Lakshana Serial: ಸಿ.ಎಸ್‌ನ್ನು ಕಾಪಾಡುವ ಜವಾಬ್ದಾರಿ ನಿನ್ನದು ಭೂಪತಿ ಎಂದ ಶಕುಂತಳಾದೇವಿ
ಭೂಪತಿ ಅಮ್ಮ ಇನ್ನು ನಾನು ಯಾವತ್ತೂ ಸಿ.ಎಸ್ ಅವರ ವಿಚಾರದಲ್ಲಿ ತಲೆ ಹಾಕುವುದಿಲ್ಲ. ನಿನ್ನೆ ರಾತ್ರಿ ನಾನೇನಾದರೂ ತಪ್ಪಾಗಿ ಮಾತನಾಡಿದ್ದರೆ ನನ್ನನ್ನು ಕ್ಷಮಿಸಿ ಬಿಡಿ ಎಂದು ಕೇಳಿಕೋಳ್ಳುತ್ತಾನೆ. ಈತನ ಮಾತಿಗೆ ಪ್ರತಿಕ್ರಿಯೆ ನೀಡುತ್ತಾ ನೀನು ಸಿ.ಎಸ್‌ಗೆ ಯಾವುದೇ ತೊಂದರೆ ಆಗದ ಹಾಗೆ ನೋಡಿಕೊಳ್ಳಬೇಕು ಭೂಪತಿ.
ಧಾರಾವಾಹಿ: ಲಕ್ಷಣ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ನಾವು ನೋಡಿದ ಹಾಗೆ ಮೌರ್ಯನ ಹೆಸರಲ್ಲಿ ಚಂದ್ರಶೇಖರ್‌ನ್ನು ಭಾರ್ಗವಿ ಕಿಡ್ನಾಪ್ ಮಾಡಿ ಹೆದರಿಸಿದ್ದಳು. ಮನೆಯವರೆಲ್ಲರೂ ಇದು ಮೌರ್ಯನ್ದೇ ಕೆಲಸ ಎಂದು ಅಂದುಕೊಂಡಿದ್ದರು. ಹೇಗೋ ಕಿಡ್ನಾಪ್ ಆಗಿದ್ದ ಸಿ.ಎಸ್‌ನ್ನು ಪೋಲಿಸರ ಸಹಾಯದಿಂದ ನಕ್ಷತ್ರ ಭೂಪತಿ ಜೋಡಿ ರಕ್ಷಣೆ ಮಾಡುತ್ತಾರೆ.
ಅಮ್ಮನ ಮಾತು ಭೂಪತಿಗೆ ಧೈರ್ಯ
ಸೇಫ್ ಆಗಿ ಚಂದ್ರಶೇಖರ್ ಅವರನ್ನು ಮನೆಗೆ ಕಳುಹಿಸಿ ಭೂಪತಿ ಹಾಗೂ ನಕ್ಷತ್ರ ತಮ್ಮ ಮನೆಗೆ ವಾಪಸ್ ಬರುತ್ತಾರೆ. ಎಷ್ಟೇ ರಾತ್ರಿಯಾಗಿದ್ದರೂ ಈ ಇಬ್ಬರು ಮನೆಗೆ ಬರುವವರೆಗೂ ಮನೆಯ ಸದಸ್ಯರೆಲ್ಲರೂ ಗಾಬರಿಯಿಂದ ಕಾದು ಕುಳಿತಿದ್ದರು. ಮನೆಗೆ ಬಂದ ಬಳಿಕ ಅವರೆಲ್ಲರೂ ನಿರಾಳರಾದರು. ಮಗ ತನ್ನ ಮಾತನ್ನು ಮೀರಿ ಸಿ.ಎಸ್‌ಗೆ ಸಹಾಯ ಮಾಡಲು ಹೋಗಿದ್ದು ಶಕುಂತಳಾದೇವಿಗೆ ಸ್ವಲ್ಪವೂ ಇಷ್ಟವಾಗಿರಲಿಲ್ಲ. ಮಗ ಮನೆಗೆ ಬಂದ ತಕ್ಷಣ ಈ ಅಮ್ಮನ ಮಾತನ್ನೇ ಮೀರಿ ಆ ಸಿ.ಎಸ್‌ಗೆ ಸಹಾಯ ಮಾಡಲು ಹೋಗಿದ್ದೀಯಾ, ನನ್ನ ಮಾತಿಗೆ ಹಾಗದ್ರೆ ಬೆಲೆನೇ ಇಲ್ವ ಅಂತ ಮಗನನ್ನು ಗದರುತ್ತಾರೆ ಶಕುಂತಳಾದೇವಿ.
