
ರಕ್ಷಿತಾ ಶೆಟ್ಟಿ (Rakshita Shetty) ಅವರು ಹೊಸ ಹುರುಪಿನಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮನೆಯನ್ನು ಪ್ರವೇಶಿಸಿದ್ದು ಗೊತ್ತೇ ಇದೆ. ಆದರೆ, ಬಂದ ವೇಗದಲ್ಲೇ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದನ್ನು ನೀವು ಕಾಣಬಹುದು. ಆದರೆ, ಅವರು ಬಿಗ್ ಬಾಸ್ನಿಂದ ಎಲಿಮಿನೇಟ್ ಆಗಿಲ್ಲ ಎಂಬ ಮಾತು ಕೇಳಿ ಬಂದಿದ್ದವು. ಈ ವಿಚಾರವು ಅವರ ಅಭಿಮಾನಿಗಳಿಗೆ ಖುಷಿಯನ್ನು ಕೊಟ್ಟಿತ್ತು. ಆದರೆ, ಅವರು ಬರೋದು ಅನುಮಾನವೇ.
ರಕ್ಷಿತಾ ಶೆಟ್ಟಿ ಅವರು ಆರಂಭದಲ್ಲಿ ಸಾಕಷ್ಟು ಟ್ರೋಲ್ ಆಗಿರಬಹುದು. ಆದರೆ, ಕೆಲವರಿಗೆ ಅವರ ಬಗ್ಗೆ ಒಳ್ಳೆಯ ಭಾವನೆ ಇರುವುದನ್ನು ತಳ್ಳಿ ಹಾಕುವಂತಿಲ್ಲ. ಅವರು ಮುಂಬೈನಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ಮಾತನಾಡುವ ಪ್ರಯತ್ನದಲ್ಲಿ ಇದ್ದಾರೆ. ಈ ವಿಚಾರದಲ್ಲಿ ಅನೇಕರಿಗೆ ಖುಷಿ ಇದೆ. ಹೀಗಿರುವಾಗಲೇ ಅವರು ದೊಡ್ಮನೆಯಿಂದ ಹೊರ ಹೋದರು.
ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿಲ್ಲ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಬಿಗ್ ಬಾಸ್ನಲ್ಲಿ ಈ ಮೊದಲು ಕೂಡ ಈ ರೀತಿಯ ಪ್ರ್ಯಾಂಕ್ಗಳನ್ನು ಮಾಡಲಾಗಿದೆ. ಹೊಸ ಸೀಸನ್ ಆಗಿರುವುದರಿಂದ ಅವರಿಗೆ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಕಲರ್ಸ್ ಕನ್ನಡ ಈ ಬಗ್ಗೆ ಪೋಸ್ಟ್ ಹಾಕಿದೆ. ಅವರು ಎಲಿಮಿನೇಟ್ ಆಗಿದ್ದಾರೆ ಎಂದಿದ್ದಾರೆ.
ರಕ್ಷಿತಾ ಶೆಟ್ಟಿ ಅವರು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ವ್ಯಕ್ತಿ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಹಿಂಬಾಲಕರಿದ್ದಾರೆ. ಹೀಗಾಗಿ, ವೋಟಿಂಗ್ ಏನು ಇಲ್ಲದೆ, ಕೇವಲ ಆರು ಜನರ ನಿರ್ಧಾರದಿಂದ ಅವರನ್ನು ಹೊರಕ್ಕೆ ಕಳುಹಿಸಿದ್ದು ಸರಿ ಅಲ್ಲ ಎಂಬ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: BBK 12: ಬಂದ ದಾರಿಯಲ್ಲೇ ವಾಪಸ್ ಹೋದ ರಕ್ಷಿತಾ ಶೆಟ್ಟಿ: ಬಿಗ್ ಬಾಸ್ ದೊಡ್ಡ ಶಾಕ್
ರಕ್ಷಿತಾ ಶೆಟ್ಟಿ, ಸ್ಪಂದನ ಹಾಗೂ ಮಾಳು ಅವರು ಬಿಗ್ ಬಾಸ್ ಮನೆಯನ್ನು ಒಟ್ಟಿಗೆ ಪ್ರವೇಶಿಸಿದರು. ಈ ಮೂವರಲ್ಲಿ ಇಬ್ಬರು ಜಂಟಿಯಾಗೂ ಒಬ್ಬರು ಒಂಟಿಯಾಗೂ ಶೋನಲ್ಲಿ ಮುಂದುವರಿಯಬೇಕಿತ್ತು. ಹೀಗಾಗಿ, ಒಬ್ಬರನ್ನು ಮನೆಯಿಂದ ಹೊರಕ್ಕೆ ಕಳುಹಿಸಿ ಎಂದು ಬಿಗ್ ಬಾಸ್ ಆದೇಶಿಸಿದರು. ಈ ಆದೇಶದಂತೆ ಮನೆಯ ಒಂಟಿಗಳೇ ನಿರ್ಧರಿಸಿ ಒಬ್ಬರನ್ನು ಹೊರಕ್ಕೆ ಕಳುಹಿಸಲಾಗಿದೆ. ಇದು ಸರಿ ಅಲ್ಲ ಎನ್ನುವ ಮಾತನ್ನು ಅನೇಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.