‘ಬಾಯಲ್ಲಿ ಮತ್ತೆ ಕೆಟ್ಟ ಪದ ಬಂತಲ್ಲ, ನೀವು ಬದಲಾಗಲ್ಲ’; ಅಶ್ವಿನಿಗೆ ನೇರವಾಗಿ ಹೇಳಿದ ಗಿಲ್ಲಿ
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತೆ ಕೆಟ್ಟ ಮಾತುಗಳ ಬಳಕೆ ಮಾಡಿದ್ದಾರೆ. ಬದಲಾಗುತ್ತೇನೆಂದಿದ್ದ ಅಶ್ವಿನಿ, ರಜತ್ ನಾಮಿನೇಷನ್‌ನಿಂದ ಕೆರಳಿದರು. ಇದರಿಂದ 'ಕಚಡ' ಪದ ಸೇರಿ ಏಕವಚನ ಮಾತುಗಳು ಅವರ ಬಾಯಿಂದ ಬಂದವು. ಇದನ್ನು ಗಮನಿಸಿದ ಗಿಲ್ಲಿ, ಅಶ್ವಿನಿಯವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ಬದಲಾವಣೆ ಕೇವಲ ಮಾತಿಗೆ ಮಾತ್ರ ಸೀಮಿತವಾಯಿತೇ ಎಂದು ಪ್ರಶ್ನಿಸಿದರು. ಅಶ್ವಿನಿಯ ಹಳೆ ಅವತಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ಮತ್ತೆ ವಿವಾದ ಸೃಷ್ಟಿಯಾಗಿದೆ.

ಬಿಗ್ ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಅವರ 2.O ವರ್ಷನ್ ಆರಂಭ ಆಗಿತ್ತು. ತಮ್ಮ ಕೆಟ್ಟ ಮಾತುಗಳಿಂದ ಬೇರೆಯವರಿಗೆ ಮೈಲೇಜ್ ಸಿಗುತ್ತಿದೆ, ಬೇರೆಯವರು ಹೀರೋ ಆಗುತ್ತಿದ್ದಾರೆ ಅನ್ನೋದು ಅಶ್ವಿನಿ ಗೌಡ ಅವರಿಗೆ ಸ್ಪಷ್ಟವಾಗಿ ಅರಿವಾಗಿತ್ತು. ಹೀಗಾಗಿಯೇ ಅವರು ಕೆಲ ವಾರಗಳಿಂದ ಸಾಕಷ್ಟು ಬದಲಾಗಿದ್ದರು. ಅವರು ಸೈಲೆಂಟ್ ಆಗಿಯೇ ಇದ್ದರು. ಆದರೆ, ಈ ವಾರ ಅವರು ಮತ್ತೆ ಹಳೆ ಅವತಾರಕ್ಕೆ ಮರಳಿದ್ದಾರೆ. ರಜತ್ ಅವರ ಕಾರಣದಿಂದ ಅಶ್ವಿನಿ ಗೌಡ ಟ್ರಿಗರ್ ಆಗಿದ್ದಾರೆ.
ಕಳೆದ ಸೀಸನ್ ಸ್ಪರ್ಧಿ ರಜತ್ ಅವರು ಮತ್ತೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅರ್ಧ ಸೀಸನ್ ಮುಗಿದ ಬಳಿಕ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅವರು ಅಶ್ವಿನಿ ಗೌಡ ಅವರನ್ನು ನಾಮಿನೇಟ್ ಮಾಡಿದರು. ಈ ನಾಮಿನೇಷನ್‌ನಿಂದ ಅಶ್ವಿನಿ ಗೌಡ ಅವರು ಸಾಕಷ್ಟು ಸಿಟ್ಟಾದರು. ಅವರು ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಅವರು ರಜತ್ ಮೇಲೆ ಕೂಗಾಡಿದರು.
ರಜತ್ ಅವರು ಕಳೆದ ಸೀಸನ್ನಲ್ಲಿ ಕೆಟ್ಟ ಪದಗಳ ಬಳಕೆ ಮಾಡಿದ್ದರು. ಈ ಸೀಸನ್ ಅಲ್ಲೂ ಅದು ಮುಂದುವರಿದಿದೆ. ಅವರು ಕೆಟ್ಟ ಪದ ಬಳಕೆ ಮಾಡಿದ್ದಾರೆ. ಇದರಿಂದ ಅಶ್ವಿನಿಗೆ ಕೋಪ ನೆತ್ತಿಗೇರಿತ್ತು. ನಾಮಿನೇಟ್ ಮಾಡಿದ ಬಳಿಕ ಸ್ಪರ್ಧಿಗಳನ್ನು ನೀರಿಗೆ ತಳ್ಳಬೇಕು. ಈ ವೇಳೆ ಅಶ್ವಿನಿ ಅವರನ್ನು ರಜತ್ ಸ್ವಲ್ಪ ಗಟ್ಟಿಯಾಗಿ ತಳ್ಳಿದರು. ಇದರಿಂದ ಅಶ್ವಿನಿ ಬಾಯಲ್ಲಿ, ‘ಕಚಡ’ ಎಂಬ ಪದ ಬಂತು. ಏಕವಚನ ಶಬ್ದಗಳು ಕೂಡ ಅನಾಯಾಸವಾಗಿ ಬಂದವು.
ಇದನ್ನೂ ಓದಿ: ಕಾವ್ಯಾನ ಅಳಿಸೋ ಸಂಚಿಗೆ ಅಶ್ವಿನಿ ಜೊತೆ ಕೈ ಜೋಡಿಸಿದ ಗಿಲ್ಲಿ
ಆ ಬಳಿಕ ಗಿಲ್ಲಿ ಅವರು ಅಶ್ವಿನಿಯನ್ನು ನಾಮಿನೇಟ್ ಮಾಡುವಾಗ ಇದೇ ಕಾರಣ ತೆಗೆದುಕೊಂಡರು. ‘ಜಾನ್ವಿಯನ್ನು ತೆಗೆದುಕೊಂಡು ಅಶ್ವಿನಿ ಅವರು ಫೂಟೇಜ್ ತೆಗೆದುಕೊಳ್ಳುತ್ತಿದ್ದರು. ಅವರು ಹೋದಮೇಲೆ ಮಂಕಾಗಿದ್ದರು. ತಾವು ಬದಲಾಗುತ್ತೇನೆ ಎಂದೆಲ್ಲ ಹೇಳಿಕೊಂಡರು. ಆದರೆ, ಅವರು ಮರಳಿ ಅಲ್ಲಿಗೆ ಬಂದಿರಿ. ಯಾವನೋ ಎಂದಿರಿ. ಮತ್ತೆ ಅಲ್ಲಿಗೆ ಬಂದಿರಿ’ ಎಂದು ಗಿಲ್ಲಿ ಹೇಳಿದ್ದಾರೆ. ಇದಕ್ಕೆ ಕೌಂಟರ್ ಕೊಡೋದು ಅಶ್ವಿನಿಗೆ ಕಷ್ಟ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