ಅಮ್ಮನ ಮಾತನ್ನು ಕೇಳಿ, ಸ್ವಲ್ಪ ನನಗೂ ಮಾತನಾಡಲು ಅವಕಾಶ ಕೊಡಿ, ಯಾಕೆ ಹೋದೆ ಎಂಬುದಕ್ಕೆ ನಿಮಗೆ ಕಾರಣ ನೀಡುತ್ತೇನೆ ಎನ್ನುತ್ತಾ ಮೌರ್ಯನ ಕಾರಣಕ್ಕಾಗಿಯೇ ನಾನು ಸಿ.ಎಸ್ ಸಹಾಯಕ್ಕೆ ಹೋಗಿದ್ದು. ನಾನು ಏನಾದ್ರು ಇವತ್ತು ಅಲ್ಲಿಗೆ ಹೋಗಿಲ್ಲ ಅಂತಿದ್ರೆ ಎರಡು ತಪ್ಪು ಆಗಿರೋದು. ಒಂದು ನಮ್ಮ ಮನೆಯ ಮಗನ ಕಾರಣದಿಂದಾಗಿ ಸಿ.ಎಸ್ ಪ್ರಾಣ ಹೋಗಿರೋದು. ಎರಡನೇಯದು ಮೌರ್ಯ ಒಬ್ಬ ಕೊಲೆಗಾರ ಆಗಿರುತ್ತಿದ್ದ.
ಒಬ್ಬ ಅಣ್ಣನಾಗಿ ನನ್ನ ತಮ್ಮನಿಂದ ಅಂತಹ ತಪ್ಪು ಆಗಲು ಬಿಡಬೇಕಿತ್ತಾ, ಇದು ಯಾವ ನ್ಯಾಯ ಅಮ್ಮ ಎಂದು ಶಕುಂತಳಾದೇವಿಯ ಬಳಿ ಹೇಳುತ್ತಾನೆ. ಭೂಪತಿಯ ಮಾತನ್ನು ಕೇಳಿ ಮನೆಯವರೆಲ್ಲರೂ ಒಂದು ಕ್ಷಣ ಮೌನವಾಗುತ್ತಾರೆ. ಭೂಪತಿಯ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮನೆಯವರಿಗೆ ಅರಿವಾಗುತ್ತದೆ. ಇದಾದ ಬಳಿಕ ಬೆಳಗ್ಗೆ ಎದ್ದು ಅತ್ತೆಗೆ ಕಾಫಿ ಕೊಡಲೆಂದು ಶಕುಂತಳಾ ದೇವಿ ಕೋಣೆಗೆ ಹೋಗುತ್ತಾಳೆ ನಕ್ಷತ್ರ. ಎಷ್ಟೇ ಬಗಿಲು ಬಡಿದರೂ ಆ ಕಡೆಯಿಂದ ಯಾವ ಪ್ರತಿಕ್ರಿಯೆಯೂ ಬರದಿದ್ದಾಗ ಗಾಬರಿಗೊಂಡ ನಕ್ಷತ್ರ ಅತ್ತೆ ಬಾಗಿಲು ತೆರೆಯುತ್ತಿಲ್ಲ, ರಾತ್ರಿ ನೀನು ಹೇಳಿದ ಮಾತಿನಿಂದ ಅತ್ತೆಗೆ ಬೇಜಾರಾಗಿರಬಹುದು ಎಂದು ಹೇಳುತ್ತಾಳೆ.
ಇದನ್ನು ಓದಿ: Lakshana Serial: ಸಿ.ಎಸ್ ಪ್ರಾಣಾಪಯದಿಂದ ಪಾರು, ಮುಂದೆ ಕಾದಿದೆ ದೊಡ್ಡ ಕಂಟಕ
ಭೂಪತಿ ಬಾಗಿಲು ಬಡಿದ ಸ್ವಲ್ಪ ಹೊತ್ತಿನ ಬಳಿಕ ಸ್ವತಃ ಶಕುಂತಳಾದೇವಿಯೇ ಕೋಣೆಯಿಂದ ಹೊರಗೆ ಬರುತ್ತಾರೆ. ಆಗ ಭೂಪತಿ ಅಮ್ಮ ಇನ್ನು ನಾನು ಯಾವತ್ತೂ ಸಿ.ಎಸ್ ಅವರ ವಿಚಾರದಲ್ಲಿ ತಲೆ ಹಾಕುವುದಿಲ್ಲ. ನಿನ್ನೆ ರಾತ್ರಿ ನಾನೇನಾದರೂ ತಪ್ಪಾಗಿ ಮಾತನಾಡಿದ್ದರೆ ನನ್ನನ್ನು ಕ್ಷಮಿಸಿ ಬಿಡಿ ಎಂದು ಕೇಳಿಕೋಳ್ಳುತ್ತಾನೆ. ಈತನ ಮಾತಿಗೆ ಪ್ರತಿಕ್ರಿಯೆ ನೀಡುತ್ತಾ ನೀನು ಸಿ.ಎಸ್‌ಗೆ ಯಾವುದೇ ತೊಂದರೆ ಆಗದ ಹಾಗೆ ನೋಡಿಕೊಳ್ಳಬೇಕು ಭೂಪತಿ. ರಾತ್ರಿ ನೀನು ಹೇಳಿದ ಮಾತುಗಳನ್ನು ಸುಮಾರು ಸಲ ಯೋಚಿಸಿ ನೋಡಿದಾಗ ಅದು ಸರಿ ಅಂತ ನನ್ನ ಮನಸ್ಸಿಗೆ ಅನ್ನಿಸಿತು. ಸಿ.ಎಸ್ ಪ್ರಾಣಕ್ಕೆ ಆಪತ್ತು ಇರುವುದು ನಮ್ಮ ಮನೆಯ ಮಗನಿಂದ.
