ಶಂಕರ್ ನಾಗ್ ಬಯೋಪಿಕ್ ಬಗ್ಗೆ ಮಾತನಾಡಿದ ಉಪೇಂದ್ರ; ಸಿಕ್ತು ದೊಡ್ಡ ಅಪ್ಡೇಟ್
ಶಂಕರ್ ನಾಗ್ ಜನ್ಮದಿನದಂದು ಉಪೇಂದ್ರ ಅವರು ಅವರ ಬಯೋಪಿಕ್ ಕುರಿತು ಮಾತನಾಡಿದ್ದಾರೆ. ಬಯೋಪಿಕ್ ನಿರ್ಮಾಣವು ಫಿಕ್ಷನ್ ಸಿನಿಮಾ ಮಾಡಿದಷ್ಟು ಸುಲಭವಲ್ಲ.ಅನಂತ್ ನಾಗ್ ಮತ್ತು ಗಾಯತ್ರಿ ಅವರ ಒಪ್ಪಿಗೆ, ಸ್ಕ್ರಿಪ್ಟ್ ತಯಾರಿ ಹಾಗೂ ವಾಣಿಜ್ಯಕ ಅಂಶಗಳ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ ಎಂದು ಅವರು ಹೇಳಿದ್ದಾರೆ.

ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ, ನಿರ್ಮಾಪಕ ಹಾಗೂ ನಿರ್ದೇಶಕ. ಅಪಘಾತದಲ್ಲಿ ಅವರು ನಿಧನ ಹೊಂದದೆ ಇದ್ದಿದ್ದರೆ ಕನ್ನಡ ಚಿತ್ರಂಗಕ್ಕೆ ಅದೆಷ್ಟು ಅದ್ಭುತ ಸಿನಿಮಾಗಳು ಸಿಗುತ್ತಿದ್ದವೋ. ಆದರೆ, ವಿಧಿ ಅದಕ್ಕೆ ಅವಕಾಶ ಕೊಡಲೇ ಇಲ್ಲ. ಸಣ್ಣ ವಯಸ್ಸಿನಲ್ಲೇ ಸಾಕಷ್ಟು ಸಾಧನೆ ಮಾಡಿ, ತರಾತುರಿಯಲ್ಲೇ ಅವರು ಹೋಗಿಬಿಟ್ಟರು. ಶಂಕರ್ ನಾಗ್ ಅವರ ಬಯೋಪಿಕ್ ಬಗ್ಗೆ ಉಪೇಂದ್ರ (Upendra) ಮಾತನಾಡಿದ ವಿಡಿಯೋ ಒಂದು ವೈರಲ್ ಆಗಿದೆ.
ಬಯೋಪಿಕ್ ಮಾಡೋದು ಫಿಕ್ಷನ್ ಸಿನಿಮಾ ಮಾಡಿದಷ್ಟು ಸುಲಭವಲ್ಲ. ಸಾಮಾನ್ಯ ಸಿನಿಮಾಗಳಲ್ಲಿ ಕಥೆಯನ್ನು ನಿರ್ದೇಶಕರು ಮನಸ್ಸಿಗೆ ತೋಚಿದಂತೆ ಮಾಡಬಹುದು. ಈ ಬಗ್ಗೆ ಯಾರೂ ಪ್ರಶ್ನೆ ಮಾಡುವುದಿಲ್ಲ. ಆದರೆ, ಬಯೋಪಿಕ್ ವಿಚಾರದಲ್ಲಿ ಆ ರೀತಿ ಆಗುವುದಿಲ್ಲ. ಏನು ಇದೇ ಅದನ್ನೇ ತೋರಿಸಬೇಕಾಗುತ್ತದೆ. ಈ ಚಾಲೆಂಜ್ನ ಸ್ವೀಕರಿಸಲು ಉಪೇಂದ್ರ ಸಿದ್ಧರಿದಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ ವಿಡಿಯೋ ಗಮನ ಸೆಳೆದಿದೆ.
View this post on Instagram
ನವೆಂಬರ್ 9 ಶಂಕರ್ ನಾಗ್ ಜನ್ಮದಿನ. ಈ ಸಂದರ್ಭದಲ್ಲಿ ಉಪೇಂದ್ರ ಅವರು ಮಾತನಾಡಿದ್ದರು. ‘ಹೋಮ್ ಮಿನಿಸ್ಟರ್ ಬಳಿ ಸಿನಿಮಾ ಬಗ್ಗೆ ಚರ್ಚೆ ಮಾಡಿದರೆ ಅವರು, ಶಂಕರ್ ನಾಗ್ ಬಯೋಪಿಕ್ ಮಾಡಿ ಎನ್ನುತ್ತಾರೆ. ಅದಕ್ಕೆ ಅನಂತ್ ನಾಗ್, ಗಾಯತ್ರಿ ಮೊದಲಾದವರ ಒಪ್ಪಿಗೆ ಪಡೆಯಬೇಕು. ಸ್ಕ್ರಿಪ್ಟ್ ರೆಡಿ ಮಾಡಬೇಕು. ಮೇರುಪರ್ವತಕ್ಕೆ ಎಲ್ಲಿಯೂ ಲೋಪ ಆಗದಂತೆ ಬಯೋಪಿಕ್ ಮಾಡಬೇಕು. ಕಮರ್ಷಿಯಲ್ ಆಗಿ ಕೂಡ ಇರಬೇಕು. ಅಭಿಮಾನಿಗಳಿಗೆ ಇಷ್ಟ ಆಗುವಂತೆ ಸಿನಿಮಾ ಮಾಡಬೇಕು’ ಎಂದಿದ್ದಾರೆ ಉಪೇಂದ್ರ.
ಇದನ್ನೂ ಓದಿ: ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಕೇಸ್: ಆರೋಪಿ ಅರೆಸ್ಟ್; ಶಾಕಿಂಗ್ ವಿಚಾರ ಬಿಚ್ಚಿಟ್ಟ ಖಾಕಿ
ಉಪೇಂದ್ರ ಅವರು ‘ಯುಐ’ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಕಳೆದ ವರ್ಷ ಡಿಸೆಂಬರ್ನಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಅವರು ನಟನೆಯಲ್ಲಿ ಬ್ಯುಸಿ ಇದ್ದಾರೆ. ‘ಕೂಲಿ’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡಿದ್ದರು. ಇದಾದ ಬಳಿಕ ಅವರು ತಮ್ಮ ನಿರ್ದೇಶನದ ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ. ಅವರು ‘45’ ಸಿನಿಮಾದ ಭಾಗ ಕೂಡ ಆಗಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ನಿರ್ದೇಶನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




