ಮಧ್ಯರಾತ್ರಿ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ವಿಚಿತ್ರ ವರ್ತನೆ? ಎಲ್ಲರಿಗೂ ಭಯ

ರಾರಾ ಹಾಡು ಹೇಳುತ್ತಾ ರಕ್ಷಿತಾ ಶೆಟ್ಟಿ ಅವರು ಮಧ್ಯರಾತ್ರಿ ಡ್ಯಾನ್ಸ್ ಮಾಡಿದ್ದಾರೆ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿಯ ಈ ವರ್ತನೆಯಿಂದ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರಿಗೆ ಭಯ ಆಗಿದೆ. ಆದರೆ ತಾವು ಆ ರೀತಿ ಮಾಡಿಯೇ ಇಲ್ಲ ಎಂದು ರಕ್ಷಿತಾ ಶೆಟ್ಟಿ ಅವರು ಕಣ್ಣೀರು ಹಾಕಿದ್ದಾರೆ.

ಮಧ್ಯರಾತ್ರಿ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ವಿಚಿತ್ರ ವರ್ತನೆ? ಎಲ್ಲರಿಗೂ ಭಯ
Rakshitha Shetty

Updated on: Oct 16, 2025 | 4:10 PM

ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋನಲ್ಲಿ ಗಮನ ಸೆಳೆಯುತ್ತಿದ್ದಾರೆ. ಆದರೆ ಈಗ ಅವರ ಮೇಲೆ ಒಂದು ಆರೋಪ ಬಂದಿದೆ. ಮಧ್ಯರಾತ್ರಿ ಬಿಗ್ ಬಾಸ್ ಮನೆಯಲ್ಲಿ ಅವರು ನಾಗವಲ್ಲಿ ರೀತಿ ಡ್ಯಾನ್ಸ್ ಮಾಡುತ್ತಾರೆ ಎನ್ನಲಾಗಿದೆ. ಅಶ್ವಿನಿ ಗೌಡ (Ashwini Gowda) ಅವರು ಈ ವಿಷಯವನ್ನು ಎಲ್ಲರಿಗೂ ಹೇಳಿದ್ದಾರೆ. ಇದನ್ನೆಲ್ಲ ತಾವು ಸ್ವತಃ ಕಣ್ಣಾರೆ ನೋಡಿರುವುದಾಗಿ ವಿವರಿಸಿದ್ದಾರೆ. ಈ ಮಾತು ಕೇಳಿ ರಕ್ಷಿತಾ ಶೆಟ್ಟಿ (Rakshitha Shetty) ಅವರಿಗೆ ಬೇಸರ ಆಗಿದೆ. ಇನ್ನುಳಿದ ಸ್ಪರ್ಧಿಗಳ ಎದುರಲ್ಲಿ ಇದನ್ನು ಹೇಳಿಕೊಂಡು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಮಧ್ಯರಾತ್ರಿ ಒಂದು ಅಥವಾ ಒಂದೂವರೆ ಗಂಟೆಗೆ ರಾರಾ ಹಾಡಿಗೆ ರಕ್ಷಿತಾ ಶೆಟ್ಟಿ ಡ್ಯಾನ್ಸ್ ಮಾಡಿದ್ದಾಳೆ. ಗಂಭೀರವಾಗಿ ಹೇಳುತ್ತಿದ್ದೇನೆ. ನಾನು ತಮಾಷೆ ಮಾಡುತ್ತಿಲ್ಲ. ಆಕೆಗೆ ಗಮನವೇ ಇರಲಿಲ್ಲ. ಏನೇನೋ ಮಾತನಾಡುತ್ತಿದ್ದಳು. ಲವ್ ಅಂತ ಏನೇನೋ ಹೇಳುತ್ತಿದ್ದಳು. ಆಮೇಲೆ ಸಹಜ ಸ್ಥಿತಿಗೆ ಬಂದಳು. ಕೂದಲೆಲ್ಲ ಸರಿ ಮಾಡಿಕೊಂಡಳು. ಅವಳನ್ನು ಮಾತನಾಡಿಸಲು ನನಗೆ ಭಯ ಆಯಿತು’ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ.

ಈ ವಿಷಯ ಕೇಳಿ ರಾಶಿಕಾ ಶೆಟ್ಟಿ, ಕಾಕ್ರೋಚ್ ಸುಧಿ, ಅಭಿಷೇಕ್ ಮುಂತಾದವರಿಗೆ ಅಚ್ಚರಿ ಆಗಿದೆ. ರಕ್ಷಿತಾ ಶೆಟ್ಟಿ ಅವರ ಈ ವರ್ತನೆಯಿಂದಾಗಿ ಅಶ್ವಿನಿ ಗೌಡ ಅವರಿಗೆ ಭಯ ಆಗಿದೆ. ಹಾಗಾಗಿ ಕಳೆದ ಮೂರು ದಿನದಿಂದ ಆಕೆಯನ್ನು ಅವಾಯ್ಡ್ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. ಟಾಸ್ಕ್ ಸಂದರ್ಭದಲ್ಲೂ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ರಕ್ಷಿತಾಳನ್ನು ಅವಾಯ್ಡ್ ಮಾಡಿದ್ದಾರೆ.

ತಮ್ಮ ಮೇಲೆ ಬಂದಿರುವ ಈ ಆರೋಪವನ್ನು ರಕ್ಷಿತಾ ಶೆಟ್ಟಿ ಒಪ್ಪಿಕೊಂಡಿಲ್ಲ. ತಾನು ಆ ರೀತಿ ಮಾಡಿಯೇ ಇಲ್ಲ ಎಂದು ಅವರು ವಾದಿಸಿದ್ದಾರೆ. ಅಲ್ಲದೇ, ಸ್ಪಂದನಾ, ಮಂಜು ಭಾಷಿಣಿ, ಅಶ್ವಿನಿ ಎಸ್​.ಎನ್, ಕಾವ್ಯ ಶೈವ ಮುಂತಾದವರ ಎದುರಿನಲ್ಲಿ ಈ ವಿಷಯವನ್ನು ಹೇಳಿಕೊಂಡು ರಕ್ಷಿತಾ ಶೆಟ್ಟಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಕಂಬಳದಲ್ಲಿ ಗೆದ್ದವರಿಗೆ ಅವಮಾನ? ರಕ್ಷಿತಾ ಶೆಟ್ಟಿ ಭಾಷೆ ಕೇಳಿ ಕಂಗಾಲಾದ ಮಲ್ಲಮ್ಮ

‘ನನ್ನ ಒಳಗೆ ಏನೋ ಇದೆ, ರಾರಾ ಸಾಂಗ್ ಹೇಳಿ ಡ್ಯಾನ್ಸ್ ಮಾಡುತ್ತಿದ್ದೇನೆ ಅಂತ ಅಶ್ವಿನಿ ಗೌಡ ಹೇಳುತ್ತಿದ್ದಾರೆ. ನನಗೆ ರಾರಾ ಸಾಂಗ್ ಬರುವುದೇ ಇಲ್ಲ. ಇದನ್ನೆಲ್ಲ ನಾನು ಮಾಡಿಲ್ಲ. ಅಶ್ವಿನಿ ಗೌಡ ಹೀಗೆಲ್ಲ ಹೇಳಿದರೆ ನನಗೆ ಭೂತ ಬರುತ್ತಾ ಅಂತ ಜನರು ನನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ? ನನಗೆ ನೋವಾಗುತ್ತದೆ’ ಎಂದು ರಕ್ಷಿತಾ ಶೆಟ್ಟಿ ಅವರು ಹೇಳಿಕೊಂಡು ಅತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.