
ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಇದನ್ನು ನೋಡಿ ಅಶ್ವಿನಿ ಹೊಟ್ಟೆ ಉರಿದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಈಗ ರಕ್ಷಿತಾ ಅವರನ್ನು ತುಳಿಯಲು ಜಾನ್ವಿ ಹಾಗೂ ಅಶ್ವಿನಿ ಪಣ ತೊಟ್ಟಂತೆ ಇದೆ. ರಕ್ಷಿತಾ ಶೆಟ್ಟಿ ಹೇಗೇಗೋ ಆಡುತ್ತಿದ್ದಾರೆ ಎಂದು ಅವರ ವಿರುದ್ಧ ಕಥೆ ಕಟ್ಟಲು ಮುಂದಾಗಿದ್ದಾರೆ. ಈಗ ಇವರ ವಿರುದ್ಧ ರಕ್ಷಿತಾ ಶೆಟ್ಟಿ ತಿರುಗಿಬಿದ್ದಿದ್ದಾರೆ.
ರಕ್ಷಿತಾ ಶೆಟ್ಟಿ ಅವರು ‘ಬಿಗ್ ಬಾಸ್’ಗೆ ಬಂದ ವಾರವೇ ಹೊರ ಹೋದರು. ‘ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಮಾತನಾಡಿ ಫ್ಲೂಕ್ನಲ್ಲಿ ಫೇಮಸ್ ಆದವರು’ ಎಂಬ ಪಟ್ಟವನ್ನು ರಕ್ಷಿತಾ ಶೆಟ್ಟಿಗೆ ಜಾನ್ವಿ ಕಟ್ಟಿದ್ದರು. ಈ ಮಾತು ರಕ್ಷಿತಾಗೆ ಸಾಕಷ್ಟು ಬೇಸರ ಮೂಡಿಸಿದೆ. ಈ ಕಾರಣದಿಂದಲೇ ಜಾನ್ವಿ ಹೇಳಿದ ಮಾತಿಗೆ ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ.
‘ರಾರಾ ಹಾಡಿಗೆ ರಕ್ಷಿತಾ ಡ್ಯಾನ್ಸ್ ಮಾಡಿದ್ದಾರೆ, ಆ ವೇಳೆ ಅವಳಿಗೆ ಈ ಕಡೆ ಗಮನವೇ ಇರಲಿಲ್ಲ’ ಎಂದು ಅಶ್ವಿನಿ ಎಲ್ಲರ ಎದುರು ಹೇಳಿದ್ದರು. ಆ ಬಳಿಕ ರಕ್ಷಿತಾ ಶೆಟ್ಟಿ ಅವರು ಈ ವಿಚಾರಕ್ಕೆ ಕಣ್ಣೀರು ಹಾಕಿದ್ದರು. ರಾತ್ರಿ ಇಡೀ ಗೆಜ್ಜೆ ಶಬ್ದ ಮಾಡಿ, ಈ ಆರೋಪವನ್ನು ರಕ್ಷಿತಾ ಮೇಲೆ ಎತ್ತಿ ಹಾಕಲು ಅವರು ಪ್ರಯತ್ನಿಸಿದ್ದರು. ಈಗ ಅಶ್ವಿನಿ ಹಾಗೂ ರಕ್ಷಿತಾ ಮಧ್ಯೆ ಮತ್ತೆ ಕಿತ್ತಾಟ ನಡೆದಿದೆ.
ರಕ್ಷಿತಾ ಅತಿಯಾಗಿ ಆಡುತ್ತಿದ್ದಾಳೆ ಎಂದು ಜಾನ್ವಿಗೆ ಅನಿಸಿದೆ. ಈ ಬಗ್ಗೆ ಅಶ್ವಿನಿ ಹಾಗೂ ಜಾನ್ವಿ ಚರ್ಚೆ ಮಾಡಿದ್ದಾರೆ. ಆಗ ರಕ್ಷಿತಾ ಮೇಲೆ ಇಬ್ಬರೂ ಮುಗಿ ಬೀಳಲು ಪ್ರಯತ್ನಿಸಿದ್ದರು. ಇದಕ್ಕೆ ರಕ್ಷಿತಾ ಹೆದರಲೇ ಇಲ್ಲ. ‘ಮುಚ್ಕೊಂಡು ಹೋಗು’ ಎಂದು ಅಶ್ವಿನಿ ಹೇಳಿದರು. ‘ನೀವು ದೊಡ್ಡ ನಾಗವಲ್ಲಿ’ ಎಂದು ಜಾನ್ವಿಗೆ ರಕ್ಷಿತಾ ನೇರ ಮಾತುಗಳಲ್ಲಿ ಹೇಳಿದರು.
ಇದನ್ನೂ ಓದಿ: ಮಧ್ಯರಾತ್ರಿ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ವಿಚಿತ್ರ ವರ್ತನೆ? ಎಲ್ಲರಿಗೂ ಭಯ
‘ಈ ನಾಟಕಗಳನ್ನು ಬಾತ್ರೂಂನಲ್ಲಿ ಇಟ್ಟುಕೋ’ ಎಂದು ಅಶ್ವಿನಿ ಅವರು ರಕ್ಷಿತಾಗೆ ಹೇಳಿದರು. ‘ನಾನು ನೂರು ಬಾರಿ ಹೋಗ್ತೀನಿ. ನಿಮ್ಮ ಮನೆಯ ವಾಶ್ರೂಮ್ ಆ’ ಎಂದು ರಕ್ಷಿತಾ ಪ್ರಶ್ನೆ ಮಾಡಿದ್ದಾರೆ. ರಕ್ಷಿತಾ ಗುಂಡಿಗೆ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:10 am, Fri, 17 October 25