ಸಣ್ಣ ವಯಸ್ಸಲ್ಲೇ ರಿತೂ ಸಿಂಗ್​ಗೆ ಅದೆಂಥಾ ಜವಾಬ್ದಾರಿ; ಓದಿನ ಜೊತೆ ಮನೆ ನಡೆಸ್ತಾಳೆ

| Updated By: ರಾಜೇಶ್ ದುಗ್ಗುಮನೆ

Updated on: Oct 27, 2024 | 6:30 AM

ರಿತೂ ಸಿಂಗ್, 'ಸೀತಾ ರಾಮ' ಧಾರಾವಾಹಿಯಲ್ಲಿ ಸಿಹಿ ಪಾತ್ರದ ಮೂಲಕ ಜನಪ್ರಿಯಳಾಗಿದ್ದಾಳೆ. 'ಡ್ರಾಮಾ ಜೂನಿಯರ್ಸ್'ನಿಂದ ತಮ್ಮ ವೃತ್ತಿಜೀವನ ಆರಂಭಿಸಿದ ಅವಳು, ಸಣ್ಣ ವಯಸ್ಸಿನಲ್ಲೇ ನಟನೆಯ ಜೊತೆಗೆ ಕುಟುಂಬದ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾಳೆ.

ಸಣ್ಣ ವಯಸ್ಸಲ್ಲೇ ರಿತೂ ಸಿಂಗ್​ಗೆ ಅದೆಂಥಾ ಜವಾಬ್ದಾರಿ; ಓದಿನ ಜೊತೆ ಮನೆ ನಡೆಸ್ತಾಳೆ
ರಿತೂ ಸಿಂಗ್
Follow us on

ರಿತೂ ಸಿಂಗ್ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಸೀತಾ ರಾಮ’ ಧಾರಾವಾಹಿಯಲ್ಲಿ ಸಿಹಿ ಪಾತ್ರ ಮಾಡಿ ಅದರ ಮೂಲಕ ಗಮನ ಸೆಳೆಯುತ್ತಿದ್ದಾಳೆ. ಅವಳು ಸಣ್ಣ ವಯಸ್ಸಿನಲ್ಲೇ ಸಾಕಷ್ಟು ಪ್ರಬುದ್ಧವಾಗಿ ನಟಿಸುತ್ತಿದ್ದಾಳೆ. ಅವಳ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಆಕೆ ಎಲ್ಲರಿಗೂ ಮಾದರಿ. ರಿತೂ ಸಿಂಗ್ ಬೇರೆ ಕಡೆಯಿಂದ ಬಂದು ಕರ್ನಾಟಕದಲ್ಲಿ ನೆಲೆ ಕಂಡುಕೊಂಡವಳು. ಅವಳು ಮಾಡಿದ ಸಾಧನೆ ತುಂಬಾ ದೊಡ್ಡದು. ಏನು ಇಲ್ಲದೆ ಸಾಧನೆ ಮಾಡಿದ ಅವಳ ಹಿನ್ನೆಲೆ ಬಗ್ಗೆ ಇಲ್ಲಿದೆ ವಿವರ.

‘ಸಿಹಿ ಮೊದಲು ಬೆಂಗಳೂರಿಗೆ ಬಂದಾಗ ಮನೆ ಇರಲಿಲ್ಲ, ಕೈಯಲ್ಲಿ ದುಡ್ಡು ಇರಲಿಲ್ಲ. ಜೀವನ ಹೇಗಪ್ಪ ಎನ್ನುವ ಪ್ರಶ್ನೆ ಎದುರಾಗುತ್ತಾರೆ. ಮೆಜೆಸ್ಟಿಕ್​ನಲ್ಲಿ ಕುಟುಂಬದ ಜೊತೆ ಸುತ್ತಾಡುತ್ತಾರೆ. ಈ ಮನೆಯಲ್ಲಿ ಬೆಳಕು ಬರುತ್ತದೆ. ಅದುವೇ ಸಿಹಿ’ ಎಂದು ಅಕುಲ್ ಬಾಲಾಜಿ ಅವರು ರಿತೂ ಸಿಂಗ್ ಬಗ್ಗೆ ಹೇಳಿದ್ದರು.

‘ರಿತೂಗೆ ಅವಕಾಶ ಸಿಕ್ಕಮೇಲೆ ಅವರ ಜೀವನ ಬದಲಾಗುತ್ತದೆ. ಅವರಿಗೆ ಧೈರ್ಯ ಸಿಗುತ್ತದೆ. ಅವಳೇ ಸಿಹಿ. ಈ ಧೈರ್ಯ ಮನೆ ನೋಡಿಕೊಳ್ಳುತ್ತದೆ. ನಾನು ಹೃದಯದಿಂದ ಹೇಳುತ್ತಿದ್ದೇನೆ. ಇವರು ಆ ಮನೆಯ ತಾಯಿ’ ಎಂದು ಹೇಳುತ್ತಿದ್ದಂತೆ ಸಿಹಿ ಹಾಗೂ ಸಿಹಿ ತಾಯಿ ಇಬ್ಬರೂ ಕಣ್ಣೀರು ಹಾಕಲು ಆರಂಭಿಸಿದರು.


‘ಡ್ರಾಮಾ ಜೂನಿಯರ್ಸ್’ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದಳು ಸಿಹಿ. ಅವಳ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡರು. ‘ಡ್ರಾಮಾ ಜೂನಿಯರ್ಸ್​’ ನಟನೆ ನೋಡಿ ಅವರಿಗೆ ‘ಸೀತಾ ರಾಮ’ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತ್ತು. ಈ ಅವಕಾಶವನ್ನು ಅವರು ಸರಿಯಾಗಿ ಬಳಕೆ ಮಾಡಿಕೊಂಡಳು. ಇದರಿಂದ ಅವರ ಖ್ಯಾತಿ ಹೆಚ್ಚಾಗಿದೆ. ಈಗ ಸಿಹಿ ಎಂದೇ ಅವಳು ಫೇಮಸ್ ಆಗಿದ್ದಾಳೆ ಎನ್ನಬಹುದು.

ಇದನ್ನೂ ಓದಿ: ಐಫಾ ವೇದಿಕೆಯಲ್ಲಿ ವಿಕ್ಕಿ ಕೌಶಲ್ ಜತೆ ಅಕುಲ್ ಬಾಲಾಜಿ ‘ತೋಬಾ ತೋಬಾ’ ಡ್ಯಾನ್ಸ್

ಸದ್ಯ ಸಿಹಿ ಪಾತ್ರವೇನಾದರೂ ಕೊನೆ ಆಯಿತೇ ಎನ್ನುವ ಪ್ರಶ್ನೆಯೂ ಮೂಡುವಂತೆ ಆಗಿದೆ. ಸಿಹಿಗೆ ಅಪಘಾತ ಆದ ರೀತಿಯಲ್ಲಿ ತೋರಿಸಲಾಗಿದೆ. ಮುಂದೇನು ಎನ್ನುವ ಪ್ರಶ್ನೆ ಮೂಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.