‘ಕೂಲಿ’ಯಲ್ಲಿ ಆಮಿರ್ ಖಾನ್, ‘ಜೈಲರ್ 2’ನಲ್ಲಿ ಶಾರುಖ್ ಖಾನ್?

ರಜನಿಕಾಂತ್ ಅಭಿನಯದ 'ಕೂಲಿ' ಚಿತ್ರದಲ್ಲಿ ಉಪೇಂದ್ರ, ನಾಗಾರ್ಜುನ ಮತ್ತು ಆಮಿರ್ ಖಾನ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 'ಜೈಲರ್ 2' ನಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸುದ್ದಿ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಶಿವರಾಜ್‌ಕುಮಾರ್ ಪಾತ್ರದ ಬಗ್ಗೆಯೂ ಕುತೂಹಲವಿದೆ. 2027ರ ವೇಳೆಗೆ ರಜನಿಕಾಂತ್ ನಟನೆಯಿಂದ ನಿವೃತ್ತಿ ಘೋಷಿಸುವ ಸಾಧ್ಯತೆಯೂ ಇದೆ.

‘ಕೂಲಿ’ಯಲ್ಲಿ ಆಮಿರ್ ಖಾನ್, ‘ಜೈಲರ್ 2’ನಲ್ಲಿ ಶಾರುಖ್ ಖಾನ್?
ಶಾರುಖ್​-ರಜಿನಿ
Updated By: ರಾಜೇಶ್ ದುಗ್ಗುಮನೆ

Updated on: Dec 03, 2025 | 8:04 AM

‘ಕೂಲಿ’ ಸಿನಿಮಾದಲ್ಲಿ ರಜನಿಕಾಂತ್ (Rajinikanth) ಮಾತ್ರ ನಟಿಸಿರಲಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಚಿತ್ರದಲ್ಲಿ ಉಪೇಂದ್ರ ಇದ್ದರು. ತೆಲುಗಿನ ಅಕ್ಕಿನೇನಿ ನಾಗಾರ್ಜುನ ಇದ್ದರು. ಅವರು ವಿಲನ್ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿ ಬಾಲಿವುಡ್ ನಟ ಆಮಿರ್ ಖಾನ್ ಕೂಡ ಅತಿಥಿ ಪಾತ್ರ ಮಾಡಿದ್ದರು. ಅವರು ಕ್ಲೈಮ್ಯಾಕ್ಸ್​ನಲ್ಲಿ ಬರೋದನ್ನು ಕಾಣಬಹುದು. ಈಗ ‘ಜೈಲರ್ 2’ ಚಿತ್ರದಲ್ಲಿ ಶಾರುಖ್ ಖಾನ್ ಅವರು ಅತಿಥಿ ಪಾತ್ರ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿದೆ.

2023ರಲ್ಲಿ ರಿಲೀಸ್ ಆದ ‘ಜೈಲರ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ಫ್ಯಾನ್ಸ್ ಸಾಕಷ್ಟು ಮೆಚ್ಚಿಕೊಂಡರು. ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರ ನಿರ್ದೇಶನ ಮಾಡಿದ್ದರು. ಈ ಸಿನಿಮಾಗೆ ಈಗ ಎರಡನೇ ಪಾರ್ಟ್ ಬರುತ್ತಿದ್ದು, ಶಾರುಖ್ ಖಾನ್ ಅತಿಥಿ ಪಾತ್ರ ಮಾಡಲಿದ್ದಾರಂತೆ.

‘ಜೈಲರ್’ ಸಿನಿಮಾದಲ್ಲಿ ಸಾಕಷ್ಟು ಹೈಲೈಟ್ ಆಗಿದ್ದು ಅತಿಥಿ ಪಾತ್ರಗಳು. ಶಿವರಾಜ್​ಕುಮಾರ್ ಹಾಗೂ ಮೋಹನ್​ಲಾಲ್ ಅತಿಥಿ ಪಾತ್ರ ಗಮನ ಸೆಳೆದಿತ್ತು. ಈಗ ಎರಡನೇ ಪಾರ್ಟ್​​ನಲ್ಲೂ ಅದೇ ರೀತಿಯಲ್ಲಿ ಅತಿಥಿ ಪಾತ್ರಗಳು ಬಂದು ಗಮನ ಸೆಳೆಯುತ್ತವೆಯೇ ಎನ್ನುವ ಪ್ರಶ್ನೆ ಮೂಡಿದೆ.

ಕೆಲವು ವರದಿಗಳ ಪ್ರಕಾರ ಮುಂದಿನ ವರ್ಷದಲ್ಲಿ 2ರಿಂದ 3 ದಿನ ಸಿನಿಮಾ ಶೂಟಿಂಗ್​ನಲ್ಲಿ ಶಾರುಖ್ ಖಾನ್ ಭಾಗಿ ಆಗಲಿದ್ದಾರಂತೆ. ಈ ವಿಷಯ ಕೇಳಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ವಿಲನ್ ವಿನಾಯಗನ್ ಕೂಡ ಚಿತ್ರದಲ್ಲಿ ಇರಲಿದ್ದಾರಂತೆ.

ಇದನ್ನೂ ಓದಿ: ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳಲು ಮೇಘನಾ ರಾಜ್ ರೆಡಿ? ‘ಜೈಲರ್ 2’ನಲ್ಲಿ ಪ್ರಮುಖ ಪಾತ್ರ

ಇತ್ತೀಚಿನ ವರ್ಷಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಸ್ಟಾರ್ ಹಿರೋಗಳು ಅತಿಥಿ ಪಾತ್ರ ಮಾಡೋ ಟ್ರೆಂಡ್ ಜಾರಿಯಲ್ಲಿದೆ. ಈಗ ಶಾರುಖ್ ಖಾನ್ ಅವರು ದಕ್ಷಿಣದ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಚಿತ್ರವನ್ನುಕಣ್ತುಂಬಿಕೊಳ್ಳಲು ಫ್ಯಾನ್ಸ್ ಕೂಡ ಬಹುವಾಗಿ ಕಾದಿದ್ದಾರಂತೆ. ಶಿವರಾಜ್​ಕುಮಾರ್ ಅವರ ಪಾತ್ರ ಈ ಚಿತ್ರದಲ್ಲಿ ಯಾವ ರೀತಿ ಇರುತ್ತದೆ ಎಂಬುದು ಸದ್ಯದ ಕುತೂಹಲ.

ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಯಶಸ್ಸು ಕಂಡಿಲ್ಲ. ಈ ಚಿತ್ರ ಸಾಧಾರಣ ಎನಿಸಿಕೊಂಡಿತು. ಅವರು 2027ರ ವೇಳೆಗೆ ನಟನೆಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.