ಹಳಿ ತಪ್ಪಿತು ರಕ್ಷಿತಾ ಶೆಟ್ಟಿ ಆಟ; ಶುರುವಾಯ್ತು ಚೀಪ್ ಗಿಮಿಕ್?

ಬಿಗ್ ಬಾಸ್ ರಕ್ಷಿತಾ ಶೆಟ್ಟಿ ಆಟದಲ್ಲಿ ಬದಲಾವಣೆ ಕಂಡುಬಂದಿದೆ. ಆರಂಭದಲ್ಲಿ ಸಿಂಪತಿ ಗಳಿಸಿದ್ದ ರಕ್ಷಿತಾಗೆ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು. ಆದರೆ, ಈಗ ಅವರ ಆಟ ಸಂಪೂರ್ಣ ಹಳಿ ತಪ್ಪಿದೆ. ಮಾಳುಗೆ ಬೆಂಬಲ ನೀಡಿದ ರೀತಿ, ವಿಚಿತ್ರ ನಾಮಿನೇಷನ್ ತಂತ್ರದಿಂದ ರಕ್ಷಿತಾ ಟೀಕೆಗೆ ಗುರಿಯಾಗಿದ್ದಾರೆ. ಇದು ಅವರ ಬಿಗ್ ಬಾಸ್ ಪಯಣಕ್ಕೆ ಮುಳುವಾಗಬಹುದು.

ಹಳಿ ತಪ್ಪಿತು ರಕ್ಷಿತಾ ಶೆಟ್ಟಿ ಆಟ; ಶುರುವಾಯ್ತು ಚೀಪ್ ಗಿಮಿಕ್?
ರಕ್ಷಿತಾ ಶೆಟ್ಟಿ

Updated on: Dec 02, 2025 | 6:59 AM

ಬಿಗ್ ಬಾಸ್ (Bigg Boss) ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರು ಆರಂಭದಲ್ಲಿ ಎಲ್ಲರಿಗೂ ಇಷ್ಟ ಆಗಿದ್ದರು. ಅವರ ಮೇಲೆ ಎಲ್ಲರೂ ಮುಗಿಬಿದ್ದಾಗ ಅವರಿಗೆ ಸಿಂಪತಿ ಸಿಕ್ಕಿತ್ತು. ಹೀಗಾಗಿ ಅವರು ಸಾಕಷ್ಟು ವೋಟ್​ಗಳನ್ನು ಪಡೆದರು. ಗಿಲ್ಲಿ ಕೂಡ ರಕ್ಷಿತಾ ಬೆಂಬಲಕ್ಕೆ ನಿಂತರು. ಆದರೆ, ಕಳೆದ ವಾರದಿಂದ ರಕ್ಷಿತಾ ಆಟ ಹಳಿ ತಪ್ಪಿದೆ. ಈ ವಾರ ಅದು ಮತ್ತೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಕಿಚ್ಚನ ಚಪ್ಪಾಳೆಯೇ ರಕ್ಷಿತಾಗೆ ಭಾರವಾಯಿತೇ ಎನ್ನುವ ಪ್ರಶ್ನೆ ಮೂಡಿದೆ.

ರಕ್ಷಿತಾ ಶೆಟ್ಟಿ ಅವರು ಕೆಲ ವಾರಗಳ ಹಿಂದೆ ಸುದೀಪ್ ಅವರಿಂದ ಕ್ಲಾಸ್ ತೆಗೆದುಕೊಂಡಿದ್ದರು. ಇದಕ್ಕೆ ಕಾರಣ ಅವರು ರಘುವನ್ನು ನಾಮಿನೇಟ್ ಮಾಡುವಾಗ ತೆಗೆದುಕೊಂಡ ಕಾರಣ. ಆ ವಾರ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಬಳಿಕ ರಕ್ಷಿತಾ ಬದಲಾದರು. ನಂತರದ ವಾರ ಸಂಪೂರ್ಣವಾಗಿ ಸೈಲೆಂಟ್ ಆದರು. ಆ ವಾರ ಯೋಚಿಸಿ ಅವರು ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಈ ಕಾರಣದಿಂದಲೇ ಅವರಿಗೆ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿತ್ತು.

