ಜೀ ಕನ್ನಡದ ಹೊಸ ಧಾರಾವಾಹಿಗೆ ಬೆಂಬಲಕೊಟ್ಟ ರಿಷಬ್ ಶೆಟ್ಟಿ; ಕಾರಣ ಏನು?
‘ಅಣ್ಣಯ್ಯ’ ಧಾರಾವಾಹಿಯ ಪ್ರಸಾರ ದಿನಾಂಕವನ್ನು ಜೀ ಕನ್ನಡ ವಾಹಿನಿ ರಿವೀಲ್ ಮಾಡಿದೆ. ಈ ಧಾರಾವಾಹಿ ಆಗಸ್ಟ್ 12ರಿಂದ ಪ್ರತಿ ದಿನ ಸಂಜೆ 7:30ಕ್ಕೆ ಪ್ರಸಾರ ಕಾಣಲಿದೆ. ಸೋಮವಾರದಿಂದ-ಶುಕ್ರವಾರದವರೆಗೆ ಈ ಧಾರಾವಾಹಿ ಪ್ರಸಾರ ಕಾಣಲಿದೆ. ಸದ್ಯ ಈ ಅವಧಿಯಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಈ ಸಮಯದಲ್ಲಿ ಪ್ರಸಾರ ಕಾಣುತ್ತಿದೆ.
ಜೀ ಕನ್ನಡದಲ್ಲಿ ಇಂದಿನಿಂದ (ಆಗಸ್ಟ್ 12) ಹೊಸ ಧಾರಾವಾಹಿ ‘ಅಣ್ಣಯ್ಯ’ ಪ್ರಸಾರ ಕಾಣುತ್ತಿದೆ. ಅಣ್ಣ-ತಂಗಿಯ ಕಥೆಯನ್ನು ಇದು ಒಳಗೊಂಡಿದೆ. ನಾಲ್ಕೂ ತಂಗಿಯರ ಮದುವೆ ಮಾಡಬೇಕು ಎಂದು ಕಥಾ ನಾಯಕ ಅಂದುಕೊಂಡಿರುತ್ತಾರೆ. ಈ ರೀತಿಯಲ್ಲಿ ಧಾರಾವಾಹಿ ಕಥೆ ಇದೆ. ಈ ಧಾರಾವಾಹಿಗೆ ರಿಷಬ್ ಶೆಟ್ಟಿ ಬೆಂಬಲ ಸೂಚಿಸಿದ್ದಾರೆ. ಅವರು ಇದಕ್ಕೆ ಬೆಂಬಲವಾಗಿ ನಿಲ್ಲುವುದಕ್ಕೂ ಒಂದು ಕಾರಣ ಇದೆ.
‘ಅಣ್ಣಯ್ಯ’ ಧಾರಾವಾಹಿಯನ್ನು ರಿಷಬ್ ಗೆಳೆಯ ಪ್ರಮೋದ್ ಶೆಟ್ಟಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಧಾರಾವಾಹಿ ನಿರ್ಮಾಣದಲ್ಲಿ ಅವರಿಗೆ ಇದು ಮೊದಲ ಅನುಭವ. ಈ ಕಾರಣದಿಂದಲೇ ರಿಷಬ್ ಅವರು ಗೆಳೆಯನ ಧಾರಾವಾಹಿಗೆ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ವಿಶೇಷ ಪೋಸ್ಟ್ ಕೂಡ ಹಾಕಿದ್ದಾರೆ. ಅವರು ಧಾರಾವಾಹಿ ನೋಡುವಂತೆ ಕೋರಿದ್ದಾರೆ.
‘ನಾನು ನಿಮಗೆ ಒಂದು ಕಥೆ ಹೇಳೋಣ ಎಂದು ಬಂದೆ. ನಮ್ಮ ಶಿವಣ್ಣಂದು. ಕಾಡು ಬೆಟ್ಟದ ಶಿವಣ್ಣ (ಕಾಂತಾರ ಕಥಾ ನಾಯಕನ ಪಾತ್ರ) ಅಲ್ಲ. ಮಾರಿಗುಡಿ ಶಿವಣ್ಣಂದು. ಇವನು ಹ್ಯಾಟ್ರಿಕ್ ಹೀರೋ ಶಿವಣ್ಣನ ರೀತಿಯೇ. ತಂಗಿ ಅಂದ್ರೆ ಪ್ರೀತಿ. ನಾಲ್ಕು ತಂಗಿಯರ ಬದುಕು ಚಂದ ಆಗಬೇಕು ಅನ್ನೋದೆ ಅವನ ದೊಡ್ಡ ಕನಸು. ಶಿವಣ್ಣನ ಕಥೆ ಇಷ್ಟೇ ಅಲ್ಲ, ಭಾರಿ ಉಂಟು. ನೋಡಿ ಮರ್ರೆ’ ಎಂದು ರಿಷಬ್ ಶೆಟ್ಟಿ ಕೋರಿದ್ದಾರೆ.
View this post on Instagram
‘ಅಣ್ಣಯ್ಯ’ ಧಾರಾವಾಹಿ ಸೋಮವಾರದಿಂದ ಶುಕ್ರವಾರವರೆಗೆ ಪ್ರತಿ ದಿನ ಸಂಜೆ 7:30ಕ್ಕೆ ಪ್ರಸಾರ ಕಾಣಲಿದೆ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಈ ಸಮಯದಲ್ಲಿ ಪ್ರಸಾರ ಕಾಣುತ್ತಿತ್ತು. ಇದಕ್ಕೆ ಈಗ 6:30ರ ಸ್ಲಾಟ್ ನೀಡಲಾಗಿದೆ.
ಇದನ್ನೂ ಓದಿ: ‘ಅಣ್ಣಯ್ಯ’ ಮೂಲಕ ಮತ್ತೆ ಕಿರುತೆರೆ ಪ್ರೇಕ್ಷಕರ ಎದುರು ರೌಡಿ ಬೇಬಿ; ಇಲ್ಲಿದೆ ಪ್ರಸಾರ ದಿನಾಂಕ, ಸಮಯ
‘ಅಣ್ಣಯ್ಯ’ ಧಾರಾವಾಹಿಯನ್ನು ಪ್ರಮೋದ್ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ಉತ್ತಮ್ ಮಧು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ವಿಕಾಸ್ ಉತ್ತಯ್ಯ ಹಾಗೂ ನಿಶಾ ಅವರು ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಿಶಾ ಅವರನ್ನು ಮತ್ತೊಮ್ಮೆ ತೆರೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.