ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳಲು ಮೇಘನಾ ರಾಜ್ ರೆಡಿ? ‘ಜೈಲರ್ 2’ನಲ್ಲಿ ಪ್ರಮುಖ ಪಾತ್ರ
ಮೇಘನಾ ರಾಜ್ ಸುಮಾರು 13 ವರ್ಷಗಳ ನಂತರ ತಮಿಳು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ರಜನಿಕಾಂತ್ ನಟನೆಯ ‘ಜೈಲರ್ 2’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಪತಿ ಚಿರಂಜೀವಿ ಸರ್ಜಾ ನಿಧನದ ಬಳಿಕ ಸಿನಿಮಾ ಆಯ್ಕೆಯಲ್ಲಿ ಮೇಘನಾ ಚ್ಯೂಸಿ ಆಗಿದ್ದಾರೆ.

ನಟಿ ಮೇಘನಾ ರಾಜ್ (Meghana Raj) ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಪತಿ ಚಿರಂಜೀವಿ ಸರ್ಜಾ ನಿಧನದ ನಂತರ ಅವರ ಜೀವನದಲ್ಲಿ ಸಾಕಷ್ಟು ಏರಿಳಿತಗಳು ಉಂಟಾದವು. ಅದೆಲ್ಲವನ್ನೂ ಮೆಟ್ಟಿ ನಿಂತಿದ್ದಾರೆ. ಈಗ ಮಗ ರಾಯನ್ ಅವರ ಬದುಕನ್ನು ಮತ್ತೆ ಕಲರ್ಫುಲ್ ಮಾಡಿದ್ದಾನೆ. ಈಗ ಮೇಘನಾ ರಾಜ್ ಅವರು ತಮಿಳು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ರೆಡಿ ಆಗಿದ್ದಾರೆ. ಸುಮಾರು 13 ವರ್ಷಗಳ ಬಳಿಕ ಅವರು ತಮಿಳು ರಂಗದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗಿದೆ. ಅದು ಕೂಡ ರಜನಿಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ಮೂಲಕ.
ಮೇಘನಾ ರಾಜ್ ಅವರು ಕನ್ನಡದ ಜೊತೆಗೆ ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲೂ ನಟಿಸಿ ಗಮನ ಸೆಳೆದಿದ್ದಾರೆ. ಅವರು ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. 2023ರಲ್ಲಿ ರಿಲೀಸ್ ಆದ ‘ತತ್ಸಮ ತದ್ಭವ’ ಸಿನಿಮಾದಲ್ಲಿ ಮೇಘನಾ ನಟಿಸಿದ್ದರು. ಇದಾದ ಬಳಿಕ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಈಗ ಅವರು ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರಂತೆ.
2023ರಲ್ಲಿ ರಿಲೀಸ್ ಆದ ‘ಜೈಲರ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಸೀಕ್ವೆಲ್ ಆಗಿ ‘ಜೈಲರ್ 2’ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಈಗಾಗಲೇ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಈ ಸಿನಿಮಾದಲ್ಲಿ ನಟಿಸಲು ಮೇಘನಾಗೆ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ಪ್ರಮುಖ ಪಾತ್ರ ಆಫರ್ ಮಾಡಿದ್ದಾರಂತೆ.
ಮೇಘನಾಗೆ ತಮಿಳು ಚಿತ್ರರಂಗ ಹೊಸದೇನು ಅಲ್ಲ. ಈ ಮೊದಲು ‘ಕಾದಲ್ ಸೊನ್ನ ವಂದೇನ್’ ‘ಉಯರದಿರು 420’, ‘ನಂದ ನಂದಿತ’ ಹೆಸರಿನ ತಮಿಳು ಸಿನಿಮಾದಲ್ಲಿ ನಟಿಸಿದ್ದರು. 2012ರಿಂದ ಈಚೆಗೆ ಅವರು ಯಾವುದೇ ತಮಿಳು ಸಿನಿಮಾದಲ್ಲಿ ನಟಿಸಿರಲಿಲ್ಲ. ಈಗ ತಮಿಳು ಸಿನಿಮಾ ಆಫರ್ ಅವರನ್ನು ಮತ್ತೆ ಹುಡುಕಿ ಬಂದಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ರಾಯನ್ ಫ್ರೆಂಡ್ಸ್ಗೆ ಬೈಸೆಪ್ಸ್ ತೋರಿಸ್ತಾನೆ’; ಎಲ್ಲಾ ಧ್ರುವಾ ಎಫೆಕ್ಟ್ ಎಂದ ಮೇಘನಾ ರಾಜ್
ಇತ್ತೀಚೆಗೆ ‘ಕೂಲಿ’ ಸಿನಿಮಾದಲ್ಲಿ ಕನ್ನಡದ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘ಜೈಲರ್ 2’ ಚಿತ್ರದಲ್ಲಿ ನಟಿಸೋಕೆ ಕನ್ನಡದ ಮತ್ತೊರ್ವ ನಟಿಗೆ ಅವಕಾಶ ಸಿಕ್ಕಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




