Bigg Boss Elimination: ಮಿಡ್ ಸೀಸನ್ ಫಿನಾಲೆ: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಡಾಗ್ ಸತೀಶ್
Bigg Boss Kannada Season 12: ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನಲ್ಲಿ ಅ.16ರ ಸಂಚಿಕೆಯಲ್ಲಿ ದೊಡ್ಡ ಟ್ವಿಸ್ಟ್ ನೀಡಲಾಗಿದೆ. ಮಧ್ಯ ರಾತ್ರಿಯೇ ಏಕಾಏಕಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಿ ಒಬ್ಬರನ್ನು ಮನೆಯಿಂದ ಹೊರಗೆ ಹಾಕಲಾಗಿದೆ. ಡಾಗ್ ಸತೀಶ್ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಅ.18, 19ರಂದು ಮಿಡ್ ಸೀಸನ್ ಫಿನಾಲೆ ನಡೆಲಿದೆ.

ಕನ್ನಡದಲ್ಲಿ ಈವರೆಗೂ ಬಿಗ್ ಬಾಸ್ 11 ಸೀಸನ್ಗಳು ಮುಗಿದಿವೆ. ಈಗ 12ನೇ ಸೀಸನ್ ನಡೆಯುತ್ತಿದೆ. ಇಷ್ಟು ಸೀಸನ್ಗಳು ಒಂದು ರೀತಿ ಇದ್ದವು. ಆದರೆ ಈ ಬಾರಿಯ ಬಿಗ್ ಬಾಸ್ (Bigg Boss Kannada) ತುಂಬಾ ಡಿಫರೆಂಟ್ ಆಗಿದೆ. ಈವರೆಗೂ ಕಂಡು-ಕೇಳಿರದ ಟ್ವಿಸ್ಟ್ಗಳನ್ನು ಪರಿಚಯಿಸಲಾಗಿದೆ. ಇದೇ ಮೊದಲ ಬಾರಿಗೆ ಒಂದೇ ಸೀಸನ್ನಲ್ಲಿ 2 ಫಿನಾಲೆ ನಡೆಯುತ್ತಿದೆ! ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಮೂರನೇ ವಾರದಲ್ಲಿ ಒಂದು ಫಿನಾಲೆ ಇರುತ್ತದೆ ಎಂದು ಮೊದಲೇ ತಿಳಿಸಲಾಗಿತ್ತು. ಫಿನಾಲೆಗೂ ಮುನ್ನ ಮಿಡ್ ಮೀಕ್ ಎಲಿಮಿನೇಷನ್ ನಡೆದಿದೆ. ಡಾಗ್ ಸತೀಶ್ (Dog Satish) ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.
ಮಧ್ಯರಾತ್ರಿ 2 ಗಂಟೆಯಲ್ಲಿ ಈ ಶಾಕ್ ನೀಡಲಾಯಿತು. ಏಕಾಏಕಿ ಸೌರನ್ ಹೊಡೆದುಕೊಳ್ಳಲು ಆರಂಭ ಆಯಿತು. ಎಲ್ಲರನ್ನೂ ಕೂಡಲೇ ಗಾರ್ಡನ್ ಏರಿಯಾಗೆ ಕರೆಯಲಾಯಿತು. ಆರಾಮಾಗಿ ಮಲಗಬೇಕು ಎಂದುಕೊಂಡಿದ್ದ ಎಲ್ಲ ಸ್ಪರ್ಧಿಗಳಿಗೆ ಶಾಕ್ ಎದುರಾಯಿತು. ಮನೆಯೊಳಗಿನ ಸ್ಪರ್ಧಿಗಳ ಅಭಿಪ್ರಾಯದ ಆಧಾರದ ಮೇಲೆ ಯಾರು ಎಲಿಮಿನೇಟ್ ಆಗಬೇಕು ಎಂಬುದನ್ನು ನಿರ್ಧರಿಸಲಾಯಿತು. ಹೆಚ್ಚಿನ ಸ್ಪರ್ಧಿಗಳು ಸತೀಶ್ ಹೆಸರನ್ನು ಸೂಚಿಸಿದ್ದರಿಂದ ಅವರೇ ಎಲಿಮಿನೇಟ್ ಆದರು.
