ಟಾಯ್ಲೆಟ್ ಅಲ್ಲೇ ಗಂಟೆಗಟ್ಟಲೆ ನಿದ್ದೆ; ರಕ್ಷಿತಾಗೆ ಬಿಗ್ ಬಾಸ್ ಎಚ್ಚರಿಕೆ

ಬಿಗ್ ಬಾಸ್ ಮನೆಯ ನಿಯಮಗಳನ್ನು ಮೀರಿ ರಕ್ಷಿತಾ ಶೆಟ್ಟಿ ಶೌಚಾಲಯ ಮತ್ತು ಚೇಂಜಿಂಗ್ ರೂಂಗಳಲ್ಲಿ ನಿದ್ರಿಸುತ್ತಿದ್ದರು. ಹಲವು ಬಾರಿ ಅನುಮಾನದ ಬಳಿಕ ಬಿಗ್ ಬಾಸ್ ಎಚ್ಚರಿಕೆ ನೀಡಿದ್ದಾರೆ. ಮೊದಲು ನಿರಾಕರಿಸಿದ ರಕ್ಷಿತಾ ನಂತರ ತಮ್ಮ ನಿದ್ದೆ ತಂತ್ರವನ್ನು ಒಪ್ಪಿಕೊಂಡಿದ್ದಾರೆ. ನಿದ್ರೆ ಮಾಡಿದ ತಪ್ಪಿಗೆ ಕ್ಯಾಪ್ಟನ್ ಧನುಷ್ ಅವರಿಂದ ಶಿಕ್ಷೆಗೂ ಒಳಗಾಗಿದ್ದಾರೆ.

ಟಾಯ್ಲೆಟ್ ಅಲ್ಲೇ ಗಂಟೆಗಟ್ಟಲೆ ನಿದ್ದೆ; ರಕ್ಷಿತಾಗೆ ಬಿಗ್ ಬಾಸ್ ಎಚ್ಚರಿಕೆ
ರಕ್ಷಿತಾ

Updated on: Dec 04, 2025 | 7:24 AM

ಬಿಗ್ ಬಾಸ್ (Bigg Boss) ಮನೆಯಲ್ಲಿ ಕೆಲವು ಕಠಿಣ ನಿಯಮಗಳಿವೆ. ಯಾರೂ ಪಿಸುಧ್ವನಿಯಲ್ಲಿ ಮಾತನಾಡುವಂತೆ ಇಲ್ಲ. ಅಷ್ಟೇ ಅಲ್ಲ, ಲೈಟ್ಸ್ ಆಫ್ ಆಗುವ ಮೊದಲು ನಿದ್ರಿಸುವಂತೆ ಇಲ್ಲ. ಆದಾಗ್ಯೂ ಕೆಲವು ಸ್ಪರ್ಧಿಗಳು ನಿಯಮ ಮೀರಿ ಕಣ್ಮುಚ್ಚಿದಾಗ ಬಿಗ್ ಬಾಸ್ ಎಚ್ಚರಿಸುತ್ತಾರೆ. ಈಗ ರಕ್ಷಿತಾ ಶೆಟ್ಟಿ ಅವರು ಇದಕ್ಕೆ ಹೊಸ ತಂತ್ರ ಕಂಡು ಹಿಡಿದುಕೊಂಡಿದ್ದಾರೆ. ಬಾತ್​ರೂಂ, ಟಾಯ್ಲೆಟ್ ಹೋಗಿ ಅಲ್ಲಿಯೇ ನಿದ್ರೆ ಮಾಡುತ್ತಿದ್ದಾರೆ. ಇದಕ್ಕೆ ಬಿಗ್ ಬಾಸ್ ಎಚ್ಚರಿಕೆ ನೀಡಿದ್ದಾರೆ.

ರಕ್ಷಿತಾ ಶೆಟ್ಟಿ ಅವರು ರಾತ್ರಿಯೆಲ್ಲ ಸರಿಯಾಗಿ ನಿದ್ರಿಸೋದಿಲ್ಲ ಎಂಬ ಆರೋಪ ಇದೆ. ಹೀಗಾಗಿಯೇ ಅವರು ಹಗಲಲ್ಲಿ ನಿದ್ದೆ ಮಾಡುತ್ತಾರೆ. ಈ ಮೊದಲು ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ಚರ್ಚೆ ಆಗಿದ್ದು ಇದೆ. ‘ರಕ್ಷಿತಾ ಹಗಲಲ್ಲಿ ನಿದ್ದೆ ಮಾಡುತ್ತಾರೆ’ ಎಂದು ಕೆಲವರು ಆರೋಪ ಮಾಡಿದ್ದಾರೆ. ಈಗ ಅವರು ಬಿಗ್ ಬಾಸ್ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ.

