ರಾಜೀವನಿಂದ ವಸುನ ಕಾಪಾಡಿ ಮನೆಗೆ ಕರೆದುಕೊಂಡ ಬಂದ ರಿಷಿ: ತಕರಾರು ತೆಗೆದ ದೇವಯಾನಿ

Honganasu Serial Update: ಗಾಬರಿಯಲ್ಲಿದ್ದ ವಸುಗೆ ರಿಷಿ ತನ್ನ ಕೈಯಾರೆ ಕಾಫಿ ಮಾಡಿ ಕೊಟ್ಟ. ವಸು ಮೇಲೆ ಅತಿಯಾದ ಕಾಳಜಿ ತೋರಿಸುತ್ತಿದ್ದ ರಿಷಿ ನೋಡಿ ದೇವಯಾನಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ.

ರಾಜೀವನಿಂದ ವಸುನ ಕಾಪಾಡಿ ಮನೆಗೆ ಕರೆದುಕೊಂಡ ಬಂದ ರಿಷಿ: ತಕರಾರು ತೆಗೆದ ದೇವಯಾನಿ
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 22, 2022 | 1:12 PM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್​ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು.

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ಕಾಲೇಜಿನಲ್ಲಿ ಎಲ್ಲರೂ ರಿಷಿ ಮತ್ತು ವಸುಧರಾ ಸಂಬಂಧದ ಬಗ್ಗೆಯೇ ಮಾತನಾಡುತ್ತಿದ್ದಾರೆ. ವಿದ್ಯಾರ್ಥಿಗಳ ಮಾತನ್ನು ಕೇಳಿಸಿಕೊಂಡ ವಸು ಬೇಸರದಿಂದ ರಿಷಿಗೆ ಹೇಳದೆ ಕಾಲೇಜಿನಿಂದ ಹೊರಟಳು. ‘ವಸು ಯಾಕೆ ಇನ್ನೂ ಬಂದಿಲ್ಲ’ ಎಂದು ರಿಷಿ ಫೋನ್ ಮಾಡಿದ. ‘ತಲೆನೋವು ಎಂದು ಮನೆಗೆ ಹೊರಟೆ’ ಅಂತ ಹೇಳಿದಳು ವಸು. ಡ್ರಾಪ್ ಮಾಡುತ್ತೇನೆ ಎಂದು ರಿಷಿ ಹೇಳಿದರೂ ಬೇಡ ಎಂದು ಫೋನ್ ಕಟ್ ಮಾಡಿದಳು ವಸು. ಒಬ್ಬಳೇ ಹೋಗುತ್ತಿದ್ದ ವಸು ಮುಂದೆ ಪ್ರತ್ಯಕ್ಷನಾದ ಆಕೆಯ ಬಾವ ರಾಜೀವ. ರಾಜೀವನ ನೋಡಿ ವಸು ಶಾಕ್ ಆದಳು.

ವಸು ಕಥೆ ಮುಗಿಸುವಂತೆ ರಾಜೀವನಿಗೆ ದೇವಯಾನಿ ಸುಪಾರಿ ಕೊಟ್ಟಿದ್ದಾಳೆ. ವಸುಧರಾಳನ್ನು ನೋಡಿದ ರಾಜೀವ ಆಕೆಯನ್ನು ಹಿಂಬಾಲಿಸಿಕೊಂಡು ಹೋದ. ಮನೆಗೆ ಬಂದ ವಸು ರಾಜೀವನನ್ನು ನೋಡಿ ಶಾಕ್ ಆದಳು. ಮನೆಯಿಂದ ಹೋಗುವಂತೆ ಗದರಿದಳು ವಸು. ಅಷ್ಟೊತ್ತಿಗೆ ರಿಷಿ ಫೋನ್ ಮಾಡಿದ. ವಸು ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದ ರಿಷಿಗೆ ಪಕ್ಕದಲ್ಲೇ ಬೇರೆ ಯಾರದ್ದೂ ಧ್ವನಿ ಕೇಳುತ್ತಿದೆಯಲ್ಲಾ ಎಂದು ಅಚ್ಚರಿ ಪಟ್ಟ. ಆದರೆ ವಸುಧರಾ ಏನೂ ಹೇಳದೆ ಆಮೇಲೆ ಫೋನ್ ಮಾಡ್ತೀನಿ ಎಂದು ಕಟ್ ಮಾಡಿದಳು.

