ತಂಡ ಸೋತರೂ ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆಯಾದ ನಮ್ರತಾ ಗೌಡ; ಏನಿದು ಅದೃಷ್ಟ?

|

Updated on: Dec 01, 2023 | 7:30 AM

ನಮ್ರತಾ ಗೌಡ ಆರಂಭದಿಂದಲೂ ವಿನಯ್ ಜೊತೆಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ವಿನಯ್ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟು ನಮ್ರತಾ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ತಮ್ಮ ಆಟವನ್ನು ತೋರಿಸಲು ಮುಂದಾಗಿದ್ದಾರೆ ಅವರು.

ತಂಡ ಸೋತರೂ ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆಯಾದ ನಮ್ರತಾ ಗೌಡ; ಏನಿದು ಅದೃಷ್ಟ?
ನಮ್ರತಾ
Follow us on

ನಮ್ರತಾ ಗೌಡ (Namratha Gowda) ಅವರು ಇಷ್ಟು ದಿನ ಡಲ್ ಆಗಿದ್ದರು. ಇದೇ ಮೊದಲ ಬಾರಿಗೆ ಅವರು ತಮ್ಮ ಆಟವನ್ನು ತೋರಿಸಿದ್ದಾರೆ. ಈ ವಾರ ಅವರು ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಈ ವಾರ ಉತ್ತಮ ಸಿಕ್ಕರೂ ಅಚ್ಚರಿ ಏನಿಲ್ಲ. ಅಷ್ಟು ಒಳ್ಳೆಯ ರೀತಿಯಲ್ಲಿ ಅವರು ಆಟ ಆಡಿದ್ದಾರೆ. ತಂಡ ಸೋತರೂ ಕ್ಯಾಪ್ಟನ್ಸಿ ಟಾಸ್ಕ್ ಆಡುವ ಅವಕಾಶವನ್ನು ಬಿಗ್ ಬಾಸ್ ನಮ್ರತಾಗೆ ನೀಡಿದ್ದಾರೆ. ಹೀಗೆಕೆ ಎನ್ನುವ ಪ್ರಶ್ನೆಗೆ ಈ ಸ್ಟೋರಿಯಲ್ಲಿದೆ ಉತ್ತರ.

ನಮ್ರತಾ ಗೌಡ ಆರಂಭದಿಂದಲೂ ವಿನಯ್ ಜೊತೆಯೇ ಕಾಣಿಸಿಕೊಳ್ಳುತ್ತಿದ್ದಾರೆ. ‘ವಿನಯ್ ಚಮಚ’ ಎಂಬ ಪಟ್ಟ ಅವರಿಗೆ ಸಿಕ್ಕಿತ್ತು. ಕಳೆದ ವಾರದವರೆಗೂ ಇದನ್ನೇ ಮುಂದುವರಿಸಿಕೊಂಡು ಬಂದಿದ್ದರು. ಈ ವಾರ ನಾಮಿನೇಟ್ ಆಗಿರುವುದರಿಂದ ಅವರು ಔಟ್ ಆಗುವ ಸೂಚನೆ ಸಿಕ್ಕಿದೆ. ಹೀಗಾಗಿ, ತಮ್ಮ ಆಟವನ್ನು ತೋರಿಸಲು ಮುಂದಾಗಿದ್ದಾರೆ.

ಈ ವಾರದ ಕ್ಯಾಪ್ಟನ್ಸಿ ಟಾಸ್ಕ್​ನಿಂದ ನಮ್ರತಾ ಅವರನ್ನು ಮೊದಲಿಗೇ ಹೊರಗಿಟ್ಟರು ಪ್ರತಾಪ್. ಇದು ಅವರಿಗೆ ಸಾಕಷ್ಟು ಬೇಸರ ಮೂಡಿಸಿತು. ಗೇಮ್ ಆಡುವಾಗ ತನಿಷಾ ಅವರು ಗಾಯಮಾಡಿಕೊಂಡರು. ಹೀಗಾಗಿ, ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಈಗ ಅವರ ಬದಲಿಗೆ ಒಬ್ಬರು ಆಟ ಆಡಬೇಕಿತ್ತು. ಈ ಅವಕಾಶವನ್ನು ನಮ್ರತಾಗೆ ನೀಡಲಾಯಿತು. ಅವರು ಗೇಮ್​ನಲ್ಲಿ ನಮ್ರತಾ ಉತ್ತಮ ಪರ್ಫಾರ್ಮೆನ್ಸ್ ನೀಡಿದ್ದಾರೆ.

ನಮ್ರತಾ ಗೌಡ ಅವರು ಉತ್ತಮ ರೀತಿಯಲ್ಲಿ ಆಟ ಆಡಿ ಕೊನೆಯ ಸುತ್ತಿನವರೆಗೆ ಹೋಗಿದ್ದಾರೆ. ಈಗ ಸ್ನೇಹಿತ್ ಗೌಡ ಹಾಗೂ ನಮ್ರತಾ ಮಧ್ಯೆ ಫೈಟ್ ನಡೆಯಲಿದೆ. ಒಂದೊಮ್ಮೆ ನಮ್ರತಾ ಕ್ಯಾಪ್ಟನ್ಸಿ ಟಾಸ್ಕ್ ಗೆದ್ದರೆ ಅವರು ಕ್ಯಾಪ್ಟನ್ ಆಗೋಕೆ ಸಾಧ್ಯವಿಲ್ಲ. ತನಿಷಾ ಬಂದ ಬಳಿಕ ಕ್ಯಾಪ್ಟನ್ ಪಟ್ಟವನ್ನು ಅವರಿಗೆ ಮರಳಿಸಬೇಕು. ಆದಾಗ್ಯೂ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಲು ನಮ್ರತಾಗೆ ಉತ್ತಮ ಅವಕಾಶ ದೊರೆತಂತೆ ಆಗಿದೆ.

ಇದನ್ನೂ ಓದಿ: ‘ವಿನಯ್​ಗೆ ಕ್ಯಾಪ್ಟನ್​ ಆಗುವ ಅರ್ಹತೆ ಇಲ್ಲ’; ನಮ್ರತಾ ಮಾತಿನಿಂದ ನೊಂದುಕೊಂಡ ವಿನಯ್​ ಗೌಡ

ವಿನಯ್ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟು ನಮ್ರತಾ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ನವೆಂಬರ್ 30ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡೋಕೆ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