Peppa Pig: ಹಾಸ್ಯದ ಜೊತೆ ನೀತಿ ಪಾಠ ಹೇಳಿದ ‘ಪೆಪ್ಪಾ ಪಿಗ್‌ ಮ್ಯೂಸಿಕಲ್ ಶೋ’; ಎಂಜಾಯ್​ ಮಾಡಿದ ಮಕ್ಕಳು

| Updated By: ಮದನ್​ ಕುಮಾರ್​

Updated on: Nov 21, 2022 | 4:57 PM

Peppa Pig Musical Show: ಇದೇ ಮೊದಲ ಬಾರಿಗೆ ‘ಪೆಪ್ಪಾ ಪಿಗ್‌ ಮ್ಯೂಸಿಕಲ್ ಶೋ’ ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಇಲ್ಲಿನ ಮಕ್ಕಳು ಹಾಗೂ ಪಾಲಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.

Peppa Pig: ಹಾಸ್ಯದ ಜೊತೆ ನೀತಿ ಪಾಠ ಹೇಳಿದ ‘ಪೆಪ್ಪಾ ಪಿಗ್‌ ಮ್ಯೂಸಿಕಲ್ ಶೋ’; ಎಂಜಾಯ್​ ಮಾಡಿದ ಮಕ್ಕಳು
‘ಪೆಪ್ಪಾ ಪಿಗ್‌ ಮ್ಯೂಸಿಕಲ್ ಶೋ’
Follow us on

‘ನಿಕ್ ಜ್ಯೂನಿಯರ್’ (Nick Jr) ವಾಹಿನಿಯಲ್ಲಿ ಪ್ರಸಾರ ಆಗುವ ‘ಪೆಪ್ಪಾ ಪಿಗ್’ ಕಾರ್ಟೂನ್ ಪಾತ್ರ ಕಳೆದ 2 ದಶಕದಲ್ಲಿ ಚಿಣ್ಣರ ನೆಚ್ಚಿನ ಪಾತ್ರವಾಗಿದೆ. ಪೆಪ್ಪಾ ಪಿಗ್‌ (Peppa Pig) ಹಾಗೂ ಅದರ ಕುಟುಂಬದ ಸದಸ್ಯರು ಸುತ್ತ ಹೆಣೆಯುವ ಕಥೆಗಳು ಮಕ್ಕಳಿಗೆ ಮನರಂಜನೆ ನೀಡಿವೆ. ಇಂಥ ಪಾತ್ರವನ್ನು ನೇರವಾಗಿ ನೋಡುವ ಅವಕಾಶ ಸಿಕ್ಕರೆ ಇನ್ನಷ್ಟು ಮಜವಾಗಿರುತ್ತದೆ. ಅಂಥ ಚಾನ್ಸ್​ ಒದಗಿ ಬಂದಿದ್ದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ. ವಯಕಾಮ್‌18 ಮತ್ತು ಬುಕ್ ಮೈ ಶೋ ಸಹಭಾಗಿತ್ವದ ಈ ಮ್ಯೂಸಿಕಲ್ ಶೋ (Peppa Pig Musical Show) ನ.19 ಮತ್ತು 20ರಂದು ಬೆಂಗಳೂರಿನಲ್ಲಿ ನಡೆಯಿತು.

ಈ ಶೋ ಕಂಡು ಮಕ್ಕಳು ಸಖತ್​ ಎಂಜಾಯ್​ ಮಾಡಿದರು. ಟಿವಿಯಲ್ಲಿ ತಮ್ಮನ್ನು ರಂಜಿಸಿದ ಕಾರ್ಟೂನ್ ಪಾತ್ರಗಳನ್ನು ಕಣ್ಣೆದುರೇ ನೋಡುವ ಬೆರಗಿನಲ್ಲಿ ಪುಟಾಣಿಗಳು ಮೈಮರೆತರು. ಮಕ್ಕಳ ಜೊತೆ ಪಾಲಕರೂ ಈ ಶೋ ಕಣ್ತುಂಬಿಕೊಂಡರು. ಪೆಪ್ಪಾ ಪಿಗ್, ಜಾಜ್‌ ಪಿಗ್‌, ಡ್ಯಾಡಿ ಪಿಗ್, ಮಮ್ಮಿ ಪಿಗ್ ಜೊತೆಗೆ ಸುಝಿ ಕುರಿಯ ಸಂಗೀತಕಥದ ಗಮನ ಸೆಳೆಯಿತು. ಎಲ್ಲರೂ ಮನಸಾರೆ ನಕ್ಕು ಎಂಜಾಯ್​ ಮಾಡಿದರು. ಹಾಸ್ಯದ ಜೊತೆಗೆ ಮಕ್ಕಳಿಗೆ ಒಂದು ನೀತಿ ಸಂದೇಶವನ್ನೂ ಸಾರುವ ಕೆಲಸ ಶೋನಿಂದ ಆಯಿತು.