ವಸು ಮನೆ ಬಳಿಯೇ ರಾಜೀವ ಇರುತ್ತಾನೆ ಎನ್ನುವ ಅನುಮಾನದಿಂದ ರಿಷಿ ಕೂಡ ಮನೆಗೆ ಹೋಗದೆ ವಸುಧರಾ ಮನೆ ಮುಂದೆಯೇ ನಿಂತಿದ್ದ. ರಾತ್ರಿಯೆಲ್ಲ ಮನೆ ಮುಂದೆಯೇ ನಿಂತು ವಸುನ ಕಾಯುತ್ತಿದ್ದ. ವಸುಧರಾಳನ್ನು ಹೇಗಾದರು ಮಾಡಿ ತನ್ನವಳನ್ನಾಗಿಸಿಕೊಳ್ಳಬೇಕೆಂದು ಸ್ಕೆಚ್ ಹಾಕಿ ಮತ್ತೆ ಬಂದ ರಾಜೀವ. ಒಬ್ಬಳೇ ಮಲಗಿದ್ದ ವಸುಧರಾ ಮೇಲೆ ಆಟ್ಯಾಕ್ ಮಾಡಿದ. ಆಕೆಯ ಕೈ ಹಿಡಿದು ಎಳೆದುಕೊಂಡು ಹೊರಟ. ಆಗ ರಿಷಿ ಎಂಟ್ರಿ ಕೊಟ್ಟ. ವಸುಧರಾ ಕೈ ಹಿಡಿದು ನಿಂತಿದ್ದ ರಾಜೀವನಿಗೆ ಹೊಡೆದು ವಸುಧರಾಳನ್ನು ಬಿಡಿಸಿದ. ಇಬ್ಬರ ಫೈಟ್‌ನಿಂದ ರಿಷಿ ಕೈಗೆ ಗಾಯವಾಯಿತು. ವಸುಧರಾ ತನ್ನ ದುಪ್ಪಟವನ್ನೇ ಹರಿದು ರಿಷಿ ಕೈಗೆ ಕಟ್ಟಿದಳು. ಅಲ್ಲಿಂದ ಹೊರಡುವಂತೆ ವಸುಗೆ ಹೇಳಿದ ರಿಷಿ. ವಸು ಎಲ್ಲಿಗೆ ಎಂದು ಕೇಳಿದರೂ ರಿಷಿ ಏನೂ ಹೇಳದೆ ಕರ್ಕೊಂಡು ಹೊರಟ. ವಸು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಕಾರು ನಿಲ್ಲಿಸಿ ಆಕೆಯನ್ನು ಸಮಾಧಾನ ಮಾಡಿ ನಿನ್ನ ಜೊತೆ ನಾನಿದ್ದೀನಿ ಎಂದು ಧೈರ್ಯ ತುಂಬಿದ ರಿಷಿ.

ಇತ್ತ ರಿಷಿ ಇನ್ನೂ ಮನೆಗೆ ಬಂದಿಲ್ಲ ಎಂದು ಎಲ್ಲರೂ ಗಾಬರಿಯಾಗಿದ್ದರು. ಮಗನ ಬಗ್ಗೆ ಜವಾಬ್ದಾರಿ ಇಲ್ಲ ಎಂದು ಮಹೇಂದ್ರನಿಗೆ ಕ್ಲಾಸ್ ತೆಗೆದುಕೊಂಡಳು ದೇವಯಾನಿ. ಎಲ್ಲರೂ ಆತಂಕದಿಂದ ಕಾಯುತ್ತಿದ್ದರು. ಅಷ್ಟರಲ್ಲೇ ರಿಷಿ ವಸು ಜೊತೆ ಮನೆಗೆ ಎಂಟ್ರಿ ಕೊಟ್ಟ. ಇಬ್ಬರೂ ಒಟ್ಟಿಗೆ ಬಂದಿದ್ದು ನೋಡಿ ದೇವಯಾನಿ ಶಾಕ್ ಆದಳು. ಆಗ ಜಗತಿನ ಕರ್ಕೊಂಡು ಬಂದ ಈಗ ಆಕೆಯ ಶಿಷ್ಯೆಯನ್ನು ಮನೆಗೆ ಕರ್ಕೊಂಡು ಬಂದಿದ್ದಾನೆ ಎಂದು ಬೈದುಕೊಂಡಳು. ವಸುಧರಾಳನ್ನು ಯಾಕೆ ಕರ್ಕೊಂಡು ಬಂದೆ ಎಂದು ರಿಷಿಗೆ ಪ್ರಶ್ನೆ ಮಾಡಿದಳು ದೇವಯಾನಿ.

‘ಕಷ್ಟದಲ್ಲಿದ್ದಳು ಹಾಗಾಗಿ ಮನೆಗೆ ಕರೆದುಕೊಂಡು ಬಂದೆ’ ಎಂದು ರಿಷಿ ಹೇಳಿದ. ಸುಮ್ಮನಾಗದ ದೇವಯಾನಿ ‘ಕಷ್ಟದಲ್ಲಿ ಇರೋರು ತುಂಬಾ ಜನ ಇದ್ದಾರೆ ಎಲ್ಲರನ್ನೂ ಕರ್ಕೊಂಡು ಬರುತ್ತೀಯ’ ಎಂದು ರೇಗಿದಳು. ದೇವಯಾನಿ ಮಾತಿನಿಂದ ನೊಂದುಕೊಂಡ ವಸು ವಾಪಾಸ್ ಹೋಗಲು ನಿರ್ಧರಿಸಿದಳು. ಆದರೆ ವಸು ಕೈ ಹಿಡಿದು ‘ಎಲ್ಲಿಗೂ ಹೋಗಬೇಕಾಗಿಲ್ಲ’ ಎಂದು ಮನೆಯೊಳಗೆ ಕರ್ಕೊಂಡು ಬಂದ ರಿಷಿ. ಏನ್ ನಡಿತಿದೆ ಇಲ್ಲಿ ಎಂದು ದೇವಯಾನಿ ಅಚ್ಚರಿಯಿಂದ ನೋಡುತ್ತಾ ನಿಂತಳು. ವಸುಧರಾಳನ್ನು ರೂಮಿಗೆ ಕರ್ಕೊಂಡು ಹೋದ ರಿಷಿ.

ಗಾಬರಿಯಲ್ಲಿದ್ದ ವಸುಗೆ ರಿಷಿ ತನ್ನ ಕೈಯಾರೆ ಕಾಫಿ ಮಾಡಿ ಕೊಟ್ಟ. ವಸು ಮೇಲೆ ಅತಿಯಾದ ಕಾಳಜಿ ತೋರಿಸುತ್ತಿದ್ದ ರಿಷಿ ನೋಡಿ ದೇವಯಾನಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ರಿಷಿ ಮನೆಯಲ್ಲೇ ಇರುತ್ತಾಳಾ ವಸುಧರಾ? ದೇವಯಾನಿಯ ಮುಂದಿನ ನಡೆ ಏನು? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