ಕಾವ್ಯ ಶೈವ, ಅಭಿಷೇಕ್, ಮಂಜು ಭಾಷಿಣಿ, ಅಶ್ವಿನಿ ಎಸ್ಎನ್, ಚಂದ್ರಪ್ರಭ, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಧ್ರವಂತ್, ಸ್ಪಂದನಾ, ಧನುಶ್, ಮಲ್ಲಮ ಅವರು ಸತೀಶ್ ಹೆಸರನ್ನೇ ಸೂಚಿಸಿದ್ದರಿಂದ ಅವರು ಎಲಿಮಿನೇಟ್ ಆದರು. ಸತೀಶ್ ಅವರಲ್ಲಿ ಆಟದ ಹುಮ್ಮಸ್ಸು ಇರಲಿಲ್ಲ ಎಂಬ ಕಾರಣವನ್ನು ನೀಡಿ ಎಲ್ಲ ಸ್ಪರ್ಧಿಗಳು ಸತೀಶ್ ಹೆಸರನ್ನು ಸೂಚಿಸಿದರು.
ಕಾಕ್ರೋಜ್ ಸುಧಿ, ಅಶ್ವಿನಿ ಗೌಡ, ಮಾಳು ನಿಪನಾಳ, ರಾಶಿಕಾ ಶೆಟ್ಟಿ ಅವರು ಮೊದಲನೇ ಫಿನಾಲೆಯ ಫೈನಲಿಸ್ಟ್ಗಳಾಗಿದ್ದಾರೆ. ಇನ್ನುಳಿದ ಸ್ಪರ್ಧಿಗಳು ಡೇಂಜರ್ ಝೋನ್ನಲ್ಲಿ ಇದ್ದಾರೆ. ಮೊದಲ ಫಿನಾಲೆಗೂ ಮುನ್ನ ಎಷ್ಟು ಜನ ಬೇಕಾದರೂ ಎಲಿಮಿನೇಟ್ ಆಗಬಹುದು ಎಂದು ಕಿಚ್ಚ ಸುದೀಪ್ ಅವರು ಮೊದಲೇ ಎಚ್ಚರಿಕೆ ನೀಡಿದ್ದರು. ಅದರಂತೆಯೇ ಶೋ ನಡೆಯುತ್ತಿದೆ.
ಇದನ್ನೂ ಓದಿ: ಅ.18, 19ರಂದು ‘ಬಿಗ್ ಬಾಸ್ ಕನ್ನಡ 12’ ಮೊದಲ ಫಿನಾಲೆ: ಆಟದಲ್ಲಿ ಭಾರಿ ಟ್ವಿಸ್ಟ್
ಎಂದಿನ ಫಿನಾಲೆ ರೀತಿಯೇ ಮಿಡ್ ಸೀಸನ್ ಫಿನಾಲೆ ಕೂಡ ನಡೆಯಲಿದೆ. ಅದಕ್ಕೆ ದಿನಾಂಕ ನಿಗದಿ ಆಗಿದೆ. ಅಕ್ಟೋಬರ್ 18 ಹಾಗೂ 19ರಂದು ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ರಾತ್ರಿ 8 ಗಂಟೆಯಿಂದ 11 ಗಂಟೆ ವರೆಗೆ ಮಿಡ್ ವೀಕ್ ಫಿನಾಲೆ ಪ್ರಸಾರ ಆಗಲಿದೆ. ಜಿಯೋ ಹಾಟ್ಸ್ಟಾರ್ ಮೂಲಕ ಕೂಡ ನೋಡಬಹುದು. ಈ ಸಂಚಿಕೆಗಳಲ್ಲಿ ಹಲವು ತಿರುವುಗಳು ಇರಲಿವೆ. ಏನೆಲ್ಲ ಇರಲಿದೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