ಗ್ಯ್ರಾಂಡ್‌ಪಾ ಪಿಗ್ ಮತ್ತು ಗ್ರ್ಯಾಂಡ್‌ ಮಾ ಪಾತ್ರಗಳು ವೇದಿಕೆಯ ಮೇಲೆ ಬಂದಾಗ ಮಕ್ಕಳು ಹೆಚ್ಚು ಖುಷಿಪಟ್ಟರು. ಒಟ್ಟಾರೆಯಾಗಿ ‘ಪೆಪ್ಪಾ ಪಿಗ್‌ ಮ್ಯೂಸಿಕಲ್ ಶೋ’ ಮಕ್ಕಳಿಗೆ ಬೇರೆಯದೇ ಲೋಕವನ್ನು ಪರಿಚಯಿಸಿತು. ಪಾಲಕರಿಗೂ ಇದು ಇಷ್ಟವಾಯಿತು. ಸಂಗೀತ, ಡ್ಯಾನ್ಸ್​, ಕಾಲ್ಪನಿಕ ಪಾತ್ರಗಳ ಜೀವಂತ ರೂಪದ ಮೂಲಕ ಮೂಡಿಬಂದ ಈ ಕಾರ್ಯಕ್ರಮಕ್ಕೆ ಬೆಂಗಳೂರಿನ ಮಕ್ಕಳು ಹಾಗೂ ಪಾಲಕರಿಂದ ಉತ್ತಮ ಸ್ಪಂದನೆ ಸಿಕ್ಕಿತು.

ಪೆಪ್ಪಾ ಪಿಗ್ ಹಿನ್ನೆಲೆ:

ಇದು ಬ್ರಿಟಿಷ್ ಮೂಲದ ಪ್ರೀ-ಸ್ಕೂಲ್‌ ಆನಿಮೇಟೆಡ್ ಟೆಲಿವಿಷನ್ ಸೀರಿಸ್. ಆಸ್ಟ್ಲೇ ಬೇಕರ್ ಡೇವೈಸ್‌ ಅವರು ಇದರ ಕರ್ತೃ. ಪೆಪ್ಪಾ ಮತ್ತು ಅದರ ಕುಟುಂಬದ ಜೊತೆಗೆ ಸ್ನೇಹಿತರ ಪಾತ್ರಗಳೇ ಇಲ್ಲಿನ ಪ್ರಮುಖ ಆಕರ್ಷಣೆ. 2004ರ ಮೇ 31ರಲ್ಲಿ ಇದರ ಮೊದಲ ಶೋ ಪ್ರಸಾರ ಕಂಡಿತು. 2021ರ ಮಾರ್ಚ್‌ನಲ್ಲಿ ಇದರ 7ನೇ ಆವೃತ್ತಿ ಶುರುವಾಗಿದೆ. ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಈ ಶೋ ಪ್ರಸಾರ ಆಗುತ್ತಿದೆ.

‘ಪೆಪ್ಪಾ ಪಿಗ್’ ಕಾರ್ಟೂನ್ನಲ್ಲಿ ಬರುವ ಪಾತ್ರಗಳನ್ನೇ ಇಟ್ಟುಕೊಂಡು ರೂಪಿಸಿದ ಸಂಗೀತ ರೂಪಕ ‘ಪೆಪ್ಪಾ ಪಿಗ್ ಮ್ಯೂಸಿಕಲ್ ಲೈವ್’. ಈವರೆಗೆ ಬೇರೆ ಬೇರೆ ನಗರಗಳಲ್ಲಿ ಆಯೋಜನೆಗೊಂಡಿದ್ದ ಈ ಶೋ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:57 pm, Mon, 21 November 22