ಮೊದಲು ಡ್ರೆಸ್ ಚೇಂಜ್ ಮಾಡೋ ನೆಪದಲ್ಲಿ ಚೇಂಜಿಂಗ್​​ ರೂಂಗೆ ಹೋದರು. ಅಲ್ಲಿ ಅವರು ಕೆಲವು ಹೊತ್ತು ನಿದ್ದೆ ಮಾಡಿದಂತೆ ಇದೆ. ಈ ಬಗ್ಗೆ ಗಿಲ್ಲಿ ನಟನಿಗೆ ಅನುಮಾನ ಬಂದಿದೆ. ಅವರು ಈ ಬಗ್ಗೆ ಕೇಳಿದಾಗ ರಕ್ಷಿತಾ ಅವರು ‘ನಾನು ಬಟ್ಟೆ ಚೇಂಜ್ ಮಾಡೋಕೆ ಹೋಗಿದ್ದು’ ಎಂದು ಹೇಳಿದ್ದಾರೆ. ‘ಬಟ್ಟೆ ಚೇಂಜ್ ಮಾಡೋಕೆ ಒಂದು ತಾಸು ಬೇಕಾ’ ಎಂಬುದು ಗಿಲ್ಲಿ ಪ್ರಶ್ನೆ. ‘ಚೇಂಜಿಂಗ್ ರೂಂಗೆ ಹೋಗಿ ಅಲ್ಲಿಯೇ ಅವರು ನಿದ್ದೆ ಮಾಡುತ್ತಾರೆ’ ಎಂದು ಗಿಲ್ಲಿ ಹೇಳಿದರು.

ನಂತರ ಟಾಯ್ಲೆಟ್​ಗೆ ಹೋಗಿ ಅಲ್ಲಿ ಅವರು ನಿದ್ದೆ ಮಾಡಿದ್ದಾರೆ. ಎಷ್ಟು ಹೊತ್ತಾದರೂ ಅವರು ಬರದೇ ಇದ್ದಿದ್ದು ನೋಡಿ, ನಾಯಿ ಬೊಗಳೋ ಸೌಂಡ್ ಹಾಕಿದ ಬಿಗ್ ಬಾಸ್​, ‘ರಕ್ಷಿತಾ’ ಎಂದು ಎಚ್ಚರಿಸಿದರು.ಆಗ ರಕ್ಷಿತಾ ಟಾಯ್ಲೆಟ್​ನಿಂದ ಹೊರ ಬಂದಿದ್ದಾರೆ.

ಇದನ್ನೂ ಓದಿ: ಎಲ್ಲರೂ ಮೆಚ್ಚುವ ಕೆಲಸ ಮಾಡಿದ ಧ್ರುವಂತ್; ಈ ವಾರ ಕಿಚ್ಚನ ಚಪ್ಪಾಳೆ ಫಿಕ್ಸ್?

‘ನಾನು ನಿದ್ದೆ ಮಾಡಿರಲಿಲ್ಲ’ ಎಂದು ಸಾಧಿಸಲು ಬಂದರು. ಆದರೆ, ನಿದ್ದೆ ಮಾಡಿದ ತಪ್ಪಿಗೆ ಮನೆಯ ಕ್ಯಾಪ್ಟನ್ ಧನುಷ್, ಶಿಕ್ಷೆಯಾಗಿ ರಕ್ಷಿತಾಗೆ ಸ್ವಿಮ್ಮಿಂಗ್​ಪೂಲ್​ಗೆ ಇಳಿಸಿದರು. ನಂತರ ರಕ್ಷಿತಾ ಅವರು ಸೂರಜ್ ಬಳಿ ತಾವು ನಿದ್ದೆ ಮಾಡಿದ ವಿಚಾರವನ್ನು ಒಪ್ಪಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.