ಹಾಗಾಗಿ ಅವರನ್ನು ಆತನಿಂದ ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಆದಷ್ಟು ಬೇಗ ಆ ಮೌರ್ಯನನ್ನು ಹಿಡಿದು ಜೈಲಿಗೆ ಹಾಕಬೇಕು. ಅವನ ಪಾಲಿನ ಶಿಕ್ಷೆಯನ್ನು ಅವನು ಅನುಭವಿಸಲೇಬೇಕು. ಸಾಲದಕ್ಕೆ ಜೈಲಿನಿಂದ ಬೇರೆ ತಪ್ಪಿಸಿಕೊಂಡು ಬಂದಿದ್ದಾನೆ. ಹೀಗೆ ಬಿಟ್ಟರೆ ಆತ ದೊಡ್ಡ ಕ್ರಿಮಿನಲ್ ಆಗುತ್ತಾನೆ. ಭೂಪತಿ ಅವತ್ತು ನಿನ್ನ ಮದುವೆಯ ಸಮಯದಲ್ಲಿ ಹಿಟ್ ಆಂಡ್ ರನ್ ಕೇಸ್‌ನಲ್ಲಿ ಸಿಲುಕಿದಾಗ ಮೌರ್ಯನನ್ನು ಕಾಪಾಡಲು ನಾನು ತುಂಬಾ ಒದ್ದಾಡಿದೆ. ಯಾಕೆಂದರೆ ಅದು ಅವನಿಂದ ಗೊತ್ತಿಲ್ಲದೆ ಆಗಿರುವಂತಹ ತಪ್ಪು. ಆ ಕಾರಣಕ್ಕಾಗಿ ನಾನು ಅವನನ್ನು ಕಾಪಾಡಬೇಕಾಯಿತು.
ಕಾನೂನಿನಲ್ಲಿ ಅವನ ಆ ತಪ್ಪಿಗೆ ಕ್ಷಮೆ ಇಲ್ಲದಿದ್ದರೂ ಈ ತಾಯಿ ಬಳಿ ಅವನಿಗೆ ಕ್ಷಮೆ ಇತ್ತು. ಆದರೆ ಮೌರ್ಯ ಈಗ ಮಾಡುತ್ತಿರುವ ಎಲ್ಲ ತಪ್ಪುಗಳು ಸ್ವತಃ ಅವನೇ ಮಾಡುತ್ತಿರುವುದು. ಹಾಗಾಗಿ ಅವನಿಗೆ ಕಾನೂನು ಪ್ರಕಾರ ಯಾವ ಶಿಕ್ಷೆ ಆಗಲೇಬೇಕು. ಮೌರ್ಯ ಮಾಡಿರುವಂತಹ ತಪ್ಪಿಗೆ ಕಾನೂನಿನಲ್ಲೂ ಕ್ಷಮೆ ಇಲ್ಲ ಹಾಗೂ ಈ ಅಮ್ಮನ ಬಳಿಯು ಕ್ಷಮೆ ಇಲ್ಲ. ಬೇಕಾದ್ರೆ ಕೋರ್ಟಿನಲ್ಲಿ ಅವನ ವಿರುದ್ಧ ನಾನೇ ಸಾಕ್ಷಿ ಹೇಳುತ್ತೇನೆ. ಈ ಶಕುಂತಳಾದೇವಿ ಯಾವತ್ತಿದ್ರು ನ್ಯಾಯದ ಪರವಾಗಿಯೇ ಇರುತ್ತಾಳೆ. ಸಿ.ಎಸ್‌ನ್ನು ಕಾಪಾಡುವ ಜವಬ್ದಾರಿ ನಿನ್ನದು ಭೂಪತಿ ಎಂದು ಶಕುಂತಳಾದೇವಿ ಹೇಳುತ್ತಾರೆ. ಇವರ ಈ ಮಾತನ್ನು ಕೇಳಿ ಭೂಪತಿ ನಕ್ಷತ್ರರಿಗೆ ತುಂಬಾ ಹೆಮ್ಮೆ ಆಗುತ್ತದೆ. ಇನ್ನು ಯಾವ ರೀತಿಯ ಟ್ವಿಸ್ಟ್ ಇರುತ್ತದೆ ಎಂಬುದನ್ನು ಮುಂದೆ ನೋಡಬೇಕಾಗಿದೆ.
ಮಧುಶ್ರೀ ಅಂಚನ್
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:25 am, Tue, 22 November 22