ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಅವರನ್ನೇ ಕನ್​​ಫ್ಯೂಸ್ ಮಾಡಿದ ರಕ್ಷಿತಾ ಶೆಟ್ಟಿ

ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಕನ್ನಡ 12 ಮನೆಗೆ ಪ್ರವೇಶಿಸಿದ್ದಾರೆ. ಕನ್ನಡ ಮಾತನಾಡಲು ಹೆಣಗಾಡಿದರು. ಇದರಿಂದ ಸುದೀಪ್ ಎದುರು ವೇದಿಕೆಯಲ್ಲಿ ಭಾರಿ ಗೊಂದಲಕ್ಕೊಳಗಾದರು. ಮುಂಬೈನಲ್ಲಿ ಹುಟ್ಟಿ ಬೆಳೆದು, ಯೂಟ್ಯೂಬರ್ ಆಗಿ ಗುರುತಿಸಿಕೊಂಡಿರುವ ಅವರು, ತಮ್ಮ ಅರೆಬರೆ ಕನ್ನಡದಿಂದ ಸುದೀಪ್ ಅವರನ್ನೂ ಕನ್ಫ್ಯೂಸ್ ಮಾಡಿದರು.

ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಅವರನ್ನೇ ಕನ್​​ಫ್ಯೂಸ್ ಮಾಡಿದ ರಕ್ಷಿತಾ ಶೆಟ್ಟಿ
ಸುದೀಪ್-ರಕ್ಷಿತ್

Updated on: Sep 29, 2025 | 1:23 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಆರಂಭ ಆಗಿದೆ. 19 ಸ್ಪರ್ಧಿಗಳು ಬಿಗ್ ಬಾಸ್ ಮನೆ ಒಳಗೆ ಹೋಗಿದ್ದಾರೆ. ಅಲ್ಲಿಯ ಸೆಟಪ್ ನೋಡಿ ಎಲ್ಲರೂ ಅಚ್ಚರಿಗೊಂಡರು. ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಅವರನ್ನು ನೋಡಿ ಖುಷಿಪಟ್ಟರು. ಅದೇ ರೀತಿ ಮಂಗಳೂರು ಮೂಲದ ರಕ್ಷಿತಾ ಶೆಟ್ಟಿ ಕೂಡ ಸುದೀಪ್ ಅವರನ್ನು ನೋಡಿ ಸಾಕಷ್ಟು ಭಯಗೊಂಡರು. ಈ ವೇಳೆ ಅವರ ಕೈ ನಡುಗುತ್ತಾ ಇತ್ತು. ಅವರು ತಾವು ಕನ್​ಫ್ಯೂಸ್ ಆಗುವುದು ಅಲ್ಲದೆ, ಸುದೀಪ್ ಅವರನ್ನೂ ಕನ್​ಫ್ಯೂಸ್ ಮಾಡಿದರು.

ರಕ್ಷಿತಾ ಶೆಟ್ಟಿ ಅವರು ಮಂಗಳೂರು ಮೂಲದವರು. ಅವರು ಮುಂಬೈನಲ್ಲಿ ಹುಟ್ಟಿ ಬೆಳೆದವರು. ಅವರಿಗೆ ಕನ್ನಡ ಅಷ್ಟು ಸ್ಪಷ್ಟವಾಗಿ ಮಾತನಾಡೋಕೆ ಬರಲ್ಲ. ತಮ್ಮ ಅರೆಬರೆ ಕನ್ನಡದಲ್ಲೇ ಅವರು ಕುಕಿಂಗ್ ವಿಡಿಯೋ ಮಾಡುತ್ತಿದ್ದರು. ಈ ಕಾರಣಕ್ಕೆ ಅವರು ಟ್ರೋಲ್ ಆಗಿದ್ದರು. ಆದರೆ, ಈಗ ಅವರು ಬಿಗ್ ಬಾಸ್​ ಸ್ಪರ್ಧಿಯಾಗುವ ಅವಕಾಶ ಪಡೆದಿದ್ದಾರೆ.

