ಭುವಿಗೆ ತಿಳಿದೇ ಹೋಯ್ತು ವಿಲ್ ವಿಚಾರ; ಜವಾಬ್ದಾರಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದ ಹರ್ಷನ ಪತ್ನಿ
ರತ್ನಮಾಲಾ ಹಾಗೂ ಭುವಿ ಮಧ್ಯೆ ಅನೇಕ ಬಾರಿ ಮಾತುಕತೆ ಆಗಿತ್ತು. ಈ ಮಾತುಕತೆ ವೇಳೆ ಅನೇಕ ವಿಚಾರಗಳು ಚರ್ಚೆ ಆಗಿದ್ದವು. ಅದರಲ್ಲೂ ಪ್ರಮುಖವಾಗಿ ಜವಾಬ್ದಾರಿ ವಿಚಾರಗಳನ್ನು ರತ್ನಮಾಲಾ ಹೇಳಿದ್ದಳು.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ರತ್ನಮಾಲಾ ಮೃತಪಟ್ಟ ನಂತರದಲ್ಲಿ ಮನೆಯಲ್ಲಿ ಸೂತಕದ ಛಾಯೆ ನಿರ್ಮಾಣ ಆಗಿದೆ. ಹರ್ಷ ಹಾಗೂ ಭುವಿ ಅನ್ಯೋನ್ಯವಾಗಿರುವುದನ್ನು ವರುಧಿನಿ ಸಹಿಸುತ್ತಿಲ್ಲ. ಆಕೆಗೆ ಸಿಟ್ಟು ಬರುತ್ತಿದೆ. ಆಕೆ ಕೋಪವನ್ನು ತೋರಿಸಿಕೊಳ್ಳುತ್ತಿದ್ದಾಳೆ. ಹರ್ಷ ಹಾಗೂ ಭುವಿ ಮಧ್ಯೆ ಬಿರುಕು ಮೂಡಿಸಲು ವರು ಪ್ಲ್ಯಾನ್ ಮಾಡಿದ್ದಾಳೆ.
ಭುವಿಗೆ ಗೊತ್ತಾಯ್ತು ವಿಲ್ ವಿಚಾರ
ವಿಲ್ ವಿಚಾರಕ್ಕಾಗಿ ವರುಧಿನಿಯು ಭುವಿ ತಂಗಿ ಬಿಂದು ಜತೆ ಕಿರಿಕ್ ಮಾಡಿಕೊಂಡಿದ್ದಳು. ಈ ವಿಚಾರವನ್ನು ಭುವಿಗೆ ಬಿಂದು ಹೇಳಿದ್ದಾಳೆ. ವಾಗ್ವಾದ ನಡೆಯುವ ಸಂದರ್ಭದಲ್ಲಿ ಬಿಂದುನ ಕಟ್ಟಿ ಹಾಕಿದ್ದಳು ಕೂಡ. ಈ ವಿಚಾರದಲ್ಲಿ ವರುಧಿನಿಗೆ ಪ್ರಶ್ನೆ ಮಾಡಿದಾಗ ಆಕೆ ತಪ್ಪಿಸಿಕೊಳ್ಳಲು ನೋಡಿದ್ದಾಳೆ. ‘ರತ್ನಮಾಲಾ ಯಾವುದೋ ಫೈಲ್ ಹುಡುಕಿ ತರಲು ಹೇಳಿದಳು. ಹೀಗಾಗಿ, ನಾನು ಆ ಫೈಲ್ನ ಹುಡುಕಿ ನಿನ್ನ ಮನೆಗೆ ಬಂದೆ. ಸಣ್ಣ ವಿಚಾರಕ್ಕೆ ದೊಡ್ಡದಾಗಿ ಕಿರಿಕ್ ಮಾಡಿದಳು’ ಎಂದು ತಪ್ಪಿಸಿಕೊಳ್ಳಲು ನೋಡಿದ್ದಾಳೆ ವರುಧಿನಿ. ಅಲ್ಲದೆ, ರತ್ನಮಾಲಾ ಹೇಳಿದ ಫೈಲ್ನ ಬಣ್ಣ ಯಾವ ರೀತಿ ಇತ್ತು ಎಂಬುದನ್ನು ಕೂಡ ತಿಳಿಸಿದ್ದಾಳೆ.
ಇದನ್ನು ಕೇಳಿದ ನಂತರದಲ್ಲಿ ಭುವಿಗೆ ಅಸಲಿ ವಿಚಾರ ಗೊತ್ತಾಗಿದೆ. ರತ್ನಮಾಲಾ ನೀಡಿದ ಫೈಲ್ನಲ್ಲಿ ಯಾವುದೋ ಪ್ರಮುಖ ವಿಚಾರ ಇತ್ತು ಎಂದು ಆಕೆಗೆ ಅನಿಸಿದೆ. ರತ್ನಮಾಲಾ ಸತ್ತು 12 ದಿನ ಆಗಿಲ್ಲ. ಈ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಬಾರದು ಎನ್ನುವ ನಂಬಿಕೆ ಭುವಿಯದ್ದು. ಈ ಕಾರಣಕ್ಕೆ ಆಕೆ ಸುಮ್ಮನಿದ್ದಳು. ಆದರೆ, ಈಗ ಮನಸ್ಸು ತಡೆಯದೇ ಅವಳು ಲಕೋಟೆ ತೆಗೆದು ನೋಡಿದ್ದಾಳೆ. ಆಗ ವಿಲ್ ವಿಚಾರ ಗೊತ್ತಾಗಿದೆ.
