ನಟಿ ನಮ್ರತಾಗೆ ಕಿರುಕುಳ: ರಾಜಕಾರಣಿಗಳ ಜೊತೆ ‘ಡೇಟಿಂಗ್​’ಗೆ ಒತ್ತಾಯ

Namrata Gowda: ಮಾಜಿ ಬಿಗ್​ಬಾಸ್ ಸ್ಪರ್ಧಿ, ನಟಿ ನಮ್ರತಾ ಗೌಡಗೆ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ ನೀಡಿದ್ದಾನೆ. ರಾಜಕಾರಣಿಗಳು, ವಿಐಪಿಗಳೊಟ್ಟಿಗೆ ಡೇಟಿಂಗ್​ನಲ್ಲಿ ಹೋಗಲು ಒತ್ತಾಯಿಸಿದ್ದಾರೆ. ಕೇಳಿದಷ್ಟು ಹಣವನ್ನು ಅದಕ್ಕಾಗಿ ಕೊಡುವುದಾಗಿಯೂ ಸಹ ಆ ವ್ಯಕ್ತಿ ಆಮಿಷ ಒಡ್ಡಿದ್ದಾನೆ. ವ್ಯಕ್ತಿಯ ವಿರುದ್ಧ ನಟಿ ಆಕ್ರೋಶ ಹೊರಹಾಕಿದ್ದಾರೆ.

ನಟಿ ನಮ್ರತಾಗೆ ಕಿರುಕುಳ: ರಾಜಕಾರಣಿಗಳ ಜೊತೆ ‘ಡೇಟಿಂಗ್​’ಗೆ ಒತ್ತಾಯ
Namratha Gowda
Edited By:

Updated on: May 14, 2025 | 9:36 PM

ಮಾಜಿ ಬಿಗ್​ಬಾಸ್ (Bigg Boss) ಸ್ಪರ್ಧಿ, ನಟಿ ನಮ್ರತಾ ಗೌಡ (Namratha Gowda) ಅವರಿಗೆ ಆನ್​ಲೈನ್​​ನಲ್ಲಿ ಕಿರುಕುಳ ಎದುರಾಗಿದೆ. ರೋಷನ್ ಹೆಸರಿನ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ನಮ್ರತಾ ಗೌಡಗೆ ಸಂದೇಶ ಕಳಿಸಿದ್ದು, ರಾಜಕಾರಣಿಗಳೊಟ್ಟಿಗೆ ‘ಪೇಯ್ಡ್’ ಡೇಟಿಂಗ್​ಗೆ ಒತ್ತಾಯಿಸಿದ್ದಾನೆ. ಪದೇ ಪದೇ ಸಂದೇಶ ಕಳಿಸಿ ಕಿರುಕುಳ ನೀಡಿದ್ದಾನೆ. ರೋಷನ್ ತಮಗೆ ಕಳಿಸಿರುವ ಸಂದೇಶಗಳನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ನಟಿ ನಮ್ರತಾ ಗೌಡ ಅದನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಗೆ ಹಾಕಿ ಸಾಕಿನ್ನು ನಿಲ್ಲಿಸಿ ಎಂದಿದ್ದಾರೆ.

ರೋಷನ್ ಎಂಬಾತ, ರಾಕಿ ಜಿ43 (Rocky.g43) ಹೆಸರಿನ ಇನ್​ಸ್ಟಾಗ್ರಾಂ ಖಾತೆಯಿಂದ ನಮ್ರತಾಗೆ ಸಂದೇಶಗಳನ್ನು ಕಳಿಸಿದ್ದಾನೆ. ರೋಷನ್ ಪ್ರೊಫೈಲ್ ಪಿಕ್ಚರ್​ನಲ್ಲಿ ಬಿಜೆಪಿ ಮಾಜಿ ಸಂಸದರೊಟ್ಟಿಗೆ ತೆಗೆಸಿಕೊಂಡಿರುವ ಫೋಟೊ ಇದೆ. ತಮಗೆ ಸಾಕಷ್ಟು ರಾಜಕಾರಣಿಗಳ ಜೊತೆಗೆ ನಂಟು ಇದ್ದು, ರಾಜಕಾರಣಿಗಳ ಜೊತೆಗೆ ಡೇಟಿಂಗ್​ಗೆ ಬರಲು ಇಚ್ಛೆ ಇದೆಯಾ? ಎಂದು ರೋಷನ್ ನಮ್ರತಾರನ್ನು ಕೇಳಿದ್ದಾನೆ. ‘ಡೇಟಿಂಗ್​’ ಬರಲು ತೆಗೆದುಕೊಳ್ಳುವ ಶುಲ್ಕವನ್ನು ಹೇಳುವಂತೆ ಸಹ ರೋಷನ್ ಒತ್ತಾಯಿಸಿದ್ದಾನೆ.

