Deepika Das: ಎಲಿಮಿನೇಟ್​ ಆಗಿದ್ದ ದೀಪಿಕಾ ದಾಸ್ ಬಿಗ್​ ಬಾಸ್​ ಮನೆಗೆ ರೀ ಎಂಟ್ರಿ ​ 

ಬಿಗ್ ಬಾಸ್​ ಮನೆಗೆ ವೈಲ್ಡ್ ಕಾರ್ಡ್​ ಮೂಲಕ ಯಾರನ್ನಾದರೂ ಕರೆ ತರುವುದು ವಾಡಿಕೆ. ಹೀಗಿರುವಾಗಲೇ ಒಂದು ಅಚ್ಚರಿಯ ಅಪ್​ಡೇಟ್ ಹೊರಬಿದ್ದಿದ್ದು, ದೊಡ್ಮನೆಗೆ ದೀಪಿಕಾ ದಾಸ್ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.

Deepika Das: ಎಲಿಮಿನೇಟ್​ ಆಗಿದ್ದ ದೀಪಿಕಾ ದಾಸ್ ಬಿಗ್​ ಬಾಸ್​ ಮನೆಗೆ ರೀ ಎಂಟ್ರಿ ​ 
Dipika Das
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 23, 2022 | 6:28 AM

‘ಬಿಗ್ ಬಾಸ್ ಕನ್ನಡ ಸೀಸನ್ 9’ (BBK 9) 9ನೇ ವಾರಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ನೋಡುಗರಲ್ಲಿ ಕುತೂಹಲ ಹುಟ್ಟಿಸುತ್ತಿದೆ. ಮೊನ್ನೆಯಷ್ಟೇ ನಟ ಕಿಚ್ಚ ಸುದೀಪ್​ ಮನೆ ಮಂದಿಗೆಲ್ಲಾ ತಮ್ಮ ಕೈಯಾರೆ ಅಡುಗೆ ಮಾಡಿ ಕಳುಹಿಸಿದ್ದರು. ಬಿಗ್ ಬಾಸ್​ ಮನೆಗೆ ವೈಲ್ಡ್ ಕಾರ್ಡ್​ ಮೂಲಕ ಯಾರನ್ನಾದರೂ ಕರೆ ತರುವುದು ವಾಡಿಕೆ. ಹೀಗಿರುವಾಗಲೇ ಒಂದು ಅಚ್ಚರಿಯ ಅಪ್​ಡೇಟ್ ಹೊರಬಿದ್ದಿದೆ. ಇಡೀ ಬಿಗ್ ಬಾಸ್​ ಮನೆ ಕಾಡಾಗಿದೆ. ಅಷ್ಟೇ ಅಲ್ಲ ಹೊಸ ಸ್ಪರ್ಧಿಯ ಎಂಟ್ರಿ ಕೂಡ ಆಗಿದೆ. ಅದು ಬೇರೆ ಯಾರು ಅಲ್ಲ ದೀಪಿಕಾ ದಾಸ್ (Deepika Das). ಸಾಕಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿರುವ ದೊಡ್ಮನೆಯಿಂದ ಇತ್ತೀಚೆಗೆ ಏಳನೇ ಸ್ಪರ್ಧಿಯಾಗಿ ದೀಪಿಕಾ ದಾಸ್ ಔಟ್ ಆಗಿದ್ದರು. ಆದರೆ ಕಹಾನಿ ಮೇ ಟ್ವಿಸ್ಟ್ ಎಂಬಂತೆ ದೀಪಿಕಾ ದಾಸ್​ ಅವರು ರೀ ಎಂಟ್ರಿ ಪಡೆದಿದ್ದಾರೆ.

