AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾ ನಿನ್ನ ಬಿಡಲಾರೆ’ ಧಾರಾವಾಹಿಗೆ ದೊಡ್ಡ ಟ್ವಿಸ್ಟ್; ಶರತ್-ದುರ್ಗಾ ಮದುವೆ

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಶರತ್ ಮತ್ತು ದುರ್ಗಾ ಅವರ ಅನಿರೀಕ್ಷಿತ ಮದುವೆಯು ದೊಡ್ಡ ಟ್ವಿಸ್ಟ್ ಆಗಿದೆ. ಮಾಯಾಳ ಷಡ್ಯಂತ್ರವನ್ನು ಹಿತಾ ಭೇದಿಸಿದ ನಂತರ, ಶರತ್ ದುರ್ಗಾಳನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ಪ್ರೋಮೋ ಪ್ರಕಾರ ಮದುವೆ ನಡೆಯಲಿದೆ. ಆದರೆ ಇದು ನಿಜವೇ ಅಥವಾ ಕನಸೇ ಎಂಬುದು ಇನ್ನೂ ತಿಳಿಯಬೇಕಿದೆ.

‘ನಾ ನಿನ್ನ ಬಿಡಲಾರೆ’ ಧಾರಾವಾಹಿಗೆ ದೊಡ್ಡ ಟ್ವಿಸ್ಟ್; ಶರತ್-ದುರ್ಗಾ ಮದುವೆ
ಕನ್ನಡ ಧಾರಾವಾಹಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jul 30, 2025 | 10:31 AM

Share

‘ನಾ ನಿನ್ನ ಬಿಡಲಾರೆ’ ಧಾರಾವಾಹಿ (Kannada Serial) ಹಲವು ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಈ ಧಾರಾವಾಹಿಯಲ್ಲಿ ದುಷ್ಟ ಶಕ್ತಿಗಳು, ಮಾಟ ಮಂತ್ರ, ದೇವಿ ಮಹಾತ್ಮೆಯನ್ನು ತೋರಿಸುವ ಕೆಲಸ ಆಗುತ್ತಿದೆ. ಹೀಗಿರುವಾಗಲೇ ಧಾರಾವಾಹಿಯಲ್ಲಿ ಒಂದು ದೊಡ್ಡ ಟ್ವಿಸ್ಟ್ ಎದುರಾಗಿದೆ. ಈ ದಾರಾವಾಹಿಯಲ್ಲಿ ದುರ್ಗಾ ಹಾಗೂ ಶರತ್ ಮದುವೆ ಮಾಡಲು ಸಿದ್ಧತೆ ನಡೆದಿದೆ. ಈ ತಿರುವು ಧಾರಾವಾಹಿಯ ವಿಲನ್ ಪಾತ್ರಧಾರಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು ಎಂದು ಅನೇಕರು ಭಾವಿಸಿದ್ದಾರೆ.

ದುರ್ಗಾ ಮದುವೆಗೆ ಪ್ಲ್ಯಾನ್

ದುರ್ಗಾಳನ್ನು ಮದುವೆ ಮಾಡಿ ಮನೆಯಿಂದ ಹೊರಹಾಕಬೇಕು ಎಂಬುದು ಮಾಯಾ ಪ್ಲ್ಯಾನ್. ಈ ಕಾರಣದಿಂದಲೇ ಒಂದು ಫ್ರಾಡ್ ಸಂಬಂಧವನ್ನು ಕರೆದುಕೊಂಡು ಬರಲಾಗಿತ್ತು. ಆ ಹುಡುಗ ಒಳ್ಳೆಯವರ ರೀತಿಯೇ ನಡೆದುಕೊಂಡಿದ್ದ. ಹೀಗಾಗಿ ಎಲ್ಲರೂ ಆತನನ್ನು ನಂಬಿದ್ದರು. ಆದರೆ, ಹಿತಾ ಎಲ್ಲವನ್ನೂ ಕಂಡು ಹಿಡಿದಿದ್ದಾಳೆ. ಆತ ತನ್ನ ಲವರ್ ಜೊತೆ ಮಾತನಾಡುವಾಗ ಅದನ್ನು ರೆಕಾರ್ಡ್ ಮಾಡಿ ಶರತ್​ಗೆ ತೋರಿಸಿದ್ದಾಳೆ.