ನೆನಪಾಯಿತು ಹಳೆಯ ವಿಚಾರ
ರತ್ನಮಾಲಾ ಹಾಗೂ ಭುವಿ ಮಧ್ಯೆ ಅನೇಕ ಬಾರಿ ಮಾತುಕತೆ ಆಗಿತ್ತು. ಈ ಮಾತುಕತೆ ವೇಳೆ ಅನೇಕ ವಿಚಾರಗಳು ಚರ್ಚೆ ಆಗಿದ್ದವು. ಅದರಲ್ಲೂ ಪ್ರಮುಖವಾಗಿ ಜವಾಬ್ದಾರಿ ವಿಚಾರಗಳನ್ನು ರತ್ನಮಾಲಾ ಹೇಳಿದ್ದಳು. ಇದಕ್ಕೆ ಇಷ್ಟು ಆಳದ ಅರ್ಥ ಇದೆ ಎಂಬುದು ಆಕೆಗೆ ಗೊತ್ತಿರಲಿಲ್ಲ. ಈಗ ಗೊತ್ತಾಗಿ ಭುವಿ ಮರುಗುತ್ತಿದ್ದಾಳೆ. ‘ರತ್ನಮಾಲಾ ಇದ್ದಾಗಲೇ ನಾನು ಈ ಲಕೋಟೆಯನ್ನು ತೆಗೆದು ನೋಡಬೇಕಿತ್ತು. ಆದರೆ, ಈಗ ಕಾಲ ಮಿಂಚಿದೆ. ಅವರು ಇದ್ದಾಗ ತೆಗೆದಿದ್ದರೆ ಕನಿಷ್ಠಪಕ್ಷ ಯಾಕೆ ಹೀಗೆ ಮಾಡುತ್ತಿದ್ದಿರಿ ಎಂಬುದನ್ನಾದರೂ ಕೇಳಬಹುದಿತ್ತು’ ಎಂದು ಮನಸ್ಸಿನಲ್ಲೇ ಹೇಳಿಕೊಂಡಿದ್ದಾಳೆ ಭುವಿ. ‘ಜವಾಬ್ದಾರಿ ಬಂದಾಗ ಅದನ್ನು ತೆಗೆದುಕೊಳ್ಳಬೇಕು’ ಎಂದು ರತ್ನಮಾಲಾ ಹೇಳಿದ್ದಳು. ಅದನ್ನು ಭುವಿ ಗಂಭೀರವಾಗಿ ಸ್ವೀಕರಿಸಿದ್ದಾಳೆ.
ಸಾನಿಯಾಗೆ ಟೆನ್ಷನ್
ಸಾನಿಯಾಳ ಎಂಡಿ ಪಟ್ಟ ಹೋಗಿದೆ. ಈ ಮಧ್ಯೆ ಹಳೆಯ ಸೌಪರ್ಣಿಕಾಳನ್ನು ಕರೆದು ತಂದಿದ್ದಾಳೆ ವರು. ಈ ವಿಚಾರದಲ್ಲಿ ಸಾನಿಯಾಗೆ ಟೆನ್ಷನ್ ಶುರುವಾಗಿದೆ. ಇಷ್ಟು ದಿನ ಆ ಸೌಪರ್ಣಿಕಾ ಬಗ್ಗೆ ಆಕೆ ತಲೆಕೆಡೆಸಿಕೊಳ್ಳುತ್ತಿರಲಿಲ್ಲ. ಆದರೆ, ಈಗ ವರುಧಿನಿ ಮಾಡುತ್ತಿರುವ ಕೆಲಸದ ಬಗ್ಗೆ ಸಾನಿಯಾಗೆ ಅನುಮಾನ ಶುರುವಾಗಿದೆ. ಆಕೆ ಯಾಕೆ ಈ ರೀತಿ ಮಾಡುತ್ತಿದ್ದಾಳೆ ಎಂಬ ಪ್ರಶ್ನೆಯನ್ನು ತನಗೆ ತಾನೇ ಕೇಳಿಕೊಳ್ಳುತ್ತಿದ್ದಾಳೆ.
ವರು ಪ್ಲಾನ್
ಹರ್ಷನಿಗೆ ಹೇಗಾದರೂ ಮಾಡಿ ವಿಲ್ ವಿಚಾರ ಹೇಳಬೇಕು, ಅದಕ್ಕೆ ತನ್ನದೇ ಆದ ಅರ್ಥ ನೀಡಬೇಕು ಎಂದು ವರುಧಿನಿ ಪ್ಲ್ಯಾನ್ ಮಾಡಿಕೊಂಡಿದ್ದಾಳೆ. ಇದಕ್ಕೆ ಹರ್ಷ ಬಲಿ ಆಗೋದು ಪಕ್ಕಾ ಆಗಿದೆ. ಮೋಸ ಮಾಡಿ ಆತನನ್ನು ವಶಕ್ಕೆ ಪಡೆದುಕೊಳ್ಳಬೇಕು ಎನ್ನುವ ಆಲೋಚನೆಯಲ್ಲಿ ಅವಳಿದ್ದಾಳೆ. ಈ ಪ್ಲ್ಯಾನ್ ವರ್ಕೌಟ್ ಆದರೆ ಭುವಿ ಹಾಗೂ ಹರ್ಷ ಬೇರೆ ಆಗಬಹುದು. ಆಸ್ತಿ ವಿಚಾರ ಗೊತ್ತಾದರೆ ಭುವಿ ಬಗ್ಗೆ ಹರ್ಷ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಬಹುದು ಎಂಬ ಕುತೂಹಲ ಮೂಡಿದೆ.
ಶ್ರೀಲಕ್ಷ್ಮಿ ಎಚ್.
Published On - 7:00 am, Tue, 22 November 22