AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ವಿರುದ್ಧ ದೂರು, ಶೋ ಬಂದ್ ಮಾಡುವಂತೆ ಒತ್ತಾಯ

Bigg Boss: ಭಾರತದಲ್ಲಿ ಬಲು ಜನಪ್ರಿಯ ಮತ್ತು ಅಷ್ಟೇ ವಿವಾದಾತ್ಮಕ ಶೋ ಎಂದರೆ ಅದು ಬಿಗ್​​ಬಾಸ್ ಶೋ. ಇತ್ತೀಚೆಗಷ್ಟೆ ಕನ್ನಡ ಬಿಗ್​​ಬಾಸ್ ಅನ್ನು ಒಂದು ದಿನಗಳ ಕಾಲ ನಿಲ್ಲಿಸಲಾಗಿತ್ತು. ಆ ನಂತರ ಹಲವರ ಪ್ರಯತ್ನದ ಮೂಲಕ ಮತ್ತೆ ಶೋ ಪ್ರಾರಂಭ ಆಗಿದೆ. ಇದೀಗ ಬಿಗ್​​ಬಾಸ್ ವಿರುದ್ಧ ದೂರು ಸಲ್ಲಿಸಲಾಗಿದ್ದು, ಬಿಗ್​​ಬಾಸ್ ಪ್ರಸಾರವನ್ನು ಶೀಘ್ರವೇ ಬಂದ್ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಬಿಗ್​​ಬಾಸ್ ವಿರುದ್ಧ ದೂರು, ಶೋ ಬಂದ್ ಮಾಡುವಂತೆ ಒತ್ತಾಯ
Bigg Boss Telugu
ಮಂಜುನಾಥ ಸಿ.
|

Updated on: Oct 17, 2025 | 9:38 AM

Share

ಸೆಪ್ಟೆಂಬರ್ ಬಂತೆಂದರೆ ಬಿಗ್​​ಬಾಸ್ (Bigg Boss) ಸೀಸನ್ ಶುರುವಾಗುತ್ತದೆ. ಕನ್ನಡ ಸೇರಿದಂತೆ ದೇಶದ ಹಲವು ಭಾಷೆಗಳಲ್ಲಿ ಬಿಗ್​​ಬಾಸ್ ಹೊಸ ಸೀಸನ್ ಪ್ರಾರಂಭ ಆಗುತ್ತವೆ. ಭಾರತದ ಟಿವಿಗಳಲ್ಲಿ ಹಲವು ಭಾಷೆಗಳಲ್ಲಿ ಹಲವಾರು ರೀತಿಯ ರಿಯಾಲಿಟಿ ಶೋ ಪ್ರಸಾರ ಆಗುತ್ತದೆ. ಆದರೆ ಅತಿ ಹೆಚ್ಚು ವಿವಾದಕ್ಕೆ ಒಳಗಾಗುವುದು ಮತ್ತು ಜನಪ್ರಿಯವಾಗಿರುವುದು ಸಹ ಬಿಗ್​​ಬಾಸ್ ರಿಯಾಲಿಟಿ ಶೋ. ಇತ್ತೀಚೆಗಷ್ಟೆ ಕನ್ನಡ ಬಿಗ್​​ಬಾಸ್ ಅನ್ನು ಒಂದು ದಿನಗಳ ಕಾಲ ಬಂದ್ ಸಹ ಮಾಡಿಸಲಾಗಿತ್ತು. ಇದೀಗ ಬಿಗ್​​ಬಾಸ್ ವಿರುದ್ಧ ದೂರು ನೀಡಿ, ಶೋ ಅನ್ನು ಶಾಶ್ವತವಾಗಿ ಬಂದ್ ಮಾಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.

ಅಂದಹಾಗೆ ದೂರು ನೀಡಲಾಗಿರುವುದು ಕನ್ನಡ ಬಿಗ್​​ಬಾಸ್ ವಿರುದ್ಧ ಅಲ್ಲ ಬದಲಿಗೆ ತೆಲುಗು ಬಿಗ್​​ಬಾಸ್ ವಿರುದ್ಧ. ತೆಲುಗು ಬಿಗ್​​ಬಾಸ್ ಅನ್ನು ಶೀಘ್ರವೇ ಬಂದ್ ಮಾಡಬೇಕು ಹಾಗೂ ಆಯೋಜಕರ ವಿರುದ್ಧ ಕ್ರಮ ಜರುಗಿಸಬೇಕೆಂದು ಕಮ್ಮಾರಿ ಶ್ರೀನಿವಾಸ ಮತ್ತು ಬಾಗನ್ನಗಾರಿ ರವೀಂದ್ರ ರೆಡ್ಡಿ ಅವರುಗಳು ಹೈದರಾಬಾದ್​ನ ಜೂಬ್ಲಿ ಹಿಲ್ಸ್ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ತೆಲುಗು ಬಿಗ್​​ಬಾಸ್ ಶೋ ಸಮಾಜಕ್ಕೆ ಹಾನಿಕಾರಕ ಈ ಶೋ ಯುವಕರನ್ನು ಹಾಳು ಮಾಡುತ್ತಿದೆ ಎಂದು ಇಬ್ಬರು ಆರೋಪಿಸಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್​​ ಮನೆಯಲ್ಲಿ ಅರ್ಧ ರಾತ್ರಿಯಲ್ಲಿ ಕೇಳಿತು ಗೆಜ್ಜೆ ಸದ್ದು