ಇದನ್ನೂ ಓದಿ
Image
ಸೋನು ಸೂದ್ ಜನ್ಮದಿನ; ನಟನೆ ಕಡಿಮೆ ಮಾಡಿದರೂ ತಗ್ಗಿಲ್ಲ ನಟನ ಆಸ್ತಿ
Image
ಹೀನಾಯ ಸ್ಥಿತಿ ತಲುಪಿದ ‘ಹರಿ ಹರ ವೀರ ಮಲ್ಲು’ ಕಲೆಕ್ಷನ್; ಪವನ್ ಕನಸು ಭಗ್ನ
Image
ಅಶ್ವಮೇಧದ ಕುದುರೆ ‘ಸು ಫ್ರಮ್ ಸೋ’; ಕೆಲೆಕ್ಷನ್​ನಲ್ಲಿ ತಡೆಯೋರೆ ಇಲ್ಲ
Image
‘ಕನಿಷ್ಠ ಸಭ್ಯತೆ ಇರಲಿ’; ದರ್ಶನ್ ಅಭಿಮಾನಿಗಳ ಬಳಿ ಕೋರಿದ್ರಾ ರಕ್ಷಿತಾ
View this post on Instagram

A post shared by Zee Kannada (@zeekannada)

ಈ ಮಾತನ್ನು ಕೇಳಿ ಶರತ್ ಶಾಕ್ ಆದ ಮತ್ತು ನೇರವಾಗಿ ಹೋಗಿ ಈ ವಿಚಾರವನ್ನು ದುರ್ಗಾ ಬಳಿ ಹೇಳಿದ. ಇದನ್ನು ಆಕೆ ನಂಬಲು ರೆಡಿ ಇರಲಿಲ್ಲ. ಏಕೆಂದರೆ ಆಕೆಯ ಚಿಕ್ಕಮ್ಮ ಮಾಡಿದ ಕೆಲಸವೇ ಇದಕ್ಕೆ ಕಾರಣ. ದುರ್ಗಾಳ ಚಿಕ್ಕಮ್ಮ ಬಂದು ‘ಏನೇ ಆದರೂ ನೀನು ಮದುವೆ ಆಗಬೇಕು’ ಎಂದು ಎಚ್ಚರಿಸಿ ಹೋಗಿದ್ದಳು. ಹೀಗಾಗಿ, ಮದುವೆ ಆಗೇ ಆಗುತ್ತೇನೆ ಎಂದು ದುರ್ಗಾ ನಿರ್ಧರಿಸಿಯಾಗಿತ್ತು.

ಇದನ್ನೂ ಓದಿ: ಸತತ ಮೂರನೇ ವಾರ ಡಬಲ್ ಡಿಜಿಟ್ ಟಿಆರ್​ಪಿ, ನಂಬರ್ 1 ಸ್ಥಾನ ಪಡೆದ ‘ಕರ್ಣ’ ಧಾರಾವಾಹಿ

ಮದುವೆ..

ಸದ್ಯ ಬಿಡುಗಡೆ ಆಗಿರುವ ಪ್ರೋಮೋ ಪ್ರಕಾರ ಶರತ್ ಹಾಗೂ ದುರ್ಗಾಳ ಮದುವೆ ನಡೆಯಲಿದೆ. ಒಬ್ಬರು ಎಣ್ಣೆ ಆದರೆ, ಮತ್ತೊಬ್ಬರು ಸೀಗೆಕಾಯಿ. ಇಬ್ಬರ ಮಧ್ಯೆ ಹೊಂದಾಣಿಕೆ ಸಾಧ್ಯವೇ ಇಲ್ಲ. ಆದರೆ, ಶರತ್ ಮಗಳು ಹಿತಾಳನ್ನು ನೋಡಿಕೊಳ್ಳುವ ಕಲೆ ಆಕೆಗೆ ಗೊತ್ತಿದೆ. ಈ ಕಾರಣದಿಂದಲೇ ಶರತ್​ಗೆ ಆಕೆಯ ಮೇಲೆ ವಿಶೇಷ ಕಾಳಜಿ. ಈಗ ಇಬ್ಬರೂ ಮದುವೆ ಆದರೆ ಹಿತಾ ತುಂಬಾನೇ ಖುಷಿ ಪಡುತ್ತಾಳೆ. ಸದ್ಯ ರಿಲೀಸ್ ಆಗಿರೋ ಪ್ರೋಮೋ ನಿಜವೇ ಅಥವಾ ಯಾರಿಗಾದರೂ ಬಿದ್ದ ಕನಸೇ ಎಂಬುದನ್ನು ಕಾದು ನೋಡಬೇಕಿದೆ. ಇಂದು (ಜುಲೈ 30) ಇದರ ಎಪಿಸೋಡ್ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