ಫ್ರೀ ಪ್ರಾಡಕ್ಟ್, ವೇಸ್ಟ್ ಬಾಡಿ: ಕಾವ್ಯಾಗೆ ಹೀನಾಯವಾಗಿ ನಿಂದಿಸಿದ ಗಿಲ್ಲಿ ನಟ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಆಡಿದ ಚುಚ್ಚು ಮಾತುಗಳಿಂದ ಕಾವ್ಯಾ ಅವರಿಗೆ ನೋವಾಗಿದೆ. ಮಾತುಕಥೆ ಬಳಿಕ ಕಾವ್ಯ ಅವರು ಕಣ್ಣೀರು ಹಾಕಿದ್ದಾರೆ. ಸ್ಪಂದನಾ ಬಳಿ ಎಲ್ಲವನ್ನೂ ಹೇಳಿಕೊಂಡು ಅತ್ತಿದ್ದಾರೆ. ಅಷ್ಟಕ್ಕೂ ಗಿಲ್ಲಿ ನಟ ಅವರು ಈ ರೀತಿ ಮಾಡಿರುವುದು ಬಿಗ್ ಬಾಸ್ ನೀಡಿದ ಸೀಕ್ರೆಟ್ ಟಾಸ್ಕ್ ಸಲುವಾಗಿ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋ ಆರಂಭ ಆದಾಗಿನಿಂದ ಗಿಲ್ಲಿ ನಟ ಮತ್ತು ಕಾವ್ಯ ಶೈವ (Kavya Shaiva) ಅವರು ಆಪ್ತವಾಗಿದ್ದಾರೆ. ಮೊದಲು ಅವರು ಜಂಟಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದರು. ಒಂಟಿ-ಜಂಟಿ ಥೀಮ್ ಮುಗಿದರೂ ಕೂಡ ಕಾವ್ಯಾ ಮತ್ತು ಗಿಲ್ಲಿ ನಟ (Gilli Nata) ಅವರ ಕ್ಲೋಸ್ ಆಗಿಯೇ ಇದ್ದರು. ಆದರೆ ಈಗ ಬಿಗ್ ಬಾಸ್ ಆಟದಲ್ಲಿ ಒಂದು ಟ್ವಿಸ್ಟ್ ನೀಡಲಾಗಿದೆ. ಕ್ಯಾವ್ಯ ಅವರನ್ನು ಅಳಿಸಬೇಕು ಎಂದು ಗಿಲ್ಲಿಗೆ ಬಿಗ್ ಬಾಸ್ ಒಂದು ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ. ಹಾಗಾಗಿ ಗಿಲ್ಲಿ ನಟ ಅವರು ಚುಚ್ಚು ಮಾತುಗಳನ್ನು ಆಡುವ ಮೂಲಕ ಕಾವ್ಯಾ ಕಣ್ಣೀರು ಹಾಕುವಂತೆ ಮಾಡಿದ್ದಾರೆ.
ಈ ಮೊದಲು ಕಾವ್ಯ ಅವರನ್ನು ನೋಡಿದಾಗಲೆಲ್ಲ ಗಿಲ್ಲಿ ನಟ ಅವರು ನಗುನಗುತ್ತಾ ಮಾತನಾಡುತ್ತಿದ್ದರು. ವ್ಯಂಗ್ಯ ಮಾಡುತ್ತಿರಲಿಲ್ಲ. ಆದರೆ ಡಿಸೆಂಬರ್ 10ರ ಸಂಚಿಕೆಯಲ್ಲಿ ಅವರು ಕಾವ್ಯ ಬಗ್ಗೆ ಹೀನಾಯವಾಗಿ ಮಾತಾಡಿದರು. ಕಾವ್ಯ ಅವರನ್ನು ನೋಡಿದ ತಕ್ಷಣ ‘ಸ್ನೇಹ ಅಂತ ಒಳಗೊಳಗೆ ಸ್ಕೀಮ್ ಹಾಕ್ತಾರೋ’ ಎಂದು ಕಾವ್ಯಾ ಅವರನ್ನು ಗಿಲ್ಲಿ ರೇಗಿಸಲು ಆರಂಭಿಸಿದರು. ಅಲ್ಲಿಂದ ಮಾತು ಬೆಳೆಯಿತು.