‘ಬಿಗ್​​ಬಾಸ್ ಶೋನಲ್ಲಿ ಸ್ಪರ್ಧಿಗಳು ಸತತವಾಗಿ ಕೆಟ್ಟ ಶಬ್ದಗಳ ಬಳಕೆ ಮಾಡುತ್ತಾರೆ. ಅಶ್ಲೀಲ ಮಾತುಗಳನ್ನು ಆಡುತ್ತಾರೆ. ಪದೇ ಪದೇ ಜಗಳ ಆಡುತ್ತಾರೆ. ಕೆಟ್ಟ ವರ್ತನೆಗಳನ್ನು ತೋರುತ್ತಾರೆ. ಸಾಮಾಜಿಕವಾಗಿ ಸಹನೀಯವಲ್ಲದ ರೀತಿ ವರ್ತಿಸುತ್ತಾರೆ. ಈ ರೀತಿಯ ಕಾರ್ಯಕ್ರಮಗಳು ಯುವಕರನ್ನು ದಾರಿ ತಪ್ಪಿಸುತ್ತವೆ. ಯುವಕರು ಕೆಟ್ಟ ವರ್ತನೆ ತೋರುವಂತೆ, ಅಗ್ರೆಸ್ಸಿವ್ ಆಗಿ ವರ್ತಿಸುವಂತೆ, ಸಾಮಾಜಿಕ ನೀತಿ-ನಿಯಮಗಳನ್ನು ಬಿಟ್ಟು ಬದುಕಲು ಪ್ರೇರೇಪಣೆ ನೀಡುತ್ತವೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಾವು (ದೂರುದಾರರು) ಗಮನಿಸಿರುವಂತೆ ಈ ಶೋನಲ್ಲಿ ಪರಸ್ಪರ ಕಿತ್ತಾಡುವುದನ್ನು, ಪರಸ್ಪರರಿಗೆ ಬೈದಾಡಿಕೊಳ್ಳೂವುದನ್ನು, ಅಗೌರವವಾಗಿ ನಡೆದುಕೊಳ್ಳುವುದನ್ನು ಬೆಂಬಲಿಸಲಾಗುತ್ತದೆ. ಪರಸ್ಪರ ಕಿತ್ತಾಡುವಂತೆ ಉತ್ತೇಜನೆ ನೀಡಲಾಗುತ್ತದೆ. ಇವು ಭಾರತೀಯ ಮೌಲ್ಯಗಳಿಗೆ ವ್ಯತಿರಿಕ್ತವಾಗಿದ್ದು, ಭಾರತೀಯ ಕೌಟುಂಬಿಕ ಆದರ್ಶ ಮತ್ತು ಸಂಸ್ಕೃತಿಯ ಉಲ್ಲಂಘನೆ ಆಗಿದೆ. ಅಲ್ಲದೆ ಇಂಥಹಾ ಒಂದು ಅಶ್ಲೀಲ ಭಾಷೆ ಬಳಕೆಯ, ಆಕ್ರಮಣಕಾರಿ, ಹಿಂಸಾತ್ಮಕ ಶೋ ಅನ್ನು ಕೌಟುಂಬಿಕ ಅವಧಿಯಲ್ಲಿ (ಫ್ಯಾಮಿಲಿ ವೀವಿಂಗ್) ಅವಧಿಯಲ್ಲಿ ಪ್ರಸಾರ ಮಾಡುತ್ತಿರುವುದು ಸೂಕ್ತವಲ್ಲ ಎಂದು ದೂರುದಾರರು ಆಕ್ಷೇಪಿಸಿದ್ದಾರೆ.

ಬಿಗ್​​ಬಾಸ್ ಶೋ ಮೂಲಕ ಆಯೋಜಕರು ಯಾವ ಸಂದೇಶವನ್ನು ನೀಡಲು ಮುಂದಾಗಿದ್ದಾರೆ ಎಂಬುದನ್ನು ಕೇಳಬೇಕಾಗಿದೆ. ಅಲ್ಲದೆ ವಿವಾದಾತ್ಮಕ ವ್ಯಕ್ತಿಗಳನ್ನೇ ಈ ಶೋಗೆ ಸ್ಪರ್ಧಿಗಳಾಗಿ ಕರೆದುಕೊಂಡು ಬರಲು ಕಾರಣ ಏನು? ಈ ಶೋ ಯುವಕರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ ಎಂಬೆಲ್ಲ ಪ್ರಶ್ನೆಗಳನ್ನು ಆಯೋಜಕರಿಗೆ ಕೇಳ ಬೇಕಿದೆ. ಈ ಶೋ ಜನರ ನೈತಿಕತೆಯನ್ನು ಹಾಳು ಮಾಡುತ್ತಿದೆ ಅಲ್ಲದೆ ಪರಸ್ಪರರ ವಿರುದ್ಧ ದ್ವೇಷ ಮಾಡಬೇಕೆಂದು, ಕಿತ್ತಾಡಬೇಕೆಂದು ತೋರಿಸಿಕೊಡುತ್ತಿದೆ’ ಎಂದಿದ್ದಾರೆ.

‘ಈ ಶೋ ಭಾರತೀಯ ನ್ಯಾಯ ಸಂಹಿತೆ ಹಾಗೂ ದೇಶದ ಮಾಹಿತಿ ಮತ್ತು ತಂತ್ರಜ್ಞಾನ ಕಾನೂನಿನ ಸ್ಪಷ್ಟ ಉಲ್ಲಂಘನೆ ಮಾಡುತ್ತಿದೆ ಎಂಬುದು ನಮ್ಮ ನಂಬಿಕೆ ಆಗಿದ್ದು ಕೂಡಲೇ ಈ ಕಾರ್ಯಕ್ರಮದ ಪ್ರಸಾರವನ್ನು ನಿಲ್ಲಿಸಬೇಕು ಹಾಗೂ ಈ ಆಯೋಜಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