂಬಾನೇ ಸಿಂಪಲ್ ಮತ್ತು ನ್ಯಾಚುರಲ್ ಆಗಿದೆ. ಎದೆ ತುಂಬಿ ಹಾಡುವೆನು ಶೋ ಈಸ್ ದಿ ಬೆಸ್ಟ್’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ.
ಅಂಕಿತಾ ನಟನೆ ಮೂಲಕ ಹೆಚ್ಚು ಗುರುತಿಸಿಕೊಂಡವರು. ನಿರೂಪಣೆ ಅವರಿಗೆ ಹೊಸದು. ಆದಾಗ್ಯೂ ಹೆಚ್ಚು ಆತ್ಮವಿಶ್ವಾಸದಿಂದ ಅವರು ಶೋ ನಡೆಸಿಕೊಡುತ್ತಿದ್ದಾರೆ. ಈ ಮೂಲಕ ಹೊಸ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆ. ಅಂಕಿತಾ ನೃತ್ಯ ಮತ್ತು ಸಂಗೀತದ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ನಟನೆಯಲ್ಲಿ ಪಳಗಲು ನೃತ್ಯ ತುಂಬಾನೇ ಸಹಕಾರಿಯಾಗಿದೆ ಎಂದು ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಇನ್ನು, ಸಂಗೀತದ ಬಗ್ಗೆ ಅವರಿಗೆ ಎಲ್ಲಿಲ್ಲದ ಆಸಕ್ತಿ. ಹೀಗಿರುವಾಗಲೇ ಸಂಗೀತ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಶೋ ಅನ್ನು ನಡೆಸಿಕೊಡುತ್ತಿರುವುದಕ್ಕೆ ಅವರು ಸಾಕಷ್ಟು ಖುಷಿಯಾಗಿದ್ದಾರೆ.
ಇದನ್ನೂ ಓದಿ: ‘ಕೂಲಿನಾಲಿ ಮಾಡಿ ತಾಯಿಯೇ ನನ್ನನ್ನು ಸಾಕಿದ್ದು’; ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಕಣ್ಣೀರಿಟ್ಟ ಸೂರ್ಯಕಾಂತ್
ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ‘ನಮ್ಮನೆ ಯುವರಾಣಿ’ ಅಂಕಿತಾ; ಇದು ಫ್ಯಾನ್ಸ್ಗೆ ಖುಷಿಯಾಗೋ ವಿಚಾರ
Published On - 7:51 am, Thu, 23 September 21