ನಟಿ ದೀಪಿಕಾ ದಾಸ್ ಅವರೇ ಬಿಗ್​ ಬಾಸ್​ ಮನೆಗೆ ಎಂಟ್ರಿ ಆಗಿರುವುದು ಖಚಿತವಾಗಿದೆ. ಕಳೆದ ವಾರವಷ್ಟೇ ದೀಪಿಕಾ ದಾಸ್ ದೊಡ್ಡ ಮನೆಯಿಂದ ಹೊರ ನಡೆದಿದ್ದರು. ಆದರೆ ಅವರನ್ನು ತಮ್ಮ ಮನೆಗೆ ಕಳುಹಿಸುವ ಬದಲಾಗಿ ಬಿಗ್​ ಬಾಸ್​ ರಹಸ್ಯ ಕೋಣೆಗೆ ಕಳುಹಿಸಲಾಗಿತ್ತು. ಈ ರಹಸ್ಯ ಕೋಣೆಗೆ ಹೋದ ಸ್ಪರ್ಧಿ ಮನೆಯವರಿಂದ ದೂರವಾಗುತ್ತಾರೆ. ಆದರೆ ಮನೆಯಲ್ಲಿ ನಡೆಯುವ ಪ್ರತಿಯೊಂದು ವಿಚಾರ ಅವರಿಗೆ ತಿಳಿಯುತ್ತದೆ. ಇದು ಒಳಗಿರುವವರಿಗೆ ಯಾವುದೇ ಐಡಿಯಾ ಇರುವುದಿಲ್ಲ. ಕಳೆದ ವಾರದಿಂದ ರಹಸ್ಯ ಕೋಣೆಯಲ್ಲಿದ್ದ ದೀಪಿಕಾ ದಾಸ್​ ಈಗ ಬಿಗ್ ಬಾಸ್​ಗೆ ಕಂಬ್ಯಾಕ್ ಮಾಡಿದ್ದಾರೆ.

ನ. 22ರ ಬೆಳಿಗ್ಗೆ ಕಲರ್ಸ್​ ಕನ್ನಡ ವಾಹಿನಿ ಹೊಸ ಪ್ರೋಮೋ ಒಂದನ್ನು ಹಂಚಿಕೊಂಡಿತ್ತು. ದೀಪಿಕಾ ದಾಸ್ ಅವರ ರೀ ಎಂಟ್ರಿ ಸುಳಿವು ನೀಡಲಾಗಿತ್ತು. ಈ ಪ್ರೋಮೋದಲ್ಲಿ ಇಡೀ ಬಿಗ್ ಬಾಸ್ ಮನೆ ಕಾಡಾಗಿದೆ. ಸ್ಪರ್ಧಿಗಳು ತಮಗೆ ಸಿಕ್ಕ ಸೌಕರ್ಯಗಳನ್ನು ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಗೋಣಿ ಚೀಲದಲ್ಲೇ ಬಟ್ಟೆ ಮಾಡಿಕೊಂಡಿದ್ದಾರೆ. ಹೀಗಾಗಿ, ಸ್ಪರ್ಧಿಗಳು ಕಾಡಾಗಿರುವ ಗಾರ್ಡನ್ ಏರಿಯಾದಲ್ಲೇ ವಾಸ ಮಾಡಬೇಕು. ಊಟ ತಿಂಡಿ ಎಲ್ಲವೂ ಅಲ್ಲಿಯೇ.

ತರಕಾರಿಗಳನ್ನು ಪಡೆಯಲು ಬಿಗ್ ಬಾಸ್ ಕಡೆಯಿಂದ ಟಾಸ್ಕ್ ಒಂದನ್ನು ನೀಡಲಾಯಿತು. ಈ ಟಾಸ್ಕ್​ನ ಗೆದ್ದು ಮನೆಯವರು ತರಕಾರಿ ಪಡೆದರು. ಆಗಲೇ ಬಿಗ್ ಬಾಸ್ ಕಡೆಯಿಂದ ಒಂದು ಘೋಷಣೆ ಆಯಿತು. ‘ಮತ್ತೊಂದು ಸದಸ್ಯ ಈ ಆಟವನ್ನು ಆಡಿ ತರಕಾರಿ ಗೆದ್ದುಕೊಂಡಿದ್ದಾರೆ’ ಎಂದು ಬಿಗ್ ಬಾಸ್ ಹೇಳಿದರು. ಆ ಮತ್ತೋರ್ವ ಸದಸ್ಯ ಬೇರೆ ಯಾರು ಅಲ್ಲ ಅದು ದೀಪಿಕಾ ದಾಸ್​ ಎಂಬುದು ಖಚಿತವಾಗಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:59 pm, Tue, 22 November 22

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?