ಆದರೆ, ಈ ವಾರ ಅವರ ಆಟ ಆಡುವ ಶೈಲಿ, ಮಾತನಾಡುವ ರೀತಿ ಸಂಪೂರ್ಣವಾಗಿ ಬದಲಾಗಿದೆ. 1ರಿಂದ 11ರವರೆಗೆ ಸಂಖ್ಯೆ ನೀಡಿ ಪ್ರತಿ ಸ್ಪರ್ಧಿಯನ್ನು ಅವರವರ ಆಟಕ್ಕೆ ಅನುಸಾರವಾಗಿ ಒಂದು ಸಂಖ್ಯೆಯನ್ನು ಕ್ಯಾಪ್ಟನ್ ಧನುಷ್ ನೀಡಬೇಕಿತ್ತು. ರಕ್ಷಿತಾಗೆ ನಾಲ್ಕನೇ ಸ್​ಥಾನ ಸಿಕ್ಕರೆ ಮಾಳುಗೆ 11ನೇ ಸ್ಥಾನ ಸಿಕ್ಕಿತ್ತು. ರಕ್ಷಿತಾ ಅವರು ತಾವು ಒಂದು ಅಥವಾ ಎರಡನೇ ಸ್ಥಾನ ಪಡೆಯಬೇಕು ಎಂದು ಆಲೋಚಿಸುವ ಬದಲು ಮಾಳುಗೆ 11ನೇ ಸ್ಥಾನ ನೀಡಿದ್ದು ಏಕೆ ಎಂದು ಪ್ರಶ್ನೆ ಮಾಡಲು ಆರಂಭಿಸಿದರು.

‘ಮಾಳು ಅಣ್ಣ 3,4 ಅಥವಾ 5ನೇ ಸ್ಥಾನಕ್ಕೆ ಅರ್ಹರಾಗಿದ್ದರು. ಅವರನ್ನು 11ನೇ ಸ್ಥಾನದಲ್ಲಿ ನಿಲ್ಲಿಸಿದ್ದು ಸರಿಯಲ್ಲ’ ಎಂದು ವಾದಿಸಿದರು. ಇದು ಎಲ್ಲರಿಗೂ ವಿಚಿತ್ರ ಎನಿಸಿದೆ. ಬಿಗ್ ಬಾಸ್​ನಲ್ಲಿ ತಮಗಾಗಿ ಹೋರಾಡಬೇಕು. ಆದರೆ, ಮಾಳುಗೋಸ್ಕರ ಅವರು ಯಾಕೆ ಸ್ಟ್ಯಾಂಡ್ ತೆಗೆದುಕೊಂಡರು ಎಂಬುದು ಎಲ್ಲರ ಪ್ರಶ್ನೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ ಶೆಟ್ಟಿ

ಇಷ್ಟಕ್ಕೆ ನಿಲ್ಲಲಿಲ್ಲ. ನಾಮಿನೇಷನ್ ಸಂದರ್ಭದಲ್ಲಿ ಎಲ್ಲರಿಗೂ ಬೆನ್ನಿಗೆ ಬೆಂಡಿನ ಬಾಕ್ಸ್ ನೀಡಿದ್ದರು. ಇದಕ್ಕೆ ಚಾಕು ಚುಚ್ಚಿಕೊಂಡಿರುತ್ತದೆ. ನಾಮಿನೇಷನ್ ಮಾಡುವಾಗ ಚಾಕು ತೆಗೆದು ಬೇರೆಯವರ ಬೆನ್ನಿನ ಬಾಕ್ಸ್​ಗೆ ಚುಚ್ಚಬೇಕು. ಯಾರ ಬಳಿ ಕಡಿಮೆ ಚಾಕು ಇರುತ್ತದೆಯೋ ಅವರು ನಾಮಿನೇಷನ್​ನಿಂದ ಬಚಾವ್ ಆಗುತ್ತಾರೆ. ಈ ವೇಳೆ ರಕ್ಷಿತಾ ಅವರು ತಮ್ಮ ಬೆನ್ನಿನ ಚಾಕುವನ್ನು ಬೇರೆಯವರಿಗೆ ಚುಚ್ಚುವ ಬದಲು ಮಾಳು ಅವರ ಬೆನ್ನಿನ ಚಾಕುವನ್ನು ತೆಗೆದು ಚುಚ್ಚೋಕೆ ಆರಂಭಿಸಿದರು. ಆಪ್ತರು ಎನಿಸಿಕೊಂಡಿದ್ದ ಗಿಲ್ಲಿ ಹಾಗೂ ಕಾವ್ಯಾ ಅವರನ್ನು ರಕ್ಷಿತಾ ನಾಮಿನೇಟ್ ಮಾಡಿದ್ದಾರೆ. ‘ನಿನ್ನದು ಚೀಪ್ ಗಿಮಿಕ್’ ಎಂದು ರಕ್ಷಿತಾ ಮೇಲೆ ಕಾವ್ಯಾ ಕಿಡಿಕಾರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.