
ಜೀ ಕನ್ನಡದ ಫೇವರಿಟ್ ಶೋಗಳಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹಾಗೂ ‘ಕಾಮಿಡಿ ಕಿಲಾಡಿಗಳು’ ಸ್ಥಾನ ಪಡೆದುಕೊಂಡಿವೆ. ಈ ಶೋಗಳು ಈಗ ಮತ್ತೆ ಪ್ರೇಕ್ಷಕರ ಎದುರು ಬರಲು ರೆಡಿ ಆಗುತ್ತಿವೆ. ಈ ಸಂಬಂಧ ಜೀ ಕನ್ನಡ ವಾಹಿನಿ ಪೋಸ್ಟ್ ಒಂದನ್ನು ಮಾಡಿದೆ. ಅಲ್ಲದೆ, ಶೋಗೆ ಆಡಿಷನ್ ಕೂಡ ಕರೆಯುತ್ತಿರುವುದಾಗಿ ಮಾಹಿತಿ ನೀಡಿದೆ. ಹೀಗಾಗಿ, ನೀವು ಕೂಡ ಈ ಶೋನ ಆಡಿಷನ್ನಲ್ಲಿ ಭಾಗಿ ಆಗಬಹುದು ಮತ್ತು ಅದರ ಭಾಗವಾಗಲು ಪ್ರಯತ್ನಿಸಬಹುದು.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಮೂಲಕ ಅನೇಕ ಪ್ರತಿಭೆಗಳು ಪರಿಚಯ ಆಗಿವೆ. ಡ್ಯಾನ್ಸ್ ಕಲೆ ಹೊಂದಿರುವ ಅನೇಕರು ಶೋಗೆ ಬಂದು ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಅಲ್ಲದೆ ಹಿರಿಯರ ಮಾರ್ಗದರ್ಶನ ಸಿಗೋದರಿಂದ ಅವರಿಗೂ ಕಲಿಕೆಗೆ ಒಂದೊಳ್ಳೆಯ ವೇದಿಕೆ. ಈ ಕಾರ್ಯಕ್ರಮಕ್ಕೆ ಶಿವರಾಜ್ಕುಮಾರ್ ಕೂಡ ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಹೀಗಾಗಿ, ಅವರ ಅನುಭವದ ಮಾತುಗಳು ಸ್ಪರ್ಧಿಗಳಿಗೆ ಸ್ಫೂರ್ತಿದಾಯಕವಾಗಲಿವೆ.
ಇನ್ನು, ಕಾಮಿಡಿ ಕಿಲಾಡಿಗಳು ಶೋ ಮೂಲಕ ಅದೆಷ್ಟೋ ಹಾಸ್ಯ ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ. ಹಾಸ್ಯದ ಮೂಲಕ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಲು ಅನೇಕರಿಗೆ ಅವಕಾಶ ಇದೆ. ಈ ಶೋ ಸಾಕಷ್ಟು ಜನಪ್ರಿಯತೆ ಪಡೆದಿದೆ. ಇದಕ್ಕೂ ಹೊಸ ಸೀಸನ್ ಬರುತ್ತಿದೆ.
ಇದನ್ನೂ ಓದಿ:‘ಹಳ್ಳಿ ಪವರ್’ ರಿಯಾಲಿಟಿ ಶೋ ಜೀ ಕನ್ನಡದಲ್ಲಿ ಪ್ರಸಾರ ಆಗಲ್ಲ; ಹಾಗಿದ್ರೆ ಇನ್ನೆಲ್ಲಿ?
ಈ ಬಗ್ಗೆ ಜೀ ಕನ್ನಡ ವಾಹಿನಿ ಪೋಸ್ಟ್ ಹಂಚಿಕೊಂಡಿದೆ. ‘ಕುಣಿತದ ಹಬ್ಬ ಮಾಡೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ನಗುವಿನ ಜಾತ್ರೆ ಮಾಡೋ ಕಾಮಿಡಿ ಕಿಲಾಡಿಗಳು ಸೀಸನ್ 5ರ ಆಡಿಷನ್ಸ್ ರಾಜ್ಯಾದ್ಯಂತ ನಡೆಯುತ್ತಿದೆ. ನಿಮ್ಮ ಜಿಲ್ಲೆಯಲ್ಲಿ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಆಡಿಷನ್ ನಡೆಯಲಿದೆ. ಒಂದು ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ಅಡ್ರೆಸ್ ಪ್ರೂಫ್ ಜೊತೆಗೆ ತಪ್ಪದೇ ಭಾಗವಹಿಸಿ’ ಎಂದು ಕೋರಲಾಗಿದೆ. ಇದೇ ಪ್ರೋಮೋದಲ್ಲಿ ಆಡಿಷನ್ ಬಗ್ಗೆ ಮಾಹಿತಿ ಇದೆ.
ಸದ್ಯ ಜೀ ಕನ್ನಡದಲ್ಲಿ ‘ಮಹಾನಟಿ ಸೀಸನ್ 2’ ನಡೆಯುತ್ತಿದೆ. ಜೀ ಪವರ್ನಲ್ಲಿ ‘ಹಳ್ಳಿ ಪವರ್’ ಪ್ರಸಾರ ಆಗುತ್ತಿದೆ. ‘ಮಹಾನಟಿ 2’ ಮುಗಿದ ಬಳಿಕ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಹಾಗೂ ‘ಕಾಮಿಡಿ ಕಿಲಾಡಿಗಳು’ ಶೋ ಆರಂಭ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Tue, 2 September 25