ಗಿಲ್ಲಿ ಒಬ್ಬನೇ ನನ್ನ ರಿಯಲ್ ಫ್ರೆಂಡ್; ಕಾರಣ ಹೇಳಿದ ರಿಷಾ ಗೌಡ
ಸಾಮಾನ್ಯವಾಗಿ ಬಿಗ್ ಬಾಸ್ ಆಟ ಎಂದಾಗ ಹಿಂದಿನಿಂದ ಮಾತನಾಡುವವರೇ ಹೆಚ್ಚಿರುತ್ತಾರೆ. ಅಲ್ಲಿ ಯಾರೊಬ್ಬರೂ ಎದುರಿಗೆ ಬಂದು ಮುಖಕ್ಕೆ ಹೊಡೆದಂತೆ ಹೇಳೋದಿಲ್ಲ. ಈ ವಿಷಯ ರಿಷಾಗೂ ಅನುಭವಕ್ಕೆ ಬಂದಿದೆ. ಹೊರಗೆ ಬಂದ ಬಳಿಕ ಯಾರ ಮುಖ ಹೇಗೆ ಅನ್ನೋದು ಗೊತ್ತಾಗಿದೆ. ಗಿಲ್ಲಿ ಮಾತ್ರ ಅವರು ಹಿಂದಿನಿಂದ ಮಾತನಾಡಿಲ್ಲ ಎಂಬ ಅಭಿಪ್ರಾಯ ಅವರದ್ದು.

ರಿಷಾ ಗೌಡ (Risha Gowda) ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಗಿಲ್ಲಿ ಜೊತೆ ಸಾಕಷ್ಟು ಕಿತ್ತಾಡಿಕೊಂಡಿದ್ದರು. ವೈಲ್ಡ್ ಕಾರ್ಡ್ ಅಲ್ಲಿ ಬಂದಾಗ ಗಿಲ್ಲಿ ಹಾಗೂ ರಿಷಾ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ, ದಿನ ಕಳೆದಂತೆ ಅದು ಹಾಳಾಯಿತು. ಹೊರ ಬಂದ ಬಳಿಕ ರಿಷಾ ಅವರು ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ. ಅವನು ನನ್ನ ನಿಜವಾದ ಗೆಳೆಯ ಎಂದು ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಅವರಿಗೆ ಈ ವಿಷಯ ಅರಿವಾಗಿದೆ.
ಸಾಮಾನ್ಯವಾಗಿ ಬಿಗ್ ಬಾಸ್ ಆಟ ಎಂದಾಗ ಹಿಂದಿನಿಂದ ಮಾತನಾಡುವವರೇ ಹೆಚ್ಚಿರುತ್ತಾರೆ. ಅಲ್ಲಿ ಯಾರೊಬ್ಬರೂ ಎದುರಿಗೆ ಬಂದು ಮುಖಕ್ಕೆ ಹೊಡೆದಂತೆ ಹೇಳೋದಿಲ್ಲ. ಈ ವಿಷಯ ರಿಷಾಗೂ ಅನುಭವಕ್ಕೆ ಬಂದಿದೆ. ಹೊರಗೆ ಬಂದ ಬಳಿಕ ಯಾರ ಮುಖ ಹೇಗೆ ಅನ್ನೋದು ಗೊತ್ತಾಗಿದೆ. ಗಿಲ್ಲಿ ಮಾತ್ರ ಅವರು ಹಿಂದಿನಿಂದ ಮಾತನಾಡಿಲ್ಲ ಎಂಬ ಅಭಿಪ್ರಾಯ ಅವರದ್ದು.
ಬಿಗ್ ಬಾಸ್ ಇಂದ ಹೊರ ಬಂದ ಬಳಿಕ ರಿಷಾ ಅವರು ಎಪಿಸೋಡ್ಗಳನ್ನಿ ನೋಡಿದಂತೆ ಕಾಣುತ್ತದೆ. ಅವರು ಬಿಗ್ ಬಾಸ್ ಎಪಿಸೋಡ್ ನೋಡಿ ಸಂದರ್ಶನದಲ್ಲಿ ಹೇಳಿದ್ದಾರೆ. ‘ನಾನು ಓಪನ್ ಆಗಿ ಹೇಳುತ್ತೇನೆ. ಗಿಲ್ಲ ನನ್ನ ನಿಜವಾದ ಗೆಳೆಯ. ಅವರು ವಿಷಯವನ್ನು ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದ. ಆಗ ಅಲ್ಲಿದ್ದಾಗ ನನಗೆ ಅದು ಇಷ್ಟ ಆಗುತ್ತಾ ಇರಲಿಲ್ಲ. ಆದರೆ, ಹೊರಗೆ ಬಂದಮೇಲೆ ನೋಡಿದೆ. ಅವನು ಮಾತ್ರ ನನ್ನ ಹಿಂದೆ ಮಾತನಾಡಿಲ್ಲ. ಉಳಿದವರೆಲ್ಲರೂ ಮಾತನಾಡಿದ್ದಾರೆ’ ಎಂದರು ರಿಷಾ.
ಇದನ್ನೂ ಓದಿ: ಈ ಬಾರಿ ಬಿಗ್ ಬಾಸ್ ಗೆಲ್ಲೋದು ಯಾರು ಎಂದು ಹೇಳಿದ ರಿಷಾ
ರಿಷಾ ಅವರಿಗೆ ಇನ್ನಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂಬ ಆಸೆ ಇತ್ತು. ಆದರೆ, ಇದಕ್ಕೆ ಅವಕಾಶ ಸಿಗಲೇ ಇಲ್ಲ. ಅವರಿಗೆ ಕಡಿಮೆ ವೋಟ್ ಬಿದ್ದ ಕಾರಣ ಕೆಲ ವಾರಗಳ ಹಿಂದೆ ಅವರು ಬಿಗ್ ಬಾಸ್ ಮನೆಯಿಂದ ಹೊರ ಬರಬೇಕಾಯಿತು. ಅವರು ಈ ಮೊದಲು ಗಿಲ್ಲಿ ಮೇಲೆ ಹಲ್ಲೆ ಮಾಡಿ ಸುದ್ದಿ ಆಗಿದ್ದರು. ಆದರೂ ಅವರನ್ನು ಬಿಗ್ ಬಾಸ್ ಅಲ್ಲಿ ಉಳಿಸಿಕೊಳ್ಳಲಾಯಿತು. ರಿಷಾ ಬಟ್ಟೆಯನ್ನು ಗಿಲ್ಲಿ ಮುಟ್ಟಿದ್ದಕ್ಕೆ ಗಿಲ್ಲಿ ಮೇಲೆ ಕೇಸ್ ಆಗಿದೆ. ಈ ವಿಷಯ ತಿಳಿದು ರಿಷಾ ಬೇಸರಗೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