ಇದನ್ನೂ ಓದಿ:ಶ್ರೀಲಂಕಾ ನಾಡಲ್ಲಿ ಮಿಂಚಿದ ನಮ್ರತಾ ಗೌಡ; ಡ್ರೆಸ್​ಗೆ ಫಿದಾ

‘ನನಗೆ ರಾಜಕಾರಣಿಗಳು, ವಿಐಪಿಗಳೊಟ್ಟಿಗೆ ನಂಟು ಇದೆ. ನಾನು ಅವರಿಗಾಗಿ ಪೇಯ್ಡ್ ಡೇಟಿಂಗ್​ಗಳನ್ನು ಅರೇಂಜ್ ಮಾಡುತ್ತಿರುತ್ತೇನೆ. ನೀವು ಪೇಯ್ಡ್ ಡೇಟಿಂಗ್​ಗೆ ಬರಲಿಚ್ಛಿಸಿದರೆ ನಿಮ್ಮ ಶುಲ್ಕ ಹೇಳಿ, ನಿನ್ನ ಮೊಬೈಲ್ ನಂಬರ್ ಅಥವಾ ಚಿತ್ರಗಳನ್ನು ಕಳಿಸುವ ಅಗತ್ಯ ಇಲ್ಲ. ನೀವು ಹೆಚ್ಚಿನ ಶುಲ್ಕ ಕೇಳಿದರೂ ಅದನ್ನು ಕೊಡಲು ಸಿದ್ಧ ಇದ್ದೇವೆ. 200% ಎಲ್ಲವೂ ಖಾಸಗಿ ಆಗಿರುತ್ತದೆ. ಯಾವುದೂ ಸಹ ಬಹಿರಂಗ ಆಗುವುದಿಲ್ಲ. ನಿಮಗೆ ಆಸಕ್ತಿ ಇದ್ದರೆ ಮಾಹಿತಿಯನ್ನು ಹಂಚಿಕೊಳ್ಳಿ’ ಎಂದು ರೋಷನ್, ನಮ್ರತಾಗೆ ಸಂದೇಶ ಕಳಿಸಿದ್ದಾನೆ. ಇದೇ ಸಂದೇಶವನ್ನು ಎರಡು ಮೂರು ಬಾರಿ ನಮ್ರತಾ ಅವರಿಗೆ ರೋಷನ್ ಕಳಿಸಿದ್ದಾನೆ.

ನಟಿಯರಿಗೆ ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿಯರಿಗೆ, ಸಿನಿಮಾ ಹಿನ್ನೆಲೆ ಇಲ್ಲದೆ ಮಧ್ಯಮ ವರ್ಗದ ಕುಟುಂಬದಿಂದ ಬಂದು ಸ್ವಂತ ಬಲದಿಂದ ಚಿತ್ರರಂಗ, ಟಿವಿ ಲೋಕದಲ್ಲಿ ಹೆಸರು ಮಾಡಿದ ನಟಿಯರಿಗೆ ಈ ರೀತಿಯ ಕಿರುಕುಳ, ಹೈಟೆಕ್ ವೇಶ್ಯಾವಾಟಿಕೆಗೆ ಒತ್ತಾಯಗಳು ಬರುತ್ತಲೇ ಇರುತ್ತವೆ. ಕೆಲವು ನಟಿಯರು, ನಮ್ರತಾ ರೀತಿ ಧೈರ್ಯವನ್ನು ಇಂಥಹವರ ದುಷ್ಕೃತ್ಯವನ್ನು ಬಹಿರಂಗವಾಗಿ ಹೇಳುತ್ತಾರೆ. ಕೆಲವರು ಬ್ಲಾಕ್ ಮಾಡಿ ಸುಮ್ಮನಾಗುತ್ತಾರೆ. ಇಂಥಹವರು ನೀಡುವ ಹಣದಾಸೆಗೆ ಒಪ್ಪಿಕೊಳ್ಳುವ ಕೆಲವರೂ ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Wed, 14 May 25