ಬಿಗ್​ ಬಾಸ್​ ಮನೆಗೆ ಬಂತು ಪ್ರತಾಪ್​ನ ಡ್ರೋನ್​; ಅಂದು ಚುಚ್ಚುಮಾತು, ಇಂದು ಮೆಚ್ಚುಗೆ ಮಾತು

|

Updated on: Jan 26, 2024 | 10:20 PM

ಡ್ರೋನ್​ ವಿಚಾರವನ್ನೇ ಇಟ್ಟುಕೊಂಡು ಆರಂಭದಲ್ಲಿ ಪ್ರತಾಪ್​ ಅವರನ್ನು ಎಲ್ಲರೂ ಗೇಲಿ ಮಾಡಿದ್ದರು. ಚುಚ್ಚುಮಾತುಗಳನ್ನು ಆಡಿದ್ದರು. ಆದರೆ ಬಿಗ್​ ಬಾಸ್​ ಶೋ ಮುಗಿಯುವಾಗ ಅದೇ ಡ್ರೋನ್​ ವಿಚಾರದಲ್ಲಿ ಅವರಿಗೆ ಎಲ್ಲರೂ ಭೇಷ್​ ಎಂದಿದ್ದಾರೆ. ಮೆಚ್ಚುಗೆಯ ಮಾತು ತಿಳಿಸಿದ್ದಾರೆ. ‘ನೀನು ಸಾಧನೆ ಮಾಡಿದ್ದೀಯ’ ಎಂದು ಹೊಗಳಿದ್ದಾರೆ.

ಬಿಗ್​ ಬಾಸ್​ ಮನೆಗೆ ಬಂತು ಪ್ರತಾಪ್​ನ ಡ್ರೋನ್​; ಅಂದು ಚುಚ್ಚುಮಾತು, ಇಂದು ಮೆಚ್ಚುಗೆ ಮಾತು
ಡ್ರೋನ್​ ಪ್ರತಾಪ್​
Follow us on

ಕೆಲವೇ ದಿನಗಳ ಹಿಂದೆ ಬಿಗ್​ ಬಾಸ್​ (Bigg Boss Kannada) ಮನೆಯ ಸದಸ್ಯರು ಕೆಲವು ಆಸೆಗಳನ್ನು ತೋಡಿಕೊಂಡಿದ್ದರು. ಅದನ್ನು ಈಡೇರಿಸುವುದಾಗಿ ಬಿಗ್​ ಬಾಸ್​ ಕೂಡ ಭರವಸೆ ನೀಡಿದ್ದರು. 109ನೇ ದಿನದಲ್ಲಿ ಡ್ರೋನ್​ ಪ್ರತಾಪ್​ (Drone Prathap) ಅವರ ಒಂದು ಆಸೆಯನ್ನು ನೆರವೇರಿಸಲಾಗಿದೆ. ಬಿಗ್​ ಬಾಸ್ ಮನೆಯೊಳಗೆ ಡ್ರೋನ್​ ತರಿಸಬೇಕು ಎಂದು ಪ್ರತಾಪ್​ ಕೇಳಿಕೊಂಡಿದ್ದರು. ಅದು ತಮ್ಮದೇ ಕಂಪನಿಯ ಡ್ರೋನ್​. ಅವರ ಕೋರಿಕೆಯಂತೆ ದೊಡ್ಮನೆಯೊಳಗೆ ಡ್ರೋನ್​ ತರಿಸಲಾಗಿದೆ. ಅದನ್ನು ನೋಡಿ ಪ್ರತಾಪ್​ ತುಂಬಾ ಖುಷಿಪಟ್ಟಿದ್ದಾರೆ. ತಮ್ಮ ಕಂಪನಿಯ ಈ ಡ್ರೋನ್​ (Drone) ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ. ಅವರ ಬಗ್ಗೆ ಇನ್ನುಳಿದ ಸದಸ್ಯರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

‘ಇದು ನನಗೆ ಸ್ಪೈಡರ್​ ರೀತಿ ಕಾಣುತ್ತಿದೆ’ ಎಂದು ಸಂಗೀತಾ ಶೃಂಗೇರಿ ಹೇಳಿದರು.‘ಹೊಲಕ್ಕೆ ಔಷಧಿ ಸಿಂಪಡಿಲು ಈ ಡ್ರೋನ್​ ಬಳಸಬಹುದು’ ಎಂದು ಹೇಳಿದ ಡ್ರೋನ್​ ಪ್ರತಾಪ್​ ಅವರು ‘ಇದು ನಮ್ಮಲ್ಲಿ ಇರುವ ಚಿಕ್ಕ ಡ್ರೋನ್​. ಇನ್ನೂ ದೊಡ್ಡದು ಇವೆ’ ಎಂದು ಮಾಹಿತಿ ನೀಡಿದರು. ‘ಇದರ ಮೂಲಕ ಅಂಗಾಂಗ ಕೂಡ ಕಳಿಸಬಹುದು’ ಎಂದು ಪ್ರತಾಪ್​ ಹೇಳಿದ್ದು ಕೇಳಿ ಎಲ್ಲರಿಗೂ ಅಚ್ಚರಿ ಆಯಿತು.

