ಶರತ್-ದುರ್ಗಾ ಈಗ ಪತಿ-ಪತ್ನಿ; ಹೆಚ್ಚಿತು ಅಂಬಿಕಾ ಶಕ್ತಿ, ಮಾಳವಿಕಾ ಕನಸು ಭಗ್ನ
'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಅನಿರೀಕ್ಷಿತ ತಿರುವು ಎದುರಾಗಿದೆ! ಶರತ್ ಮತ್ತು ದುರ್ಗಾ ವಿವಾಹವಾಗಿದೆ. ಇದು ಮಾಳವಿಕಾಳ ಯೋಜನೆಗಳನ್ನು ಹಾಳು ಮಾಡಿದೆ. ಅಂಬಿಕಾಳ ಆತ್ಮ ದುರ್ಗಾಳ ದೇಹದಲ್ಲಿ ಪ್ರವೇಶಿಸಿ ಮದುವೆಯಲ್ಲಿ ಭಾಗವಹಿಸಿದೆ. ಈ ಘಟನೆಯಿಂದ ಅಂಬಿಕಾಳ ಶಕ್ತಿ ಹೆಚ್ಚಾಗಿದೆ ಮತ್ತು ಮುಂದೆ ಏನಾಗುತ್ತದೆ ಎಂಬುದು ಕುತೂಹಲ ಮೂಡಿದೆ.

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ (Serial) ಅತಿ ದೊಡ್ಡ ಟ್ವಿಸ್ಟ್ ಒಂದು ಸಿಕ್ಕಿದೆ. ಶರತ್ ಹಾಗೂ ದುರ್ಗಾ ವಿವಾಹ ನಡೆದಿದೆ. ದೇವರ ಸಮ್ಮುಖದಿಂದ ಈ ಮದುವೆ ನಡೆದಿದೆ ಅನ್ನೋದು ವಿಶೇಷ. ಈ ಬೆಳವಣಿಗೆಯಿಂದ ದುಷ್ಟ ಶಕ್ತಿಗಳನ್ನು ಸೇರಿಸುವ ಕನಸು ಕಾಣುತ್ತಿರುವ ಮಾಳವಿಕಾ ಕನಸು ಭಗ್ನವಾಗಿದೆ. ಶರತ್ ತನಗೆ ಸಿಗಬೇಕು ಎಂದುಕೊಂಡಿದ್ದ ಮಯಾಗೆ ಅಳೋದು ಒಂದೇ ಆಯ್ಕೆ ಆಗಿ ಉಳಿದಿದೆ.
‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಈಗಾಗಲೇ 120ಕ್ಕೂ ಅಧಿಕ ಎಪಿಸೋಡ್ಗಳನ್ನು ಪ್ರಸಾರ ಮಾಡಿದೆ. ಈ ವೇಳೆ ಸಾಕಷ್ಟು ತಿರುವುಗಳು ಎದುರಾಗಿದ್ದವು. ಇದು ಹಾರರ್ ಶೈಲಿಯ ಕಥೆ. ಇದರಲ್ಲಿ ಮಾಟ ಮಂತ್ರ ಇದೆ, ಆತ್ಮದ ವಿಚಾರ ಇದೆ. ವಶೀಕರಣ ಇದೆ. ಈ ಧಾರಾವಾಹಿ ಈಗ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ.
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಾಳವಿಕಾ ತನ್ನ ಶಕ್ತಿ ಹೆಚ್ಚಿಸಿಕೊಳ್ಳುವ ಆಲೋಚನೆಯಲ್ಲಿ ಇದ್ದಳು. ಇದಕ್ಕಾಗಿ ಶರತ್ ಹಾಗೂ ಮಾಯಾ ಮದುವೆ ಪ್ಲ್ಯಾನ್ ಮಾಡಿದ್ದಳು. ಹೀಗೆ ಮದುವೆ ಆದರೆ, ಆತ್ಮದ ರೂಪದಲ್ಲಿರುವ ಶರತ್ ಮೊದಲ ಪತ್ನಿ ಅಂಬಿಕಾ ಶಕ್ತಿ ಕುಂದುತ್ತದೆ, ಆಕೆಯನ್ನು ಬಂಧಿಸಿಡಬಹುದು ಎಂಬುದು ಆಕೆಯ ಆಲೋಚನೆ ಆಗಿತ್ತು.
View this post on Instagram
View this post on Instagram
ಆದರೆ, ಇದಕ್ಕೆ ದುರ್ಗಾ ತಂದೆ ಅವಕಾಶ ಮಾಡಿ ಕೊಡಲೇ ಇಲ್ಲ. ಆತ ಒಂದು ದೊಡ್ಡ ಪ್ಲ್ಯಾನ್ ಮಾಡಿದ. ವಿವಾಹದ ದಿನ ದುರ್ಗಾಳ ದೇಹದಲ್ಲಿ ಅಂಬಿಕಾ ಆತ್ಮ ಸೇರುವಂತೆ ಮಾಡಿದೆ. ಈ ಆತ್ಮ ನೇರವಾಗಿ ಹೋಗಿ ಹಸೆಮಣೆ ಮೇಲೆ ಕೂತಿತ್ತು. ಹೀಗೆ ಕೂರುವಾಗ ಶರತ್ ತನ್ನ ಮಲತಾಯಿ ಮಾಳವಿಕಾಳ ವಶೀಕರಣದಲ್ಲಿ ಇದ್ದ. ‘ನೀನು ಮಂಟಪಕ್ಕೆ ಹೋಗಬೇಕು, ತಾಳಿ ಕಟ್ಟಬೇಕು’ ಎಂದು ಹೇಳಿದ್ದನ್ನು ಪಾಲಿಸಿದ್ದಾನೆ. ಆತ ದುರ್ಗಾಳಿಗೆ ತಾಳಿ ಕಟ್ಟಿದ್ದಾನೆ. ಈ ಮದುವೆ ನಡೆಯುತ್ತಿದ್ದಂತೆ ಅಂಬಿಕಾಳ ತಾಕತ್ತು ಹೆಚ್ಚಾಗಿದೆ.
ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗೆ ದೊಡ್ಡ ಟ್ವಿಸ್ಟ್; ಶರತ್-ದುರ್ಗಾ ಮದುವೆ
ಸದ್ಯ ಮುಂದೆ ಏನಾಗುತ್ತದೆ ಎಂಬುದೇ ಸದ್ಯದ ಕುತೂಹಲ. ದೇವರ ಸಮ್ಮುಖದಲ್ಲಿ ಈ ವಿವಾಹ ನಡೆದಿದೆ. ಆದರೆ, ಮುಂದಿನ ದಿನಗಳಲ್ಲಿ ದುರ್ಗಾಳಿಗೆ ಸಾಕಷ್ಟು ಅಡಚಣೆ ಉಂಟಾಗಬಹುದು. ಈಗ ಶರತ್ನ ವಿವಾಹ ಆಗಿರುವುದರಿಂದ ಹಿತಾ ಕೂಡ ಖುಷಿ ಆಗಿದ್ದಾಳೆ. ತನಗೆ ಅಮ್ಮ ಸಿಕ್ಕಿದ್ದಾಳೆ ಎಂದು ಅವಳು ಸಂತೋಷ ಪಡುತ್ತಾ ಇದ್ದಾಳೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