‘ಜೊತೆಯಲ್ಲಿ ಇದ್ದವರನ್ನು ಹಾಳು ಭಾವಿಗೆ ತಳ್ಳೋದಲ್ಲ. ಬೆನ್ನಿಗೆ ಚೂರಿ ಹಾಕಿದ್ದೀರಿ. ನಾನು ಜಂಟಿಯಾಗಿ ಬರಬಾರದಿತ್ತು. ಸಿಂಗಲ್ ಆಗಿ ಇರುತ್ತೇನೆ ಎನ್ನಬೇಕಿತ್ತು. ಯಾಕಾದರೂ ಸಹವಾಸ ಮಾಡಿದೆನೋ ಅನಿಸುತ್ತಿದೆ. ನೋಡೋಕೆ ಕಿರಿಕಿರಿ ಆಗುತ್ತಿದೆ. ಆ ಮುಖ ನೋಡಲು ಇಷ್ಟ ಇಲ್ಲ ನನಗೆ. ಗೊತ್ತಿರುವವರೇ ಹೀಗೆಲ್ಲ ಮಾಡೋದು’ ಎಂದು ಗಿಲ್ಲಿ ಅವರು ಚುಚ್ಚಿ ಮಾತನಾಡಿದರು.
‘ಫ್ರೀ ಪ್ರಾಡಕ್ಟ್.. 50 ಸಲ ಕನ್ನಡಿ ನೋಡಿಕೊಳ್ಳುತ್ತಾಳೆ ಸುಂದರಿ ಥರ. ಯಾಕೆ ನನ್ನ ನಾಮಿನೇಟ್ ಮಾಡಿದೆ? ಇದನ್ನೇ ನೀನು ಕಲಿತಿರುವುದು. ಸ್ಪಂದನಾ ಲಕ್ಕಿ ಅಲ್ಲ. ನೀನೇ ನಿಜವಾಗಿಯೂ ಲಕ್ಕಿ. ಸ್ಪಂದನಾಗಿಂತ ಮುಂಚೆ ನೀನೇ ಹೋಗುತ್ತೀಯ. ನೀನು ಏನೂ ಮಾಡುತ್ತಿಲ್ಲ. ಹೋಗು.. ಫ್ರೀ ಪ್ರಾಡಕ್ಟ್ ನೀನು. ವೇಸ್ಟ್ ಬಾಡಿ.. ಮನೆಯಿಂದ ಹೊರಗೆ ಹೋಗು’ ಎಂದು ಗಿಲ್ಲಿ ನಟ ಅವರು ಹೀಯಾಳಿಸಿದರು.
ಇದನ್ನೂ ಓದಿ: ‘ಈ ಬಾರಿ ಗಿಲ್ಲಿಯೇ ಬಿಗ್ ಬಾಸ್ ವಿನ್ನರ್’: ಅಭಿಮಾನಿಗಳಿಂದ ಕಮೆಂಟ್ಸ್ ಸುರಿಮಳೆ
‘ಇಷ್ಟೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೀಯಾ ಅಂದರೆ ಮೊದಲೇ ಹೇಳಬೇಕಿತ್ತು. ಸೀರಿಯಸ್ ಆಗಿ ಮಾತನಾಡುತ್ತಾ ಇದ್ದೀಯಾ? ನನ್ನ ಮೇಲೆ ಆಣೆ ಮಾಡಿ ಹೇಳು’ ಎಂದು ಕಾವ್ಯ ಕೇಳಿದರು. ಆಗಲೂ ಗಿಲ್ಲಿ ಸೀರಿಯಸ್ ಆಗಿ ಮಾತನಾಡಿದರು. ಅದರಿಂದ ಕಾವ್ಯ ಅವರಿಗೆ ನೋವಾಯಿತು. ಸ್ಪಂದನಾ ಬಳಿ ತಮ್ಮ ನೋವನ್ನು ಹಂಚಿಕೊಂಡು ಕಾವ್ಯಾ ಕಣ್ಣೀರು ಹಾಕಿದರು. ಆದರೂ ಕೂಡ ಗಿಲ್ಲಿ ಅವರು ಸೀಕ್ರೆಟ್ ಟಾಸ್ಕ್ ಕಾರಣದಿಂದಲೇ ಈ ರೀತಿ ಮಾಡಿರಬಹುದು ಎಂಬ ಅನುಮಾನ ಕೂಡ ಕಾವ್ಯಾ ಅವರಿಗೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




