‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಿಲ್ಲಿಸಲು ಬೇಡಿಕೆ ಇಟ್ಟ ವೀಕ್ಷಕರು; ಕಾರಣ?

| Updated By: ರಾಜೇಶ್ ದುಗ್ಗುಮನೆ

Updated on: Feb 28, 2025 | 7:40 AM

ಪುಟ್ಟಕ್ಕನ ಮಕ್ಕಳು ಧಾರಾವಾಹಿ 906 ಸಂಚಿಕೆಗಳನ್ನು ಪೂರ್ಣಗೊಳಿಸಿದ್ದು, ಇತ್ತೀಚೆಗೆ ಅದರ ಟಿಆರ್‌ಪಿ ಕುಸಿದಿದೆ. ಕಥೆಯ ಅನಾವಶ್ಯಕ ತಿರುವುಗಳು ಮತ್ತು ಸಮಯ ಬದಲಾವಣೆಯಿಂದ ಪ್ರೇಕ್ಷಕರು ಬೇಸರಗೊಂಡಿದ್ದಾರೆ. ಸ್ನೇಹಾ ಪಾತ್ರದ ಅಂತ್ಯವೂ ಧಾರಾವಾಹಿಯ ಜನಪ್ರಿಯತೆಯ ಮೇಲೆ ಪರಿಣಾಮ ಬೀರಿದೆ. ಪ್ರೇಕ್ಷಕರು ಧಾರಾವಾಹಿಯನ್ನು ಕೊನೆಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಿಲ್ಲಿಸಲು ಬೇಡಿಕೆ ಇಟ್ಟ ವೀಕ್ಷಕರು; ಕಾರಣ?
ಪುಟ್ಟಕ್ಕನ ಮಕ್ಕಳು
Follow us on

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ 906 ಎಪಿಸೋಡ್​​ಗಳು ಈಗಾಗಲೇ ಪ್ರಸಾರ ಕಂಡಿವೆ. ಧಾರಾವಾಹಿ ಆರಂಭದಲ್ಲಿ ಒಳ್ಳೆಯ ಟಿಆರ್​ಪಿ ಪಡೆದುಕೊಳ್ಳುತ್ತಾ ಇತ್ತು. ಆದರೆ, ಇತ್ತೀಚೆಗೆ ಏಕೋ ಧಾರಾವಾಹಿ ಡಲ್ ಆಗಿದೆ. ಧಾರಾವಾಹಿಯ ಸಮಯ ಬದಲಾವಣೆ, ಕಥೆಯ ಅನಾವಶ್ಯಕ ತಿರುವುಗಳು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಕಾರಣಕ್ಕೆ ಧಾರಾವಾಹಿಯನ್ನು ಕೊನೆಗೊಳಿಸುವಂತೆ ಪ್ರೇಕ್ಷಕರು ಬೇಡಿಕೆ ಇಡುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್​ಗಳು ಬರುತ್ತಿವೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಹಲವು ತಿರುವುಗಳನ್ನು ಪಡೆದಕೊಂಡು ಬಂತು. ಕಳೆದ ವರ್ಷ ಈ ಧಾರಾವಾಹಿಯ ಮುಖ್ಯ ಪಾತ್ರಗಳಲ್ಲಿ ಒಂದಾದ ಸ್ನೇಹಾನ ಪಾತ್ರವನ್ನು ಕೊನೆ ಗೊಳಿಸಲಾಯಿತು. ಕಥಾ ನಾಯಕಿ ಸಂಜನಾ ಬುರ್ಲಿ ಅವರು ಧಾರಾವಾಹಿಯಿಂದ ಹೊರ ನಡೆದಿದ್ದು ಈ ಸೀರಿಯಲ್ ಕೊನೆ ಆಗಲು ಕಾರಣ ಎನ್ನಲಾಯಿತು. ಈಗ ಧಾರಾವಾಹಿ ಕೊನೆ ಮಾಡುವ ಬೇಡಿಕೆ ಬಂದಿದೆ.