ಇದನ್ನೂ ಓದಿ: ‘ಡ್ರೋನ್​ ಪ್ರತಾಪ್​ ಒಳ್ಳೆಯ ಹುಡುಗ’: ಕೊನೇ ಕ್ಷಣದಲ್ಲಿ ಒಪ್ಪಿಕೊಂಡ ವಿನಯ್​ ಗೌಡ

‘ಸಣ್ಣ ಇಳುವರಿ ಇರುವ ರೈತರು ಈ ಡ್ರೋನ್​ ಬಳಸಬಹುದಾ’ ಎಂದು ತುಕಾಲಿ ಸಂತೋಷ್​ ಪ್ರಶ್ನಿಸಿದರು. ‘ಹೌದು.. ನೀವು ಇಟ್ಟುಕೊಂಡು, ನಿಮ್ಮ ಕೆಲಸ ಮುಗಿದ ಬಳಿಕ ಬೇರೆಯವರಿಗೆ ಬಾಡಿಗೆ ನೀಡಬಹುದು’ ಎಂದು ಪ್ರತಾಪ್​ ಉತ್ತರಿಸಿದರು. ‘ಇದು ರೈತರಿಗಾಗಿ ಮಾಡಿರುವ ಡ್ರೋನ್​. ಇದನ್ನು ತೋರಿಸಲು ಬಿಗ್​ ಬಾಸ್​ ಈ ಅವಕಾಶ ಕೊಟ್ಟಿದ್ದಕ್ಕೆ ಋಣಿಯಾಗಿ ಇರುತ್ತೇನೆ’ ಎಂದು ಪ್ರತಾಪ್​ ಖುಷಿ ಹಂಚಿಕೊಂಡರು.

ಇದನ್ನೂ ಓದಿ: ‘ಡ್ರೋನ್​ ಪ್ರತಾಪ್​ ಗೆದ್ದರೂ ಗೆಲ್ಲಬಹುದು’ ಎಂದ ವಿನಯ್​ ಗೌಡ; ಈ ಮಾತಿಗೆ ಕಾರಣ ಏನು?

ಡ್ರೋನ್​ ವಿಚಾರವನ್ನೇ ಇಟ್ಟುಕೊಂಡು ಆರಂಭದಲ್ಲಿ ಪ್ರತಾಪ್​ ಅವರನ್ನು ಎಲ್ಲರೂ ಗೇಲಿ ಮಾಡಿದ್ದರು. ಚುಚ್ಚುಮಾತುಗಳನ್ನು ಆಡಿದ್ದರು. ಆದರೆ ಬಿಗ್​ ಬಾಸ್​ ಶೋ ಮುಗಿಯುವಾಗ ಅದೇ ಡ್ರೋನ್​ ವಿಚಾರದಲ್ಲಿ ಅವರಿಗೆ ಎಲ್ಲರೂ ಭೇಷ್​ ಎಂದಿದ್ದಾರೆ. ಮೆಚ್ಚುಗೆಯ ಮಾತು ತಿಳಿಸಿದ್ದಾರೆ. ‘ನೀನು ಸಾಧನೆ ಮಾಡಿದ್ದೀಯ. ಬಾರಿ ಖುಷಿ ಆಯಿತು. ಇದು ನಿನ್ನ ದೊಡ್ಡ ಆಸೆ. ಇದು ನಿನ್ನ ಬದುಕಿನ ಕ್ಯಾಪ್ಟನ್​. ರೈತರಿಗೆ ನೀನು ಇದನ್ನು ತೋರಿಸಿದ್ದೀಯ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ’ ಎಂದು ತುಕಾಲಿ ಸಂತೋಷ್​ ಅವರು ಹೇಳಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಇರುವವರ ಪ್ರೋತ್ಸಾಹದ ಮಾತುಗಳಿಂದ ಪ್ರತಾಪ್​ಗೆ ಸಂತೋಷ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