
‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರಿಯಾಲಿಟಿ ಶೋನಲ್ಲಿ ರಜತ್ ಹಾಗೂ ಧ್ರುವಂತ್ ನಡುವೆ ಕಿರಿಕ್ ಆಗಿದೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಮಾತಿನ ಭರದಲ್ಲಿ ರಜತ್ (Rajath Kishan) ಅವರು ನಾಲಿಗೆ ಹರಿಬಿಟ್ಟಿದ್ದಾರೆ. ಜಗಳ ಆಡುವಾಗ ಬಾಯಿ ಬಂದಂತೆ ಮಾತನಾಡಿದ್ದಾರೆ. ಸಡೆ, ವೇಸ್ಟ್ ನನ್ ಮಗ, ಗುಗ್ಗು ಎಂಬಿತ್ಯಾದಿ ಪದಗಳನ್ನು ಅವರು ಬಳಸಿದ್ದಾರೆ. ಅವರ ಮಾತಿನಿಂದ ಹಲವರಿಗೆ ಕಿರಿಕಿರಿ ಆಗಿದೆ. ಅದನ್ನು ಅಶ್ವಿನಿ ಗೌಡ, ಧ್ರುವಂತ್ (Dhruvanth) ಮುಂತಾದವರು ಖಡಕ್ ಆಗಿ ವಿರೋಧಿಸಿದ್ದಾರೆ.
ರಜತ್ ಅವರು ರಫ್ ಆ್ಯಂಡ್ ಟಫ್ ವ್ಯಕ್ತಿ. ಕಳೆದ ಸೀಸನ್ನಲ್ಲಿ ಕೂಡ ಅವರು ಅದೇ ರೀತಿ ನಡೆದುಕೊಂಡಿದ್ದರು. ಈಗ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಬಂದಿರುವ ಅವರು ಇಡೀ ಮನೆಯ ವಾತಾವರಣವನ್ನು ಬದಲಾಯಿಸಿದ್ದಾರೆ. ಜಗಳದ ವೇಳೆ ಕೆಟ್ಟ ಪದಗಳನ್ನು ಬಳಸಿದ್ದರಿಂದ ಅನೇಕರಿಗೆ ಕೋಪ ಬಂದಿದೆ. ಧ್ರುವಂತ್, ಅಶ್ವಿನಿ ಗೌಡ ಜೊತೆ ರಜತ್ ಅವರು ಕಿರಿಕ್ ಮಾಡಿಕೊಂಡಿದ್ದಾರೆ.
ಅಶ್ವಿನಿ ಗೌಡ ಮತ್ತು ರಜತ್ ನಡುವೆ ಕೂಡ ದೊಡ್ಡ ಜಗಳ ಆಗಿದೆ. ಅಶ್ವಿನಿ ಗೌಡ ಅವರಿಗೆ ರಜತ್ ಏಕವಚನದಲ್ಲಿ ಮಾತನಾಡಿದ್ದಾರೆ. ರಜತ್ ಆಡಿದ ಮಾತುಗಳು ತುಂಬಾ ಕೀಳುಮಟ್ಟದಲ್ಲಿ ಇವೆ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ. ‘ನಿಮ್ಮಷ್ಟು ಕೆಟ್ಟ ಪದಗಳನ್ನು ಈ ಮನೆಯಲ್ಲಿ ಯಾರೂ ಬಳಸಿಲ್ಲ’ ಎಂದು ಅಶ್ವಿನಿ ಗೌಡ ಅವರು ಟೀಕೆ ಮಾಡಿದ್ದಾರೆ.
‘ನೀನು ಕಚಡ’ ಎಂದು ರಜತ್ ಅವರಿಗೆ ಅಶ್ವಿನಿ ಗೌಡ ಬೈಯ್ದಿದ್ದಾರೆ. ‘ನೀನು ಕಣೇ ಕಚಡ’ ಎಂದು ರಜತ್ ಅವರು ತಿರುಗೇಟು ನೀಡಿದ್ದಾರೆ. ಈ ಎಲ್ಲ ಜಗಳದಿಂದಾಗಿ ಬಿಗ್ ಬಾಸ್ ಮನೆ ರಣರಂಗ ಆಗಿದೆ. ಈ ರೀತಿಯ ಕೆಟ್ಟ ಪದಗಳನ್ನು ಬಳಸಿದ್ದಕ್ಕಾಗಿ ವಾರಾಂತ್ಯದ ಸಂಚಿಕೆಯಲ್ಲಿ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳುತ್ತಾರೆ.
ಇದನ್ನೂ ಓದಿ: ‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’: ಸುದೀಪ್ ಎದುರೇ ಧ್ರುವಂತ್-ರಜತ್ ಜಗಳ
‘ಇಡೀ ಸೀಸನ್ ಹಾಳು ಮಾಡುತ್ತಿದ್ದಾರೆ. ಅಸಭ್ಯವಾಗಿ ಮಾತಾಡುತ್ತಾರೆ. ಶೋ ಘನತೆಯನ್ನು ತಗ್ಗಿಸುತ್ತಿದ್ದಾರೆ. ರೌಡಿಸಂ ಮಾಡುತ್ತಿದ್ದಾರೆ. ಎಲ್ಲರನ್ನೂ ಹೆದರಿಸುವ ರೀತಿ ನಡೆದುಕೊಳ್ಳುತ್ತಿದ್ದಾರೆ’ ಎಂದು ರಜತ್ ವಿರುದ್ಧ ಧ್ರುವಂತ್ ಅವರು ಆರೋಪಗಳ ಮಳೆ ಸುರಿಸಿದ್ದಾರೆ. ‘ಸೀಸನ್ 11ರಲ್ಲಿ ನೀವು ಮಾಸ್ ಇರಬಹುದು. ಆದರೆ ಇಲ್ಲಿ ಯಾರೂ ಡಮ್ಮಿ ಅಲ್ಲ’ ಎಂದು ರಜತ್ಗೆ ಅಶ್ವಿನಿ ಗೌಡ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.