‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಟಿಆರ್ಪಿ: ವಾರಾಂತ್ಯದಲ್ಲಿ ಬೊಂಬಾಟ್, ವಾರದ ದಿನದಲ್ಲಿ..
'ಬಿಗ್ ಬಾಸ್ ಕನ್ನಡ ಸೀಸನ್ 12'ರ TRP ವಿಶ್ಲೇಷಣೆ ಇಲ್ಲಿದೆ. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಕಾರಣದಿಂದ ಬೊಂಬಾಟ್ ರೇಟಿಂಗ್ ಪಡೆದರೂ, ವಾರದ ದಿನಗಳಲ್ಲಿ TRP ಕುಸಿತ ಕಂಡಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೊದಲ ಫಿನಾಲೆ ಈ ವಾರ ನಡೆಯಲಿದೆ. ವೀಕೆಂಡ್ ಎಪಿಸೋಡ್ನಲ್ಲಿ ಒಳ್ಳೆಯ TRP ನಿರೀಕ್ಷಿಸಬಹುದಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಶೋ ‘ಎಕ್ಸ್ಪೆಕ್ಟ್ ದಿ ಅನ್ಎಕ್ಸ್ಪೆಕ್ಟ್’ ಎಂಬ ಥೀಮ್ ಅಡಿಯಲ್ಲಿ ಮೂಡಿ ಬಂದಿದೆ. ಯಾರೂ ನಿರೀಕ್ಷಿಸದೇ ಇರುವದೇ ನಡೆಯುತ್ತದೆ ಎಂಬುದು ಇದರ ಅರ್ಥ. ಟಿಆರ್ಪಿ ವಿಚಾರದಲ್ಲಿಯೂ ಹೀಗೆಯೇ ಆಯಿತೇ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ವಾರಾಂತ್ಯದಲ್ಲಿ ಒಳ್ಳೆಯ ಟಿಆರ್ಪಿ ಪಡೆಯುತ್ತಿರುವ ಶೋ, ವಾರದ ದಿನಗಳಲ್ಲಿ ಡಲ್ ಹೊಡೆದಿದೆ.
ಕಿಚ್ಚ ಸುದೀಪ್ ಅವರನ್ನು ನೋಡುವ ಕಾರಣದಿಂದಲೇ ಅನೇಕರು ಬಿಗ್ ಬಾಸ್ ನೋಡುತ್ತಾರೆ. ಶನಿವಾರ ಹಾಗೂ ಭಾನುವಾರ ‘ಬಿಗ್ ಬಾಸ್’ ಪ್ರಸಾರ ಕಾಣುತ್ತದೆ. ಶನಿವಾರದ ಎಪಿಸೋಡ್ಗೆ ನಗರ ಭಾಗದಲ್ಲಿ 9.1 ಟಿಆರ್ಪಿ ಸಿಕ್ಕಿದೆ. ನಗರ ಹಾಗೂ ಗ್ರಾಮಾಂತರ ಸೇರಿದರೆ 8.3 ಟಿವಿಆರ್ ಸಿಕ್ಕಿದೆ. ಭಾನುವಾರ ನಗರ + ಗ್ರಾಮಾಂತರ 7.8 ಹಾಗೂ ನಗರ ಭಾಗದಲ್ಲಿ 8.9 ಟಿವಿಆರ್ ದೊರೆತಿದೆ.
ಆದರೆ, ವಾರದ ದಿನಗಳಲ್ಲಿ ಶೋಗೆ ಟಿಆರ್ಪಿ ಸ್ವಲ್ಪ ಕಡಿಮೆಯೇ ಇದೆ ಎಂಬ ಅಭಿಪ್ರಾಯ ವೀಕ್ಷಕರ ವಲಯದಲ್ಲಿ ವ್ಯಕ್ತವಾಗಿದೆ. ಏಕೆಂದರೆ ಕರ್ನಾಟಕದಲ್ಲಿ 5.8 ಟಿವಿಆರ್ ಹಾಗೂ ನಗರ ಭಾಗದಲ್ಲಿ 6.2 ಟಿವಿಆರ್ ಸಿಕ್ಕಿದೆ. ಆರಂಭದ ವಾರ ಆಗಿರುವುದರಿಂದ ಕಡಿಮೆ ಟಿಆರ್ಪಿ ಸಿಕ್ಕಿರಬಹುದು ಎಂಬ ಅಭಿಪ್ರಾಯ ಕೂಡ ಕೇಳಿ ಬಂದಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್; ಆ ಇಬ್ಬರು ಔಟ್?
ಧಾರಾವಾಹಿ ಟಿಆರ್ಪಿ
ಧಾರಾವಾಹಿ ಟಿಆರ್ಪಿ ಕೂಡ ಗಮನ ಸೆಳೆಯುವ ರೀತಿಯಲ್ಲಿ ಇದೆ. ಮೊದಲ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ಎರಡನೇ ಸ್ಥಾನದಲ್ಲಿ ‘ಕರ್ಣ’ ಧಾರಾವಾಹಿ ಇದೆ. ಮೂರನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಎಲ್ಲಾ ಧಾರಾವಾಹಿಗಳು 8+ ಟಿಆರ್ಪಿ ಪಡೆದುಕೊಂಡಿವೆ. ನಾಲ್ಕನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಹಾಗೂ ಐದನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ.
ಈ ವಾರವೇ ಫಿನಾಲೆ
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೊದಲ ಫಿನಾಲೆ ಈ ವಾರ ನಡೆಯಲಿದೆ. ಈ ವೇಳೆ ಕೆಲವರು ಔಟ್ ಆಗುವ ಸಾಧ್ಯತೆ ಇದೆ. ಹೀಗಾಗಿ, ವೀಕೆಂಡ್ ಎಪಿಸೋಡ್ನಲ್ಲಿ ಒಳ್ಳೆಯ ಟಿಆರ್ಪಿ ನಿರೀಕ್ಷಿಸಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