ಬಿಗ್ ಬಾಸ್ ವೇದಿಕೆ ಏರಿ ಸುದೀಪ್ ಎದುರು ನಿಂತಾಗ ಅವರಿಗೆ ಏನು ಮಾತನಾಡಬೇಕು ಎಂಬುದೇ ಗೊತ್ತಾಗುತ್ತಾ ಇರಲಿಲ್ಲ. ಅವರು ಭಯದಲ್ಲೇ ಏನೇನೋ ಮಾತನಾಡಿದರು. ‘ಏಡಿ ತಿಂತೀರಾ’ ಎಂದು ಸುದೀಪ್ ಕೇಳಿದರು. ‘ಹೌದು ತಿಂತೇನೆ’ ಎಂದರು. ‘ಇಲ್ಲಿ ಏಡಿ ಕೊಡೋಕೆ ಆಗಲ್ಲ’ ಎಂದು ಸುದೀಪ್ ಹೇಳಿದರು.

ಇದನ್ನೂ ಓದಿ
ನಾನು ಬಾಲ್ಯದಲ್ಲಿ ಕುಂದಾಪುರದ ಬಗ್ಗೆ ಕೇಳಿದ ಕಥೆ ಸಿನಿಮಾ ಆಗಿದೆ; JR NTR
‘ಇನ್ಮುಂದೆ ಈ ರೀತಿಯ ವಿಡಿಯೋ ಬರಲ್ಲ’ ಎಂದ ಮಮ್ಮಿ ಅಶೋಕ್
‘ಬಿಗ್ ಬಾಸ್’ ಮನೆ ಪ್ರವೇಶಿಸಿದ ಎಲ್ಲಾ ಸ್ಪರ್ಧಿಗಳ ಫೋಟೋ, ಹೆಸರು, ವಿವರ
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

‘ನಾನು ರಕ್ಷಿತಾ ಶೆಟ್ಟಿ, ಹುಟ್ಟಿದ್ದು ಬೆಳೆದಿದ್ದು ಮುಂಬೈಲ್ಲಿ, ಶಾಲಾ-ಕಾಲೇಜ್ ಓದಿದ್ದು ಮುಂಬೈನಲ್ಲಿ. ಶಾಲಾ ಕಾಲೇಜು ಆದ್ಮೇಲೆ ಉಡುಪಿಗೆ ಬಂದೆ. ಶಾಲೆ-ಕಾಲೇಜು ಸಮಯದಲ್ಲಿ ರಜೆ ಸಿಕ್ಕಾಗ ಬರುತ್ತಿದೆ. ಕಾಲೇಜು ಮುಗಿದ ಬಳಿಕ ನಾನು ಸಂಪುರ್ಣವಾಗಿ ಅಜ್ಜಿ ಮನೆಗೆ ಶಿಫ್ಟ್ ಆದೆ. ಕೊರೊನಾ ಬಳಿಕ ಯೂಟ್ಯೂಬ್​ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡೆ’ ಎಂದರು. ಇದು ಸುದೀಪ್​ಗೆ ಸರಿಯಾಗಿ ಅರ್ಥ ಆಯಿತು.

ಇದನ್ನೂ ಓದಿ: ‘ಬಿಗ್ ಬಾಸ್’ ಮನೆ ಪ್ರವೇಶಿಸಿದ 19 ಸ್ಪರ್ಧಿಗಳ ಫೋಟೋ, ಹೆಸರು, ವಿವರ ಇಲ್ಲಿದೆ

‘ಕೊರೊನಾ ಟೈಮ್​ನಲ್ಲಿ ಮೂರು ತಿಂಗಳು ಊರಿಗೆ ಹೋಗಿ ಬಂದಿದೀವಿ’ ಎಂದರು ರಕ್ಷಿತಾ. ‘ಉಡುಪಿ ಹೋಗಿ ಮುಂಬೈಗೆ ಬಂದಿದೀವಿ’ ಎಂದರು ರಕ್ಷಿತಾ. ಇದೆಲ್ಲ ಕೇಳಿ ಸುದೀಪ್ ಸಖತ್ ಕನ್​ಫ್ಯೂಸ್ ಆದರು. ಆ ಬಳಿಕ ಅವರು ಹೇಳಿದ ಒಂದಷ್ಟು ವಿಚಾರವನ್ನು ಹೇಗೋ ಅರ್ಥ ಮಾಡಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.