ಇದನ್ನೂ ಓದಿ
ಒಂದೇ ವಾರಕ್ಕೆ ಬೇರೆ ಭಾಷೆಗೆ ರಿಮೇಕ್ ಆಯ್ತು ಸೂಪರ್ ಹಿಟ್ ಧಾರಾವಾಹಿ
ಮೇಕಿಂಗ್ ಮೂಲಕ ಗಮನ ಸೆಳೆದ ನಾ ನಿನ್ನ ಬಿಡಲಾರೆ ಧಾರಾವಾಹಿ; ಸಿನಿಮಾ ಗುಣಮಟ್ಟ
ಸುದೀಪ್ ‘ಬಿಗ್ ಬಾಸ್’ ಕಂಬ್ಯಾಕ್​ಗೆ ಸಿಕ್ತು ಭರ್ಜರಿ ಟಿಆರ್​ಪಿ
ಅಪಘಾತದಲ್ಲಿ ಸ್ನೇಹಾ ಮರಣ; ಕೊನೆ ಆಯಿತು ಸಂಜನಾ ಬುರ್ಲಿ ಪಾತ್ರ


‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯನ್ನು ಕೊನೆ ಮಾಡಿ ಎಂದು ವೀಕ್ಷಕರು ಬೇಡಿಕೆ ಇಡಲು ಒಂದು ಕಾರಣವೂ ಇದೆ. ಸ್ನೇಹಾ ಸಾವಿನ ಬಳಿಕ ಧಾರಾವಾಹಿ ಹಳಿ ತಪ್ಪಿದೆ. ಏನೇನೋ ದೃಶ್ಯಗಳನ್ನು ತಂದು ತುರಕಲಾಗುತ್ತಿದೆ. ಕಥೆಯನ್ನು ಚ್ಯೂಯಿಂಗ್ ಗಮ್ ರೀತಿ ಎಳೆಯಲಾಗುತ್ತಿದೆ ಎನ್ನುವ ಭಾವನೆ ಪ್ರೇಕ್ಷಕರಿಗೆ ಮೂಡಿದೆ. ಹೀಗಾಗಿ, ಧಾರಾವಾಹಿ ಬಗ್ಗೆ ವೀಕ್ಷಕರಿಗೆ ಬೇಸರ ಮೂಡಿದೆ.

ಇದನ್ನೂ ಓದಿ: ಮೇಕಿಂಗ್ ಮೂಲಕ ಗಮನ ಸೆಳೆದ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ; ಎಲ್ಲವೂ ಸಿನಿಮಾ ಗುಣಮಟ್ಟ

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಕಥಾ ನಾಯಕಿ ಸ್ನೇಹಾ ಅಪಘಾತದಲ್ಲಿ ಮೃತಪಟ್ಟಂತೆ ತೋರಿಸಲಾಗಿದೆ. ಡಿಸಿ ಆದ ಬಳಿಕ ಆಕೆಯನ್ನು ಸಂಚು ಮಾಡಿ ಕೊಲ್ಲಲಾಗಿದೆ. ಸ್ನೇಹಾ ಡಿಸಿ ಆದಳು ಎಂಬ ಖುಷಿ ಎಲ್ಲರಲ್ಲೂ ಇತ್ತು. ಆದರೆ, ಅವಳ ಪಾತ್ರ ಕೊನೆ ಆದ ನಂತರ ಧಾರಾವಾಹಿ ಮೇಲೆ ಇರುವ ಆಸಕ್ತಿ ಎಲ್ಲರಲ್ಲೂ ಹೋಗಿ ಬಿಟ್ಟಿದೆ. ಹಲವು ವರ್ಷಗಳ ಕಾಲ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್​ಪಿಯಲ್ಲಿ ಒಂದನೇ ಸ್ಥಾನದಲ್ಲಿ ಇತ್ತು. ಮುಂದಿನ ದಿನಗಳಲ್ಲಿ ಈ ಬಗ್ಗೆ ವಾಹಿನಿಯವರು ಆಲೋಚಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. 1000ನೇ ಕಂತಿಗೆ ಧಾರಾವಾಹಿ ಕೊನೆಗೊಂಡರೂ ಅಚ್ಚರಿ ಏನೂ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:01 pm, Thu, 27 February 25